newsfirstkannada.com

ವಿಜಯದ ನಡುವೆ ಮಾಹಿ ಮಹತ್ವದ ನಿರ್ಧಾರ; ಅಭಿಮಾನಿಗಳಿಗಾಗಿ ಸರ್ಜರಿಗೆ ಮುಂದಾದ ಧೋನಿ

Share :

01-06-2023

    ಸರ್ಜರಿ ಮಾಡಲು ಮುಂದಾದ ಧೋನಿ

    ಅಭಿಮಾನಿಗಳಿಗೆ ಧೋನಿ ಮಹತ್ವದ ನಿರ್ಧಾರ

    ನಿರ್ಧಾರಕ್ಕೆ ತಕ್ಕಂತೆ ತಾಕತ್ತು ತೋರಿಸಲಿದ್ದಾರೆ ಧೋನಿ

ಐಪಿಎಲ್​ ಮುಗಿದು 2 ದಿನ ಕಳೀತು. ಆದ್ರೂ, ಚೆನ್ನೈ ಸೂಪರ್​ ಕಿಂಗ್ಸ್​ ಕ್ಯಾಂಪ್​ನಲ್ಲಿ ಸಂಭ್ರಮಾಚರಣೆ ಮಾತ್ರ ನಿಂತಿಲ್ಲ. ಆಟಗಾರರು, ಫ್ಯಾನ್ಸ್​​ ಇನ್ನೂ ಸಂಭ್ರಮದ ಕಡಲಲ್ಲೇ ತೇಲ್ತಿದ್ದಾರೆ. ಆದ್ರೆ, ಅದಾಗಲೇ ಕ್ಯಾಪ್ಟನ್​ ಧೋನಿ ನೆಕ್ಸ್ಟ್​​​ ಸೀಸನ್​ ಅನ್ನ ಟಾರ್ಗೆಟ್​​ ಮಾಡಿದ್ದಾರೆ. ಮುಂದಿನ ಆವೃತ್ತಿ ಐಪಿಎಲ್​ಗೆ ಈಗಲೇ ದಿಟ್ಟ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​ 16ಕ್ಕೆ ಅದ್ದೂರಿ ತೆರೆ ಬಿದ್ದು 2 ದಿನಗಳೇ ಉರುಳಿದ್ವು. ಆದ್ರೂ, ಚೆನ್ನೈ ತಂಡ ಐಪಿಎಲ್​ ಕಿರೀಟಕ್ಕೆ ಮುತ್ತಿಕ್ಕಿದ ಸಂಭ್ರಮವೇ ಕ್ರಿಕೆಟ್​​ ಲೋಕವನ್ನ ಆವರಿಸಿದೆ. ಜಡೇಜಾ ಹೊಡೆದ ಆ ವಿನ್ನಿಂಗ್​​ ಶಾಟ್​​, ಡಗೌಟ್​ನಲ್ಲಿದ್ದ ಆಟಗಾರರು ಮೈದಾನಕ್ಕೆ ನುಗ್ಗಿದ ರೀತಿ, ಜಡೇಜಾರನ್ನ ಭಾವುಕ ಧೋನಿ ಎತ್ತಾಡಿದ ಕ್ಷಣ. ಆನಂದಭಾಷ್ಪದಿಂದ ತುಂಬಿದ ಧೋನಿಯ ಕಣ್ಣುಗಳು. ಎಲ್ಲವೂ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ.

ಅಹಮದಾಬಾದ್ನಿಂದ ಚೆನ್ನೈಗೆ ಸಂಭ್ರಮಾಚರಣೆ ಶಿಫ್ಟ್.!

ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಗೆದ್ದ ಬಳಿಕ ಆರಂಭವಾದ ಸಂಭ್ರಮಾಚರಣೆ ಇನ್ನೂ ನಿಂತಿಲ್ಲ.. ನಮೋ ಮೈದಾನದಲ್ಲಿ ಆಟಗಾರರು ಸೆಲೆಬ್ರೇಷನ್​ ಮಾಡಿ ಸಂಭ್ರಮಿಸಿದ ಚೆನ್ನೈ ಕ್ಯಾಂಪ್​, ಇದೀಗ ತವರಿನ ಅಭಿಮಾನಿಗಳೆದುರು ಸಂಭ್ರಮಿಸಲು ವಿಶೇಷ ಪ್ಲಾನ್​ ಮಾಡ್ತಿದೆ. ಅದಕ್ಕಾಗಿ ತಲಾ ಧೋನಿಯೂ ಚೆನ್ನೈಗೆ ಬಂದಿಳಿದಿದ್ದಾರೆ. ಆದ್ರೆ, ಸೆಲಬ್ರೇಷನ್​ ಹೇಗಿರುತ್ತೆ ಅನ್ನೋದು ಮಾತ್ರ ಗುಟ್ಟಾಗೆ ಉಳಿದಿದೆ.

