newsfirstkannada.com

×

Breaking News: ಛತ್ತೀಸ್​ಘಡ ಮತಗಟ್ಟೆಯಲ್ಲಿ ನಕ್ಸಲರ ಅಟ್ಟಹಾಸ; IED ಸ್ಫೋಟಿಸಿ ವಿಕೃತಿ

Share :

Published November 7, 2023 at 8:01am

    ಸ್ಫೋಟದ ತೀವ್ರತೆಗೆ ಓರ್ವ ಯೋಧ ಗಂಭೀರ

    ಛತ್ತೀಸ್​ಗಢದಲ್ಲಿ ಮೊದಲ ಹಂತದ ಚುನಾವಣೆ

    ಬಿಗಿ ಭದ್ರತೆಯಲ್ಲಿ ಇಂದು 20 ಕ್ಷೇತ್ರಗಳಿಗೆ ಮತದಾನ

ನಕ್ಸಲ್​ ಪೀಡಿತ ರಾಜ್ಯ ಛತ್ತೀಸ್​ಘಡದಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಇಂದು 20 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆತಂಕದ ವಿಚಾರ ಏನಂದರೆ ಸುಕ್ಮಾದಲ್ಲಿ ನಕ್ಸಲರು ಸ್ಫೋಟ ಮಾಡಿದ್ದು, ಚುನಾವಣಾ ಡ್ಯೂಟಿಯಲ್ಲಿದ್ದ ಯೋಧರು ಗಾಯಗೊಂಡಿದ್ದಾರೆ.

ನಕ್ಸಲರ ಕೃತ್ಯದಲ್ಲಿ CRPFನ ಕೋಬ್ರಾ ಬೆಟಾಲಿಯನ್​ ಓರ್ವ ಯೋಧ ಗಾಯಗೊಂಡಿದ್ದಾರೆ. ಸುಕ್ಮಾದ ಟೊಂಡಮರ್ಕ ಪ್ರದೇಶದಲ್ಲಿ IED (Improvised Explosive Devices) ಸ್ಫೋಟಿಸಿದ್ದಾರೆ. ಗಾಯಗೊಂಡಿರುವ ಯೋಧನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಛತ್ತೀಸಗಢದಲ್ಲಿ ಒಟ್ಟು ಎರಡು ಹಂತದಲ್ಲಿ ಮತದಾನ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಸುಗಮವಾಗಿರಲಿ ಎಂದು 25 ಸಾವಿರಕ್ಕೂ ಅಧಿಕ ಭದ್ರತಾ ಪಡೆಯನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ. ಇಷ್ಟೆಲ್ಲ ಭದ್ರತೆ ಒದಗಿಸಿದ್ದರೂ ನಕ್ಸಲರು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಛತ್ತೀಸ್​ಘಡ ಮತಗಟ್ಟೆಯಲ್ಲಿ ನಕ್ಸಲರ ಅಟ್ಟಹಾಸ; IED ಸ್ಫೋಟಿಸಿ ವಿಕೃತಿ

https://newsfirstlive.com/wp-content/uploads/2023/11/CRPF-jawan.jpg

Load More