newsfirstkannada.com

CSK ಗೆದ್ದರೆ ‘ಗುಜರಾತ್ ಮಾಡೆಲ್’ ವಿರುದ್ಧ ‘ಡಿಎಂಕೆ ಮಾಡೆಲ್’ ಗೆಲುವಾ? ಚೆನ್ನೈಗೆ ಗೆಲುವು ತಂದ್ಕೊಟ್ಟಿದ್ದು BJP ಕಾರ್ಯಕರ್ತನಾ?

Share :

31-05-2023

  ತಮಿಳುನಾಡು ರಾಜಕೀಯದಲ್ಲಿ IPL ರಾಜಕೀಯ..!

  ಡಿಎಂಕೆ ಬಣ್ಣನಿಗೆ ರೊಚ್ಚಿಗೆದ್ದ ಬಿಜೆಪಿಯ ಅಣ್ಣಾಮಲೈ..!

  ಅಪ್​ಸೆಟ್ ಆಯ್ತು ಕ್ರೀಡಾಲೋಕ, ಮುನಿಸಿಕೊಂಡ್ರು ಫ್ಯಾನ್ಸ್..!

IPL-2023: 52 ದಿನಗಳು.. 70 ಪಂದ್ಯಗಳು..12 ಸ್ಥಳಗಳು.. 10 ತಂಡಗಳು.. ದೇಶದ ಪ್ರಮುಖ 12 ಕ್ರೀಡಾಂಗಣದಲ್ಲಿ ನಡೆದ ‘ಕ್ರಿಕೆಟ್ ಹಬ್ಬ’ವನ್ನು ದೇಶವಾಸಿಗಳು ಕಣ್ತುಂಬಿಕೊಂಡರು. ಇಲ್ಲಿ ಭಾಷೆ ಮತ್ತು ರಾಜ್ಯ ಎಂಬ ಗಡಿಯನ್ನೂ ಮೀರಿ ತಮ್ಮ ನೆಚ್ಚಿನ ಆಟಗಾರರಿಗೆ, ನೆಚ್ಚಿನ ತಂಡಕ್ಕೆ ಬೆಂಬಲ ನೀಡಿ ಸಂಭ್ರಮಿಸಿದರು. ಸೋತಾಗ ಮುಂದಿನ ‘ಬಾರಿ ಕಪ್ ನಮ್ದೇ’ ಎಂದರೆ, ಗೆದ್ದಾಗ ‘ಈ ಸಲ ಕಪ್ ನಮ್ದೆ’ ಎಂದು ಬೀಗಿದ್ದಾರೆ ಕ್ರಿಕೆಟ್ ಪ್ರೇಮಿಗಳು, ಕ್ರೀಡಾಭಿಮಾನಿಗಳು. ಪ್ರತಿ ಪಂದ್ಯದ ಕ್ಷಣವನ್ನೂ ಅನುಭವಿಸಿ ಸೋಲು, ನೋವುಗಳನ್ನು ಒಂದೇ ತಕ್ಕಡಿಯಲ್ಲಿ ಸ್ವೀಕರಿಸಿ ಕ್ರೀಡಾ ಪ್ರೇಮಿಗಳು ಪ್ರಭುದ್ಧತೆ ಮೆರೆದರೆ ತಮಿಳುನಾಡು ರಾಜಕೀಯದಲ್ಲಿ ಕೊಳಕು ಕೆಸರೆರಚಾಟ ಶುರುವಾಗಿದೆ. ಈ ರೀತಿಯ ಹೊಸಲು ಮುಂದೊಂದು ದಿನ ಕ್ರೀಡಾ ಜಗತ್ತಿಗೆ ಅಪಾಯವನ್ನು ತಂದೊಡ್ಡಿದರೂ ಅಚ್ಚರಿಯೇನಿಲ್ಲ!!

ಹೌದು, ಮೊನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​, ಗುಜರಾತ್ ತಂಡವನ್ನು ಕೊನೆ ಕ್ಷಣದಲ್ಲಿ ರೋಚಕವಾಗಿ ಬಗ್ಗು ಬಡಿದು ಸತತ 5ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಚೆನ್ನೈ ಗೆದ್ದ ಬೆನ್ನಲ್ಲೇ, ಸಿಎಸ್​ಕೆಗೆ ಹಾಗೂ ಕ್ಯಾಪ್ಟನ್ ಧೋನಿಗೆ ದೇಶಾದ್ಯಂತ ಇರುವ ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಕ್ಯಾಪ್ಟನ್ ಧೋನಿಯನ್ನು ಮತ್ತೊಮ್ಮೆ ಆರಾಧಿಸಿದರು. ಸಿಎಸ್​ಕೆಯನ್ನು ಹಾಡಿ ಹೊಗಳಿದರು. ಆದರೆ, ತಮಿಳುನಾಡು ರಾಜಕಾರಣದಲ್ಲಿ ಸಿಎಸ್​ಕೆ ಗೆಲುವು ರಾಜಕೀಯ ಸ್ವರೂಪ ಪಡೆದುಕೊಂಡಿರೋದು ಬೇಸರದ ಸಂಗತಿ.

