newsfirstkannada.com

ಕಾಂಗ್ರೆಸ್-ಬಿಜೆಪಿ ಮಧ್ಯೆ ಮುಂದುವರಿದ ಗುತ್ತಿಗೆ ಗುದ್ದಾಟ; ಡಿಕೆಶಿಯನ್ನೇ ಟಾರ್ಗೆಟ್ ಮಾಡಿ ಸಿ.ಟಿ.ರವಿ ವಾಗ್ದಾಳಿ!

Share :

14-08-2023

  ಡಿಸಿಎಂ ಡಿಕೆಶಿ ವಿರುದ್ಧ ಸಮರಕ್ಕೆ ನಿಂತ ಸಿ.ಟಿ ರವಿ!

  ಬಿಲ್​​​ಗೆ ಬಡಿದಾಟ, ಗುತ್ತಿಗೆದಾರರಿಗೆ ಭರ್ಜರಿ ಬಲ!

  ಕಾಂಗ್ರೆಸ್​ ಶಾಸಕರು ವಸೂಲಿ ಮಾಡ್ತಿದ್ದಾರೆ ಅಂತ ಕಿಡಿ

ಕಾಂಗ್ರೆಸ್​​ ಅಧಿಕಾರಕ್ಕೆ ಬಂದು ಮೂರು ತಿಂಗಳೂ ಕಳೆದಿಲ್ಲ. ಆಗಲೇ ಕಮಿಷನ್​​ ಆರೋಪ ‘ಕೈ’ಗೆ ಸುತ್ತಿಕೊಂಡಿದೆ. ಬಿಜೆಪಿ ನಾಯಕರ ನಿತ್ಯ ದಾಳಿಗೆ ಕಾಂಗ್ರೆಸ್​​​ ನಿರುತ್ತರವಾಗುತ್ತಿದೆ. ತನಿಖೆ ಬಳಿಕವೇ ಬಿಲ್​​​​ ರಿಲೀಸ್​​ ಅಂತ ಹೇಳುತ್ತಿದ್ದಾರೆ. ಬಿಜೆಪಿ ಇದನ್ನೇ ಕಮಿಷನ್​​​ಗಾಗಿ ಅಂತ ಪರಿವರ್ತಿಸಿದೆ.

ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಸಿಡಿಗುಂಡು ಪ್ರಯೋಗಿಸಿದರೇ ಯಾರಪ್ಪ ಗಂಡ್ಸೂ ಖ್ಯಾತಿಯ ಅಶ್ವತ್ಥ್​​ ನಾರಾಯಣ್​ ಮತ್ತೆ ಡಿಕೆಶಿ ವಿರುದ್ಧ ಸವಾರಿ ಮಾಡಿದ್ದಾರೆ. ನಿತ್ಯವೂ ಸರ್ಕಾರದ ವಿರುದ್ಧ ಮಂಗಳಾರತಿ ಆಗುತ್ತಿದೆ. ಪ್ರತಿದಿನ ಬಿಜೆಪಿಯಿಂದ ಒಬ್ಬರೂ ಸರ್ಕಾರದ ವಿರುದ್ಧ ಚಾರ್ಜ್​​ ತಗೋದುಕೊಳ್ಳುತ್ತಿದ್ದಾರೆ. ಮೂರು ದಿನದ ಹಿಂದೆ ಅಶೋಕ್​ ಬಿಲ್​​​ ಬಡಿದಾಟಕ್ಕೆ ಶಂಕು ಸ್ಥಾಪನೆ ಮಾಡಿದರೆ, ಮೊನ್ನೆ ಡಿಕೆಶಿ ವಿರುದ್ಧ ಅಶ್ವತ್ಥ್​ ನಾರಾಯಣ್​ ಆರೋಪದ ಬತ್ತಿ ಹೊತ್ತಿಸಿದ್ದರು.

ಬಾಕಿ ಬಿಲ್​​​ಗಾಗಿ ರಾಜಧಾನಿಯಲ್ಲಿ ಬಡಿದಾಟ ಶುರುವಾಗಿದೆ. ಗುತ್ತಿಗೆ ಗಲಾಟೆಗೆ ಬಿಜೆಪಿ ನೇರ ಕುಮ್ಮಕ್ಕಿಗೆ ಇಳಿದಿದೆ. ಗುತ್ತಿಗೆದಾರರ ಪರ ನಿಂತ ಬಿಜೆಪಿಯ ನಾಯಕರು, ಹಾದಿ ಬೀದಿಯಲ್ಲಿ ಸರ್ಕಾರಕ್ಕೆ ತಿವಿಯುತ್ತಿದ್ದಾರೆ. ಚಿಕ್ಕಮಗಳೂರಲ್ಲಿ ಮಾತನಾಡಿರುವ ಸಿ.ಟಿ ರವಿ, ನೇರವಾಗಿ ಡಿಕೆಶಿಯನ್ನೇ ಟಾರ್ಗೆಟ್​​ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್​​ನ ಭ್ರಷ್ಟಾಚಾರದ ಸಾಲು ಸಾಲು ಪಟ್ಟಿ ಮಾಡಿ ಕುಟುಕಿದ್ದಾರೆ. ಕಾಂಗ್ರೆಸ್ಸಿನ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ. ನಾವು ಅಷ್ಟು ಖರ್ಚು ಮಾಡಿದ್ದೇವೆ ಅಂತ ಬಹಿರಂಗವಾಗಿ ಹೇಳುತ್ತಿದ್ದಾರೆ. ಖರ್ಚು ಮಾಡಿರೋದು ವಸೂಲಿ ಆಗಬೇಕು, ಇಲ್ಲ ಹೆಂಡ್ರು ಮಕ್ಳುನ ಬೀದಿಗೆ ನಿಲ್ಲುಸ್ಲಾ ಅಂತ ಕಾಂಗ್ರೆಸ್ಸಿಗರು ಕೇಳ್ತಿದ್ದಾರೆ ಅಂತ ಸಿ.ಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.

