ಯಶ್ ದಯಾಳ್ ಭಾರತ ಪರ ಆಡುವ ಬಿಗ್ ಡ್ರೀಮ್ ನನಸು
ಮಾನಸಿಕ ಖಿನ್ನತೆ..ಅವಮಾನ..ಸಂಕಷ್ಟದಲ್ಲಿ ಕೈಹಿಡಿದ RCB..!
RCB ಎಡಗೈ ವೇಗಿಯ ಲೈಫ್ ಬದಲಿಸಿದ್ದೇಗೆ..?
ಯಶ್ ದಯಾಳ್.. ಬೆಂಕಿ ಉಗುಳುವ ಬೌಲರ್. ಇಷ್ಟು ದಿನ ಈ ಯಂಗ್ಗಬ್ ಹೆಸರು ಡೊಮೆಸ್ಟಿಕ್ ಕ್ರಿಕೆಟ್ಗೆ ಸೀಮಿತವಾಗಿತ್ತು. ಆದ್ರೀಗ ಫಸ್ಟ್ಟೈಮ್ ಎಡಗೈ ವೇಗಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಇದಕ್ಕೆ ಕಾರಣ ಆರ್ಸಿಬಿ. ರೆಡ್ ಆರ್ಮಿಯ ಆ ಒಂದು ನಿರ್ಧಾರ, ಯಶ್ ದಯಾಳ್ ಟೀಮ್ ಇಂಡಿಯಾ ಕದ ತಟ್ಟಲು ಕಾರಣವಾಗಿದ್ದೇಗೆ?
ಕೊನೆಗೂ ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ 16 ಸದಸ್ಯರ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ಆಯ್ಕೆಗಾರರು ಹೆಚ್ಚು ಪ್ರಯೋಗಕ್ಕೆ ಮುಂದಾಗಿಲ್ಲ. ಬಹುತೇಕ ಇಂಗ್ಲೆಂಡ್ ಸರಣಿಯಲ್ಲಿ ಆಡಿದ ಆಟಗಾರರೇ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ 16 ಆಟಗಾರರ ಪೈಕಿ ಒಬ್ಬರ ಸರ್ಪ್ರೈಸ್ ಆಯ್ಕೆ ನಡೆದಿದೆ. ಯಂಗ್ ಬೌಲರ್ ಭಾರತ ತಂಡದಲ್ಲಿ ಮೊದಲ ಬಾರಿ ಅವಕಾಶ ಪಡೆದಿದ್ದು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ದರ್ಬಾರ್ ನಡೆಸಲು ಮುಂದಾಗಿದ್ದಾರೆ. ಅಷ್ಟಕ್ಕೂ ಆ ಸರ್ಪ್ರೈಸ್ ಎಲಿಮೆಂಟ್ ಮತ್ಯಾರು ಅಲ್ಲ, ಯಂಗ್ಗನ್ ಯಶ್ ದಯಾಳ್..!
ಇದನ್ನೂ ಓದಿ:‘ನನ್ನ ಫೋನ್ ಸ್ವಿಚ್ ಆಫ್ ಆಗುತ್ತೆ’ ವಿಜಯಲಕ್ಷ್ಮೀಗೆ ದರ್ಶನ್ ಅರೆಸ್ಟ್ ಆದ ವಿಚಾರ ಗೊತ್ತಾಗಿದ್ದು ಹೇಗೆ..?