ಡಿಎಂಕೆ vs ಅಣ್ಣಾಮಲೈ..!

ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡಕ್ಕೆ ಆಗಿರುವ ಸೋಲನ್ನು ಹಾಗೂ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಗೆಲುವನ್ನು ಮೋದಿ ಹಾಗೂ ಎಂ.ಕೆ.ಸ್ಟಾಲಿನ್ ಆಡಳಿತಕ್ಕೆ ಹೋಲಿಸಿ ಗೇಲಿ ಮಾಡುವ ಮೂಲಕ ಡಿಎಂಕೆ ಹೊಸ ‘ರಾಜಕೀಯ ಯುದ್ಧ’ಕ್ಕೆ ನಾಂದಿ ಹಾಡಿತು. DMK ಸೋಶಿಯಲ್ ಮೀಡಿಯಾ ವಿಭಾಗದ ಸದಸ್ಯರೊಬ್ಬರ ಈ ಬಣ್ಣನೆ, ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೆಂಗಣ್ಣಿಗೆ ಗುರಿಯಾಯ್ತು. ನಂತರ ನಡೆದಿದ್ದೆಲ್ಲ ರಾಜಕೀಯದ ಸಣ್ಣತನದ ಪರಮಾವಧಿಗಳು!

DMK ಹೇಳಿದ್ದೇನು..?

‘ಗುಜರಾತ್ ಮಾಡೆಲ್ ವಿರುದ್ಧ ದ್ರಾವಿಡ್ ಮಾಡೆಲ್​ನ ಗೆಲುವು’ ಎಂದು ಡಿಎಂಕೆ ಬಣ್ಣಿಸಿತ್ತು. ಈ ಮೂಲಕ ಸಿಎಸ್​ಕೆ ತಂಡಕ್ಕೆ ಸಿಕ್ಕ ಅದ್ಭುತ ಗೆಲುವನ್ನು, ಪ್ರಧಾನಿ ನರೇಂದ್ರ ಮೋದಿಯ ‘ಗುಜರಾತ್ ಮಾಡೆಲ್’ ವಿರುದ್ಧ ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್​​ ಅವರ ‘ದ್ರಾವಿಡ್ ಮಾಡೆಲ್’ ಗೆದ್ದಿದೆ, ಉತ್ತರವನ್ನು ದಕ್ಷಿಣ ಸೋಲಿಸಿದೆ. ಮಾತ್ರವಲ್ಲ, ತಮಿಳುನಾಡಿನ ಕ್ರೀಡಾಮಂತ್ರಿ ‘ಉದಯನಿಧಿ ಸ್ಟಾಲಿನ್​ಗೆ ಸಿಕ್ಕ ವಿಕ್ಟರಿ’ ಅನ್ನೋ ಮೂಲಕ ‘ಕ್ರೀಡಾ ಗೆಲುವಿಗೆ’ ರಾಜಕೀಯ ಬಣ್ಣ ಕಟ್ಟಿತ್ತು.

ಡಿಎಂಕೆಯ ಈ ಬಣ್ಣನೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ದೇಶಾದ್ಯಂತ ಡಿಎಂಕೆಯ ಹೋಲಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ‘ದ್ರಾವಿಡ್ ಮಾಡೆಲ್’ ಹೋಲಿಕೆಯನ್ನು ಟೀಕಿಸಿ, ಸಿಎಸ್​ಕೆ ಗೆಲುವು ಹಾಗೂ ಗುಜರಾತ್ ಟೈಟನ್ಸ್ ಸೋಲನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅಲ್ಲಿನ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ‘ಸಿಎಸ್​​ಕೆಯನ್ನು ಗೆಲ್ಲಿಸಿದ್ದು ಬಿಜೆಪಿ ಕಾರ್ಯರ್ತ’ ಎಂದಿದ್ದಾರೆ.

‘ರವೀಂದ್ರ ಜಡೇಜಾ BJP ಕಾರ್ಯಕರ್ತ’..!

