ಡೆಲ್ಲಿ ವಿರುದ್ಧ ಚೆನ್ನೈ ತಂಡಕ್ಕೆ ಭರ್ಜರಿ ಜಯ
ಪ್ಲೇ ಆಫ್ಗೆ ಎಂ.ಎಸ್ ಧೋನಿ ಪಡೆ ಎಂಟ್ರಿ!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿಗೆ ಸೋಲು
ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 77 ರನ್ ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಪ್ಲೇ ಆಫ್ಗೆ ತನ್ನ ಸ್ಥಾನವನ್ನು ಖಚಿತ ಮಾಡಿಕೊಂಡಿದೆ.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223 ರನ್ ಕಲೆ ಹಾಕಿತ್ತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ಗೆ ಬೃಹತ್ ಟಾರ್ಗೆಟ್ ಕೊಟ್ಟಿತ್ತು. ಸಿಎಸ್ಕೆ ಪರ ಓಪನರ್ ಆಗಿ ಬಂದ ರುತುರಾಜ್ ಗಾಯಕ್ವಾಡ್ 50 ಬಾಲ್ನಲ್ಲಿ 7 ಸಿಕ್ಸರ್, 3 ಫೋರ್ ಸಮೇತ 79 ರನ್ ಸಿಡಿಸಿದ್ರು. ಹಾಗೆಯೇ ಗಾಯಕ್ವಾಡ್ಗೆ ಸಾಥ್ ನೀಡಿದ ಕಾನ್ವೇ 52 ಬಾಲ್ನಲ್ಲಿ 3 ಸಿಕ್ಸರ್, 11 ಫೋರ್ನಿಂದ 87 ರನ್ ಚಚ್ಚಿದ್ರು. ದುಬೆ 22, ಜಡೇಜಾ 20 ರನ್ ಗಳಿಸಿದ ಪರಿಣಾಮ ಚೆನ್ನೈ ಬಿಗ್ ಸ್ಕೋರ್ ಕಲೆ ಹಾಕಲು ಸಾಧ್ಯವಾಯ್ತು.
ಇನ್ನು, ಚೆನ್ನೈ ನೀಡಿದ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಕ್ಯಾಪ್ಟನ್ ವಾರ್ನರ್ 58 ಎಸೆತಗಳಲ್ಲಿ 5 ಸಿಕ್ಸರ್, 7 ಫೋರ್ಗಳ ಸಮೇತ 86 ರನ್ ಬಾರಿಸಿದರು. ಯಶ್ ದುಲ್ 13, ಅಕ್ಷರ್ ಪಟೇಲ್ 15 ರನ್ ಗಳಿಸಿದ ಪರಿಣಾಮ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 146 ರನ್ ಗಳಿಸಿ ಸೋತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