ಯಶ್ ದಯಾಳ್ ಭಾರತ ಪರ ಆಡುವ ಬಿಗ್ ಡ್ರೀಮ್ ನನಸು
ಪ್ರತಿಯೊಬ್ಬ ಕ್ರಿಕೆಟಿಗನ ಬಿಗ್ ಡ್ರೀಮ್ ಅಂದ್ರೆ ಟೀಮ್ ಇಂಡಿಯಾ ಪ್ರತಿನಿಧಿಸೋದು. ವೇಗಿ ಯಶ್ ದಯಾಳ್ ಕೂಡ ಅಂತಹದ್ದೇ ಕನಸು ಕಂಡಿದ್ರು. ಇದೀಗ ಉತ್ತರ ಪ್ರದೇಶ ವೇಗಿಯ ಆ ಡ್ರೀಮ್ ಕನಸಾಗೋ ಟೈಮ್ ಬಂದಿದೆ. ಬಾಂಗ್ಲಾ ಟೆಸ್ಟ್ ಸರಣಿಗೆ ಆಯ್ಕೆಯಾಗಿರೋ ಯಶ್ ದಯಾಳ್, ಡೆಬ್ಯು ನಿರೀಕ್ಷೆಯಲ್ಲಿದ್ದಾರೆ. ವರ್ಷದ ಹಿಂದೆ ಖಳನಾಯಕನಾಗಿ ಗುರುತಿಸಿಕೊಂಡಿದ್ದ ಇದೇ ದಯಾಳ್, ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದು ಭಲೇ ಅನ್ನಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಆರ್ಸಿಬಿ. ರೆಡ್ ಆರ್ಮಿ ತೆಗೆದುಕೊಂಡ ಆ ಒಂದು ನಿರ್ಧಾರ ಯುವವೇಗಿ ಕ್ರಿಕೆಟ್ ಲೈಫ್ಅನ್ನೇ ಬದಲಿಸಿದೆ.
ಥ್ಯಾಂಕ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು..!
ಯಶ್ ದಯಾಳ್ ಇಂದು ಟಿಮ್ ಇಂಡಿಯಾಗೆ ಸೆಲೆಕ್ಟ್ ಆಗಿದ್ದಾರೆ ಅಂದ್ರೆ ಅದಕ್ಕೆ ಐಪಿಎಲ್ನ ಆರ್ಸಿಬಿ ತಂಡಕ್ಕೆ ಬಿಗ್ ಥ್ಯಾಂಕ್ಸ್ ಹೇಳಲೇಬೇಕು. 6,6,6,6,6.. ರಿಂಕು ಸಿಂಗ್ ಅನ್ನೋ ಬ್ಯಾಟಿಂಗ್ ಸುನಾಮಿ 2023ರ ಐಪಿಎಲ್ನಲ್ಲಿ ಸತತ 5 ಸಿಕ್ಸ್ ಚಚ್ಚಿ ಸೆನ್ಷೆಷನ್ ಸೃಷ್ಟಿಸಿದ್ರು. ಇದರಿಂದ ರಿಂಕು ಸಿಂಗ್ ಏನೋ ಹೀರೋ ಆದ್ರು. ಆದರೆ ವಿಲನ್ ಆಗಿದ್ದು ಬೌಲರ್ ಯಶ್ ದಯಾಳ್. ಬರೀ ಖಳನಾಯಕ ಅಷ್ಟೇ ಅಲ್ಲ. ಅವರ ಕರಿಯರ್ಗೆ ದೊಡ್ಡ ಡ್ಯಾಮೇಜ್ ಆಯ್ತು. ಸಾಕಷ್ಟು ನಿಂದನೆ ಜೊತೆ ಅಪಮಾನ ಎದುರಿಸಿದ್ರು. ಇದರಿಂದ ಹೊರಬರಲಾಗದೇ ಮಾನಸಿಕ ಖಿನ್ನತೆಗೆ ತುತ್ತಾದ್ರು. 7 ರಿಂದ 8 ಕೆಜಿ . ತೂಕ ಕಳೆದುಕೊಂಡ್ರುಹಲವು ತಿಂಗಳ ಕಾಲ ಸ್ಫರ್ಧಾತ್ಮಕ ಕ್ರಿಕೆಟ್ನಿಂದ ದೂರ ಸರಿದ್ರು. ಈ ಆಘಾತದ ನಡುವಲ್ಲೆ 5 ಸಿಕ್ಸರ್ ಚಚ್ಚಿಸಿಕೊಂಡ ಯಶ್ ದಯಾಳ್ರನ್ನ ಗುಜರಾತ್ ಟೈಟನ್ಸ್ ತಂಡ ರಿಲೀಸ್ ಮಾಡಿ ಬಿಗ್ ಶಾಕ್ ನೀಡ್ತು.
