newsfirstkannada.com

ಹಾರ್ದಿಕ್​ ಪಾಂಡ್ಯಗೆ ಇಂಗ್ಲೀಷ್​​ ಬರೋದಿಲ್ವಾ..? ಈ ಬಗ್ಗೆ ಇಂಟರೆಸ್ಟಿಂಗ್ ಸ್ಟೋರಿ ಹಂಚಿಕೊಂಡ ವಿರಾಟ್ ಕೊಹ್ಲಿ

Share :

Published August 8, 2023 at 11:13am

    ಟೀಮ್​ ಇಂಡಿಯಾದ ಪೋಸ್ಟರ್​​ ಬಾಯ್​ ಹಾರ್ದಿಕ್!

    ತಮ್ಮದೇ ಲೋಕದಲ್ಲಿ ವಿಹಾರಿಸುವ ಕಾಪ್ಟನ್​ ಪಾಂಡ್ಯ

    ವಿರಾಟ್ ಕೊಹ್ಲಿ ಬಿಚ್ಚಿಟ್ಟ ಸತ್ಯ ಇವತ್ತಿನ ಸಖತ್​ ಸ್ಟೋರಿ

ಟೀಮ್​ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ, ಆಫ್​ ದ ಫೀಲ್ಡ್​ನಲ್ಲಿ ಸಖತ್​ ಸ್ಟೈಲಿಶ್​ ಮ್ಯಾನ್​. ಆನ್​ಫೀಲ್ಡ್​ನಲ್ಲಿ ತಮ್ಮ ಆಟದಿಂದ ಶಹಬ್ಬಾಸ್​ಗಿರಿ ಗಿಟ್ಟಿಸಿಕೊಳ್ಳೋ ಹಾರ್ದಿಕ್​, ಆಫ್​ ದ ಫೀಲ್ಡ್​ನಲ್ಲಿ ತಮ್ಮ ವಿಚಿತ್ರ ವ್ಯಾಮೋಹದ ಕಾರಣಕ್ಕೆ ಸಹ ಆಟಗಾರರಿಂದ ಕಾಲೆಳಿಸಿಕೊಳ್ತಾರಂತೆ. ಅದ್ಯಾಕೆ ಅನ್ನೋದನ್ನ ಇವತ್ತಿನ ಸಖತ್​ ಸ್ಟೋರಿಯಲ್ಲಿ ನೋಡೋಣ.

ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಆನ್​ ಫೀಲ್ಡ್​ನಲ್ಲಿ ಎಷ್ಟು ಆ್ಯಕ್ಟಿವ್​ ಆಗಿರ್ತಾರೋ ಆಫ್​ ದ ಫೀಲ್ಡ್​ನಲ್ಲೂ ಅಷ್ಟೇ ಆ್ಯಕ್ಟಿವ್​. ಒಂದರ್ಥದಲ್ಲಿ ಟೀಮ್​ ಇಂಡಿಯಾದ ಪೋಸ್ಟರ್​​ ಬಾಯ್​ ಆಗಿ ಹಾರ್ದಿಕ್​ ಬಿಂಬಿತವಾಗಿದ್ದಾರೆ. ಡ್ರೆಸ್ಸಿಂಗ್​ ರೂಮ್​ನಲ್ಲಂತೂ ಹಾರ್ದಿಕ್​ ತಮ್ಮದೆ ಲೋಕದಲ್ಲಿ ವಿಹಾರಿಸುತ್ತಾರಂತೆ. ಹಲವು ಚಿತ್ರ-ವಿಚಿತ್ರವಾದ ಹವ್ಯಾಸಗಳನ್ನ ಹೊಂದಿರೋ ಹಾರ್ದಿಕ್​ಗೆ​, ಇಂಗ್ಲೀಷ್​​ ಮೇಲೆ ವಿಚಿತ್ರವಾದ ವ್ಯಾಮೋಹ ಹೊಂದಿದ್ದಾರೆ. ಇದೇ ಕಾರಣಕ್ಕೆ ಸೀನಿಯರ್​ ಆಟಗಾರರಿಂದ ಕಾಲೆಳಿಸಿಕೊಳ್ತಾರಂತೆ.

ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ

ಕುಂಗ್​ ಫು ಪಾಂಡ್ಯ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದಾಗ ಅತಿ ಹೆಚ್ಚು ಇಂಗ್ಲೀಷ್​​ ಹಾಡುಗಳನ್ನ ಕೇಳ್ತಾರಂತೆ. ಇದ್ರಲ್ಲಿ ಏನಿದೆ ವಿಶೇಷ.? ಎಲ್ರೂ ಕೇಳ್ತಾರೆ ಅಂತಾ ನೀವು ಕೇಳಬಹುದು. ಮ್ಯಾಟರ್​ ಏನಪ್ಪಾ ಅಂದ್ರೆ, ಹಾರ್ದಿಕ್​ಗೆ ಅಷ್ಟು ಸ್ಪಷ್ಟವಾಗಿ ಇಂಗ್ಲೀಷೇ ಬರಲ್ವಂತೆ. ಹಾಗಿದ್ರೂ, ಪಾಂಡ್ಯಾಗೆ ಇಂಗ್ಲೀಷ್​ ಹಾಡಿನ ಮೇಲೆ ವ್ಯಾಮೋಹ ಯಾಕಂದ್ರೆ, ಬೀಟ್ಸ್ ಅನ್ನೋದೆ ಉತ್ತರವಾಗಿದೆ​. ಇಂಗ್ಲೀಷ್​ ಹಾಡುಗಳಲ್ಲಿ ಬರೋ ಬೀಟ್ಸ್​ಗಳನ್ನ ಹಾರ್ದಿಕ್​ ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಾರಂತೆ. ಇದೇ ಕಾರಣಕ್ಕೆ ತಂಡದ ಸೀನಿಯರ್​ ಆಟಗಾರರು ಬರೋಡಾ ಬಾಯ್​ ಕಾಲೆಳೀತಾರಂತೆ. ಸಂದರ್ಶನವೊಂದರಲ್ಲಿ ವಿರಾಟ್​ ಕೊಹ್ಲಿ ಹೇಳಿಕೊಂಡಿರೋ ಇಂಟರೆಸ್ಟಿಂಗ್​ ವಿಚಾರವಿದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಪಾಂಡ್ಯಗೆ ಇಂಗ್ಲೀಷ್​​ ಬರೋದಿಲ್ವಾ..? ಈ ಬಗ್ಗೆ ಇಂಟರೆಸ್ಟಿಂಗ್ ಸ್ಟೋರಿ ಹಂಚಿಕೊಂಡ ವಿರಾಟ್ ಕೊಹ್ಲಿ

https://newsfirstlive.com/wp-content/uploads/2023/08/KOHLI_HARDHIK_PANDYA.jpg

Load More