ಕರಪ್ಷನ್-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು

ದೇಶ-ರಾಜ್ಯದ ಹಗರಣಗಳನ್ನ ಪಟ್ಟಿ ಮಾಡಿದರೆ ಶೇ.90ರಷ್ಟು ಕಾಂಗ್ರೆಸ್ ಅವಧಿಯಲ್ಲಿ ನಡೆದಿವೆ. ಕರಪ್ಷನ್​-ಕಾಂಗ್ರೆಸ್​ ಒಂದೇ ನಾಣ್ಯದ ಎರಡು ಮುಖ ಅಂತ ರವಿ ಕುಟುಕಿದ್ದಾರೆ. ಸರ್ಕಾರದ ಬಳಿಕ ಡಿಕೆಶಿಯತ್ತ ತಿರುಗಿದ ಸಿ.ಟಿ ರವಿ, ಆರೋಪ ನಮ್ಮದಲ್ಲ. ಗುತ್ತಿಗೆದಾರರ ಸಂಘದ್ದು. ಡಿಕೆಶಿಗೆ ಅಜ್ಜಯ್ಯನ ಮಠದ ಬಗ್ಗೆ ಇರುವ ಭಕ್ತಿಗೆ ಅಲ್ಲಿಗೆ ಕರೆದಿದ್ದಾರೆ. ತಪ್ಪೇ ಮಾಡಿಲ್ಲ ಅಂದ್ರೆ ಹೋಗಿ ಪ್ರಮಾಣ ಮಾಡಬಹುದಲ್ವಾ ಅನ್ನೋದು ಸಿ.ಟಿ ರವಿ ಅವರ ಪ್ರಶ್ನೆಯಾಗಿದೆ.

ಕರ್ನಾಟಕದಲ್ಲಿ YST ಟ್ಯಾಕ್ಸ್​ ಜೊತೆ DKS ಟ್ಯಾಕ್ಸ್​ ಜಾರಿ
ಡಿಕೆಶಿ ಮೇಲೆ ಅಶ್ವತ್ಥ್​​​ ನಾರಾಯಣ್​​​ ಬೇನಾಮಿ ಆರೋಪ

ಗುತ್ತಿಗೆ ಗದ್ದಲದ ವಿಚಾರವಾಗಿ ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥ್​​​ ನಾರಾಯಣ್​​​, ನಾವೆಲ್ಲಾ ಗವರ್ನರ್​ ಭೇಟಿ ಮಾಡುತ್ತೇವೆ. ಡಿಸಿಎಂ ಮೇಲೆ ಭ್ರಷ್ಟಾಚಾರ ಆರೋಪ ಇದೆ. ಕಮಿಷನ್ ಆರೋಪ ಲೋಕಾಯುಕ್ತಕ್ಕೆ ವಹಿಸಬೇಕು. ಡಿಕೆಶಿ ಆಸ್ತಿ ₹1,400 ಕೋಟಿ ಘೋಷಣೆ ಅಷ್ಟೇ. ಬೇರೆಯವರ ಹೆಸರಲ್ಲಿ ಎಷ್ಟಿದೆಯೋ ಗೊತ್ತಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ. ಒಟ್ಟಾರೆ, ಬಿಜೆಪಿ ಆರೋಪಗಳ ಸುರಿಮಳೆಗೈತಿದೆ. ಆದರೆ ಕಾಂಗ್ರೆಸ್​​ ಫ್ರಂಟ್​​ಲೈನ್​​ ಮಾತ್ರ ರಿಯಾಕ್ಟ್​​ ಮಾಡುತ್ತಿದೆ. ಸೆಕೆಂಡ್​​ ಟೀಮ್​ ಮೌನವಹಿಸಿದ್ದು, ಅಚ್ಚರಿಗೆ ಕಾರಣ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್-ಬಿಜೆಪಿ ಮಧ್ಯೆ ಮುಂದುವರಿದ ಗುತ್ತಿಗೆ ಗುದ್ದಾಟ; ಡಿಕೆಶಿಯನ್ನೇ ಟಾರ್ಗೆಟ್ ಮಾಡಿ ಸಿ.ಟಿ.ರವಿ ವಾಗ್ದಾಳಿ!

https://newsfirstlive.com/wp-content/uploads/2023/08/ct-ravi-1.jpg

Load More