ಇದನ್ನೂ ಓದಿ:ಅಯ್ಯರ್ಗೆ ಡೋರ್ ಕ್ಲೋಸ್ ಸಂದೇಶ ಕೊಟ್ಟ ಬಿಸಿಸಿಐ; ವಿಲನ್ ಆಗಿದ್ದು ಮತ್ತೊಬ್ಬ ಮುಂಬೈ ಆಟಗಾರ..!
ಈ ಘಟನೆಯಿಂದ ದಯಾಳ್ ಮಾನಸಿಕವಾಗಿ ಜರ್ಝರಿತವಾದ್ರು. ಇನ್ನೇನು ಕ್ರಿಕೆಟ್ ಲೈಫ್ ಕೊನೆಯಾಯ್ತು ಅನ್ನೋವಾಗ ಅವರ ಬದುಕಿಗೆ ಬೆಳಕಾಗಿದ್ದು ಸಂಕಷ್ಟದಲ್ಲಿ ಆಸರೆಯಾಗಿದ್ದು ಇದೇ ಆರ್ಸಿಬಿ ತಂಡ. ಹೌದು, ಐದು ಸಿಕ್ಸರ್ ಹೊಡೆಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾದ ಎಡಗೈ ವೇಗಿಯನ್ನ 2024ರ ಹರಾಜಿನಲ್ಲಿ 5 ಕೋಟಿ ರೂಪಾಯಿ ನೀಡಿ ಖರೀದಿಸ್ತು. ಆರ್ಸಿಬಿಯ ಈ ನಿರ್ಧಾರ ದಯಾಳ್ ಬದುಕಿಗೆ ಹೊಸ ತಿರುವು ನೀಡ್ತು.
RCB ಪರ 14 ವಿಕೆಟ್.. ದುಲೀಪ್ ಟ್ರೋಫಿ ಶೈನಿಂಗ್..
ಕಳೆದ ಐಪಿಎಲ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿದ ಯಶ್ ದಯಾಳ್ ಫಸ್ಟ್ ಹಾಫ್ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ರು. ಆದ್ರೂ ಮ್ಯಾನೇಜ್ಮೆಂಟ್ ಬ್ಯಾಕ್ ಮಾಡ್ತು. ಸೆಕೆಂಡ್ ಹಾಫ್ನಲ್ಲಿ ಬೌನ್ಸ್ಬ್ಯಾಕ್ 14 ವಿಕೆಟ್ ಕಬಳಿಸಿ ಶೈನ್ ಆದ್ರು. ಪ್ರಸಕ್ತ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲೆ 4 ವಿಕೆಟ್ ಕಬಳಿಸಿ ಕಮಾಲ್ ಮಾಡಿದ್ರು. ಇದರಿಂದ ಇಂಪ್ರೆಸ್ ಆದ ಬಿಸಿಸಿಐ ಆಯ್ಕೆ ಸಮಿತಿ ಬಾಂಗ್ಲಾ ಟೆಸ್ಟ್ ಸರಣಿಗೆ ಸೆಲೆಕ್ಟ್ ಮಾಡಿದೆ. ಆದ್ರೆ ಆಡುವ ಹನ್ನೊಂದರ ಬಳಗದಲ್ಲಿ ಆರ್ಸಿಬಿ ಬೌಲರ್ಗೆ ಚಾನ್ಸ್ ಸಿಗುತ್ತಾ, ಇಲ್ವಾ ಅನ್ನೋದನ್ನ ಕಾದು ನೋಡೋಣ.
ಇದನ್ನೂ ಓದಿ:ದಿಗ್ಗಜರಿಂದ ಅಚ್ಚರಿಯ ಆಟ.. ಕೊಚ್ಚಿಹೋದ ನೀರಿಕ್ಷೆಗಳು.. ರೋಹಿತ್, ಗಂಭೀರ್ ಮುಂದೆ ಏನ್ಮಾಡ್ತಾರೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್