ಸಂಭ್ರಮಾಚರಣೆ ನಡುವೆಯೇ ಧೋನಿ ಮಹತ್ವದ ನಿರ್ಧಾರ.!

ಒಂದೆಡೆ ಇಡೀ ತಂಡ ಸೆಲಬ್ರೇಷನ್​ ಮೂಡ್​​ನಲ್ಲಿದ್ರೆ, ಕ್ಯಾಪ್ಟನ್​ ಧೋನಿ ಬೇರೆಯದ್ದೇ ಯೋಚನೆಯಲ್ಲಿದ್ದಾರೆ. ಈ ಸೀಸನ್​ನಲ್ಲಿ ಟೂರ್ನಿಯೂ ಮುಗೀತು. ಟ್ರೋಫಿನೂ ಗೆದ್ದಾಯ್ತು. ಈಗೇನಿದ್ರೂ ಮುಂದಿನ ಟಾರ್ಗೆಟ್​ ನೆಕ್ಸ್ಟ್​ ಐಪಿಎಲ್​ ಅನ್ನೋದು ಧೋನಿ ಮಾತಾಗಿದೆ. ಇದಕ್ಕಾಗಿ ಈಗಾಗಲೇ ದಿಟ್ಟ ಹೆಜ್ಜೆಯನ್ನೂ ಮಾಹಿ ಇಟ್ಟಿದ್ದಾರೆ.

ಸರ್ಜರಿಗೆ ಒಳಗಾಗಲು ಕ್ಯಾಪ್ಟನ್​ ಧೋನಿ ನಿರ್ಧಾರ.!

ಈ ಸೀಸನ್​ನ ಟೂರ್ನಿಯೇ ಧೋನಿ ಪಾಲಿನ ಕೊನೆಯ ಟೂರ್ನಿ ಎಂದು ಹೇಳಲಾಗಿತ್ತು. ಆದ್ರೆ, ಫೈನಲ್​ ಪಂದ್ಯ ಕೊನೆಯಲ್ಲಿ ಮಾತನಾಡಿರೋ ಮುಂದಿನ ಸೀಸನ್​​ನ ಆಡೋ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ಎಲ್ಲವೂ ಫಿಟ್​​ನೆಸ್​​ ಮೇಲೆ ನಿರ್ಧಾರ ಎಂದೂ ಹೇಳಿದ್ದಾರೆ. ಹೀಗಾಗಿಯೇ ಟ್ರೋಫಿ ಗೆದ್ದ ಎರಡೇ ದಿನಕ್ಕೆ ಸರ್ಜರಿಗೆ ಒಳಗಾಗೋ ಮಹತ್ವದ ನಿರ್ಧಾರವನ್ನ ಪ್ರಕಟಿಸಿದ್ದಾರೆ.

ಭಾರತೀಯ ಕ್ರಿಕೆಟ್​​ನಲ್ಲಿ ಫಿಟ್​ನೆನ್​​ಗೆ​​ ಮುನ್ನುಡಿ ಬರೆದಿದ್ದೆ ಎಮ್​.ಎಸ್​ ಧೋನಿ.. ಆದ್ರೆ, ಅಂತಾ ಧೋನಿಯ ಫಿಟ್​ನೆಸ್​ ಬಗ್ಗೆ ಈ ಸೀಸನ್​ನ ಐಪಿಎಲ್​ನಲ್ಲಿ ಪ್ರಶ್ನೆಗಳು ಎದ್ವು.. ಟೂರ್ನಿಯ ಆರಂಭದಿಂದ ಅಂತ್ಯದವರೆಗೆ ಧೋನಿ, KNEE INJURY ಯಿಂದ ಬಳಲಿದ್ರು. ಆದ್ರೂ, ಆ ಅಸಾಧ್ಯ ನೋವಿನ ನಡುವೆಯೇ 16 ಪಂದ್ಯಗಳಲ್ಲಿ ಕಣಕ್ಕಿಳಿದು ಹೋರಾಡಿದ್ರು. ಟ್ರೋಫಿ ಗೆಲುವಿನ ವರೆಗೂ ನೋವಿನ ನಡುವೆ ಕೆಚ್ಚೆದೆಯ ಹೋರಾಟ ನಡೆಸಿದ ಧೋನಿ ಇದೀಗ ಗಾಯಕ್ಕೆ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ.

ಧೀರೂಭಾಯ್​ ಅಂಬಾನಿ ಆಸ್ಪತ್ರೆಯಲ್ಲಿ ಸರ್ಜರಿ.!

