newsfirstkannada.com

ಜರ್ಮನಿ ಮಹಿಳಾ ಪ್ರತಿನಿಧಿಯ ಕೆನ್ನೆಗೆ ಮುತ್ತಿಡಲು ಮುಂದಾದ ವಿದೇಶಾಂಗ ಸಚಿವ! ವಿಡಿಯೋ ಇಲ್ಲಿದೆ

Share :

06-11-2023

    ಕ್ರೊಯೇಷಿಯಾದ ವಿದೇಶಾಂಗ ಸಚಿವನ ನಡೆತೆಗೆ ಕೆಂಡಾಮಂಡಲ

    ಅನಲೆನಾ ಬಿಯರ್ಬಾಕ್​ಗೆ ಮುತ್ತಿಡಲು ಮುಂದಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಸಮಸ್ಯೆ ಏನು ಎಂಬುದೇ ನನಗೆ ಗೊತ್ತಿಲ್ಲ ಎಂದ ಕ್ರೊಯೇಷಿಯಾದ ವಿದೇಶಾಂಗ ಸಚಿವ

ಜರ್ಮನಿಯ ಮಹಿಳಾ ಪ್ರತಿನಿಧಿಗೆ ಕ್ರೊಯೇಷಿಯಾದ ವಿದೇಶಾಂಗ ಸಚಿವ ಚುಂಬಿಸಲು ಯತ್ನಿಸಿದ ಘಟನೆ ಬರ್ಲಿನ್​ನಲ್ಲಿ ನಡೆದಿದೆ. ಸದ್ಯ ಈ ಸಂಗತಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

ಕ್ರೊಯೇಷಿಯಾದ ವಿದೇಶಾಂಗ ಸಚಿವ ಗಾರ್ಡನ್​​ ಗ್ರಿಲಿಕ್​ ರಾಡ್ಮನ್​​ ಅವರು ಜರ್ಮನ್​​ ಪ್ರತಿನಿಧಿ ಅನಲೆನಾ ಬಿಯರ್ಬಾಕ್​ ಅವರ ಕೆನ್ನೆಗೆ ಮುತ್ತಿಡಲು ಮುಂದಾಗಿದ್ದಾರೆ. ಇಯು ಸಮ್ಮೇಳದಲ್ಲಿ ಭಾಗವಹಿಸಿದ ಬಳಿಕ ಫೋಟೋಶೂಟ್​ ಮಾಡುವ ವೇಳೆ ಈ ಘಟನೆ ನಡೆದಿದೆ. ಅಂದಹಾಗೆಯೇ ವಿದೇಶಾಂಗ ಸಚಿವನ ಈ ನಡತೆಯ ದೃಶ್ಯ ಸಮೇತ ವೈರಲ್​ ಆಗಿದೆ.

ಇನ್ನು ಗಾರ್ಡನ್​​ ಗ್ರಿಲಿಕ್​ ರಾಡ್ಮನ್ 65 ವರ್ಷ ವಯಸ್ಸಿನವರಾಗಿದ್ದು, 42 ವರ್ಷ ಬಿಯರ್ಬಾಕ್​ ಜೊತೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅನೇಕರು ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಕ್ರೊಯೇಷಿಯಾ ವಿದೇಶಾಂಗ ಸಚಿವ ಇದಕ್ಕೆಲ್ಲ ಕ್ಯಾರೆ ಎನ್ನದೆ, ‘‘ಸಮಸ್ಯೆ ಏನು ಎಂಬುದೇ ಗೊತ್ತಿಲ್ಲ. ನಾವು ಯಾವಾಗಲು ಪರಸ್ಪರ ಆತ್ಮೀಯವಾಗಿ ಸ್ವಾಗತಿಸುತ್ತೇವೆ. ಇದನ್ನು ಯಾಕೆ ತಪ್ಪಾಗಿ ತೆಗೆದುಕೊಳ್ಳುತ್ತೀರಾ’’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜರ್ಮನಿ ಮಹಿಳಾ ಪ್ರತಿನಿಧಿಯ ಕೆನ್ನೆಗೆ ಮುತ್ತಿಡಲು ಮುಂದಾದ ವಿದೇಶಾಂಗ ಸಚಿವ! ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2023/11/Kiss.jpg

Load More