‘ಗುಜರಾತ್ ಮಾಡೆಲ್’, ಡಿಎಂಕೆ ಮಾಡೆಲ್’ ವಿಚಾರಕ್ಕೆ ಗರಂ ಆಗಿ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ‘ಕೊನೆಯ ಎರಡು ಬಾಲ್​ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ಸಿಎಸ್​ಕೆಗೆ ಗೆಲುವನ್ನು ಯಾರು ತಂದು ಕೊಟ್ಟರೋ, ಅವರು ಬಿಜೆಪಿ ಕಾರ್ಯಕರ್ತ. ಜಡೇಜಾ ಬಿಜೆಪಿ ಕಾರ್ಯಕರ್ತ. ಅವರ ಪತ್ನಿ ಬಿಜೆಪಿಯ ಶಾಸಕಿ. ಜಡೇಜಾ ಗುಜರಾತಿನವರು. ತಮಿಳುನಾಡಿನವನಾದ ನನಗೆ ಹೆಮ್ಮೆ ಇದೆ. ಗುಜರಾತ್ ತಂಡದಲ್ಲಿ ಸಿಎಸ್​​ಕೆ ಗಿಂತ ಹೆಚ್ಚು ಮಂದಿ ತಮಿಳು ಆಟಗಾರರಿದ್ದಾರೆ. ಅವರು ಎಲ್ಲಿಯೇ ಇರಲಿ ನನಗೆ ಖುಷಿ ಇದೆ. ಅದನ್ನು ಕೊಂಡಾಡುತ್ತೇನೆ. ಗುಜರಾತ್ ಪರ 96 ರನ್​ ಸಿಡಿಸಿದ ನಮ್ಮದೇ ರಾಜ್ಯದ ಆಟಗಾರನನ್ನು ತಮಿಳಿಗರು ಯಾವತ್ತೂ ಮರೆಯಬಾರದು. ಸಿಎಸ್​ಕೆ ತಂಡದಲ್ಲಿ ಯಾರೊಬ್ಬರೂ ತಮಿಳರು ಇಲ್ಲದಿದ್ದರೂ ನಾವು ಸಂಭ್ರಮಿಸಿದ್ದೇವೆ. ಯಾಕಂದರೆ ಅದು ಧೋನಿ. ಯಾರು ವಿನ್ನಿಂಗ್ ಸ್ಕೋರ್ ಹೊಡೆದು ತಂಡಕ್ಕೆ ಗೆಲುವು ತಂದು ಕೊಟ್ಟರೋ, ಅವರು ಬಿಜೆಪಿ ಕಾರ್ಯಕರ್ತ. ಇದನ್ನು ತಮಿಳುನಾಡಿನ ಜನರು ಮರೆಯಬಾರದು. ತಮಿಳುನಾಡಿನಲ್ಲಿ 2024ರಂದು ಅದೂ ಆಗಲಿದೆ. ಈ ವಿಚಾರವನ್ನು ಡಿಎಂಕೆ ಸಚಿವರು ಮತ್ತು ಬೆಂಬಲಿಗರು ನೋಡಲಿದ್ದಾರೆ ಅಂತಾ ಹರಿಹಾಯ್ದಿದ್ದಾರೆ.

ಅಣ್ಣಾಮಲೈ ಯಾವಾಗ ಸಿಎಸ್​ಕೆ ಬಿಜೆಪಿ ಕಾರ್ಯಕರ್ತ ಗೆಲುವು ತಂದುಕೊಟ್ಟ ಎಂದು ಹೇಳಿದರೋ, ಆಗಲೇ, ಈ ವಿಚಾರ ಮತ್ತಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಡಿಎಂಕೆ ಕಡೆಯಿಂದ ಬಂದ ಹೇಳಿಕೆ ಮತ್ತು ಅಣ್ಣಾಮಲೈ ಅವರ ಸಮರ್ಥನೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ. ರಾಜಕೀಯ ಸರಿ, ತಪ್ಪುಗಳು ಏನೇ ಇದ್ದರೂ ಐಪಿಎಲ್ ಎಂಬ ಮನರಂಜನೆಯ ಜಾತ್ರೆಯಲ್ಲಿ ಬಿಜೆಪಿ-ಡಿಎಂಕೆ ಕ್ರೆಡಿಟ್ ಪಡೆಯಲು ಮುಂದಾಗಿರೋದು ನಾಚಿಕೆಗೇಡು.

ಭಾಷೆ, ರಾಜ್ಯ, ಗಡಿಯನ್ನೂ ಮೀರಿದ ಕ್ರೀಡೆಗೆ, ಕ್ರೀಡಾ ಪ್ರೇಮಿಗಳಿಗೆ, ಕ್ರೀಡಾಪಟುಗಳ ಆರಾಧಕರಿಗೆ ಈ ರೀತಿಯ ಹೊಲಸು ರಾಜಕೀಯ ಆಘಾತವನ್ನುಂಟು ಮಾಡ್ತಿದೆ. ಐಪಿಎಲ್​ ತಂಡವನ್ನು ಕೇವಲ ಫ್ರಾಂಚೈಸಿಯಾಗಿಯೇ ನೋಡಬೇಕೆ ಹೊರತು, ಅಲ್ಲಿ ಭಾಷೆ, ರಾಜ್ಯ, ಗಡಿಯನ್ನು ಎಳೆದು ತಂದರೆ ಅದು ನಮ್ಮೊಳಗಿನ ಕ್ರೀಡಾಭಿಮಾನದ ಅಧಃಪತನವಷ್ಟೇ. ಕೀಳು ರಾಜಕೀಯದ ಸಣ್ಣತನಷ್ಟೇ..!

ವಿಶೇಷ ಬರಹ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

CSK ಗೆದ್ದರೆ ‘ಗುಜರಾತ್ ಮಾಡೆಲ್’ ವಿರುದ್ಧ ‘ಡಿಎಂಕೆ ಮಾಡೆಲ್’ ಗೆಲುವಾ? ಚೆನ್ನೈಗೆ ಗೆಲುವು ತಂದ್ಕೊಟ್ಟಿದ್ದು BJP ಕಾರ್ಯಕರ್ತನಾ?

https://newsfirstlive.com/wp-content/uploads/2023/05/DMK.webp

Load More