ಇಂಜುರಿಯಾಗಿದ್ರೂ ಕೂಡ ಮೈದಾನಕ್ಕಿಳಿದಿದ್ದ ಧೋನಿ, ಹೆಚ್ಚು ಕಾಲ ಬ್ಯಾಟಿಂಗ್​ ಮಾಡಲಿಲ್ಲ. ಆದ್ರೆ ವಿಕೆಟ್​ ಕೀಪರ್​ ಆಗಿ ದೀರ್ಘಕಾಲ ಮೈದಾನದಲ್ಲಿ ಕಳೆದ್ರು. ನೀ ಕ್ಯಾಪ್​ ಧರಿಸಿ ಧೋನಿ ಆಡಿದ್ರೂ ಕೂಡ, ಇಡೀ ಇನ್ನಿಂಗ್ಸ್​​ ಪೂರ್ತಿ ಕಾಲಿನ ಮೇಲೆ ಭಾರ ಬಿಟ್ಟಿದ್ದು, ಕೀಪಿಂಗ್​ ವೇಳೆ ಹಲವು ಭಾರಿ ಡೈವ್​ ಮಾಡಿದ ಪರಿಣಾಮ ಗಾಯ ಇನ್ನಷ್ಟು ಉಲ್ಭಣಿಸಿದೆ. ಹೀಗಾಗಿ ಸರ್ಜರಿ ಅನಿವಾರ್ಯವಾಗಿದ್ದು, ಮುಂಬೈನ ಧೀರೂಭಾಯ್​ ಅಂಬಾನಿ ಆಸ್ಪತ್ರೆಯಲ್ಲಿ ಧೋನಿ, ಸರ್ಜರಿಗೆ ಒಳಗಾಲಿದ್ದಾರೆ ಎನ್ನಲಾಗಿದೆ. ಈಗಾಗಲೇ ವೈದ್ಯರ ಸಂಪರ್ಕ ಮಾಡಲಾಗಿದ್ದು, ಮುಂದಿನ ಒಂದು ವಾರದೊಳಗೆ ಧೋನಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ.

ಅಭಿಮಾನಿಗಳ ಅಭಿಮಾನಕ್ಕೆ ಕರಗಿದ ಧೋನಿ..!

ಈ ಬಾರಿ ಐಪಿಎಲ್​ನಲ್ಲಿ ನಡೆದಿದ್ದು ಧೋನಿ ಜಾತ್ರೆ. ಧೋನಿ ಹೋದಲ್ಲಿ, ಬಂದಲ್ಲಿ ಎಲ್ಲೆಡೆ ಯೆಲ್ಲೋ ಜೆರ್ಸಿಗಳು ರಾರಾಜಿಸಿದ್ವು. ಬೌಂಡರಿ, ಸಿಕ್ಸರ್​​ಗಳ ಆರ್ಭಟಕ್ಕಿಂತ ಮಹೇಂದ್ರನ ಮೇನಿಯಾನೇ ಜೋರಾಗಿ ನಡೀತು. ಅಭಿಮಾನಿಗಳ ಈ ಅಭಿಮಾನ ಕಂಡು ಧೋನಿಯೇ ಭಾವುಕರಾಗಿ ಬಿಟ್ರು.. ನಿವೃತ್ತಿ ತೆಗೆದುಕೊಳ್ಳೋ ನಿರ್ಧಾರದಿಂದ ಹಿಂದೆ ಸರಿದಿದ್ದಕ್ಕೂ ಇದೇ ಕಾರಣ…

ಒಟ್ಟಿನಲ್ಲಿ, ಮುಂದಿನ ಸೀಸನ್​ ಆಡೋ ನಿರ್ಧಾರ ಮಾಡಿರೋ ಮಾಹಿ, ಅಷ್ಟರೊಳಗೆ ಫಿಟ್ & ಫೈನ್​ ಆಗೋ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಸರ್ಜರಿ ಬಳಿಕ ಧೋನಿ ಎಷ್ಟರ ಮಟ್ಟಿಗೆ ಫಿಟ್​ ಆಗ್ತಾರೆ ಅನ್ನೋದೆ ಸದ್ಯಕ್ಕಿರೋ ಕುತೂಹಲ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ವಿಜಯದ ನಡುವೆ ಮಾಹಿ ಮಹತ್ವದ ನಿರ್ಧಾರ; ಅಭಿಮಾನಿಗಳಿಗಾಗಿ ಸರ್ಜರಿಗೆ ಮುಂದಾದ ಧೋನಿ

https://newsfirstlive.com/wp-content/uploads/2023/06/Dhoni-11.jpg

Load More