ಬೆಂಗಳೂರಲ್ಲಿ ಲೋಡ್ ಶೆಡ್ಡಿಂಗ್ ಶುರುವಾಯ್ತಾ?
ನಿತ್ಯವೂ ಒಂದಿಲ್ಲೊಂದು ಕಡೆಯಲ್ಲಿ ಪವರ್ ಕಟ್
ವಿವಿಧ ಕಾಮಗಾರಿಗಳ ಹೆಸರಲ್ಲಿ ಪವರ್ ಔಟೇಜ್
ಬೆಂಗಳೂರು: ನಿಮಗೆಲ್ಲಾ ಕತ್ತಲಿನಿಂದ ಬೆಳಕಿನೆಡೆಗೆ ಎಂಬ ನಾಣ್ಮುಡಿ ನೆನಪಿರಬಹುದು. ಆದ್ರೆ, ಬೆಂಗಳೂರಿನ ಇವತ್ತಿನ ಪರಿಸ್ಥಿತಿಯನ್ನ ನೋಡ್ತಿದ್ರೆ ಆ ಮಾತು ಉಲ್ಟಾ ಆಗ್ತಿದ್ಯಾ ಅನ್ನೋ ಅನುಮಾನ ಮೂಡ್ತಿದೆ. ಉದ್ಯಾನನಗರಿ ಬೆಳಕಿನಿಂದ ಕತ್ತಲೆ ಕಡೆಗೆ ಹೋಗ್ತಿದ್ಯಾ ಅನ್ನೋ ಪ್ರಶ್ನೆ ಹುಟ್ಟಿದೆ. ಆ ಪ್ರಶ್ನೆ ಹುಟೋಕೆ ಕಾರಣ ಪದೇ ಪದೇ ನಗರದಲ್ಲಿ ಕರೆಂಟ್ ಕೈ ಕೊಡ್ತಿರೋದು.
ವಿವಿಧ ಕಾಮಗಾರಿಗಳ ಹೆಸರಲ್ಲಿ ಬೆಸ್ಕಾಂ ಪವರ್ ಕಟ್ ಮಾಡ್ತಿದೆ. ನಿನ್ನೆ ಮಹಾಲಕ್ಷ್ಮಿ ಲೇಔಟ್ ಇವತ್ತು ರಾಜಾಜಿನಗರ ಹೀಗೆ ದಿನಕ್ಕೊಂದು ಪ್ರದೇಶದಲ್ಲಿ ಕರೆಂಟ್ ಇಲ್ದೇ ರಗಳೆಯಾಗ್ತಿದೆ. ನಿನ್ನೆ ಒಂದೇ ದಿನ 32 ಏರಿಯಾಗಳಲ್ಲಿ ಪವರ್ ಕಟ್ ಆಗಿದ್ರೆ, ಇವತ್ತು 46 ಏರಿಯಾಗಳಲ್ಲಿ ಲೈಟ್ ಆಫ್ ಆಗಿದೆ. ಈ ಬಗ್ಗೆ ಬೆಸ್ಕಾಂ ಪ್ರಕಟಣೆಯನ್ನೂ ಹೊರಡಿಸಿದೆ. ಇದು ಎಷ್ಟರಮಟ್ಟಿಗೆ ಸರಿ.
ಸಾಮಾನ್ಯರ ನಿತ್ಯದ ಕೆಲಸದಲ್ಲಿ ಎಷ್ಟು ಪರಿಣಾಮ ಬೀರುತ್ತೆ ಎಂಬ ಬಗ್ಗೆ ಐಡಿಯಾ ಸಹ ಅವರಿಗಿಲ್ಲ ಅಂತ ಜನ್ರು ಕಿಡಿಕಾರಿದ್ದಾರೆ.
KPTCL ಮತ್ತು ಬೆಸ್ಕಾಂ ಕಾಮಗಾರಿ ಹೆಸರಲ್ಲಿ ಕರೆಂಟ್ ಕಟ್ ಮಾಡುತ್ತಿದೆ. ಎರಡು ಗಂಟೆ ಒಕೆ.. ಮೂರು ಗಂಟೆ ಪವರ್ ಕಟ್ ಆದ್ರೆ ಒಕೆ.. ಆದ್ರೆ ಒರೊಬ್ಬರಿ ಸುಮಾರು ಏಳು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗ್ತಾಯಿದೆ. ಇದೆಲ್ಲದರ ಹಿಂದೆ ರಾಜಧಾನಿ ಬೆಂಗಳೂರಲ್ಲಿ ಲೋಡ್ ಶೆಡ್ಡಿಂಗ್ ಶುರುವಾಯ್ತಾ? ಎಂಬ ಪ್ರಶ್ನೆ ಸದ್ಯ ಕಾಡುತ್ತಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ನಗರದ ಗುಡ್ಡದ ಕ್ಯಾಂಪ್, ಚರ್ಚ್ ಕ್ಯಾಂಪ್, ಚಿಕ್ಕನಹಳ್ಳಿ, ಹೊಸ ಚಿಕ್ಕನಹಳ್ಳಿ, ಒಬ್ಬಾಜಿಹಳ್ಳಿ, ಮಲ್ಲಾಡಿಹಳ್ಳಿ, ಬಸಾಪುರ, ಗೊಲ್ಲರಹಳ್ಳಿ, ಎಲ್.ಹೆಚ್.ಪಾಳ್ಯ, ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಒಟ್ಟಿನಲ್ಲಿ ಕರೆಂಟ್ ಪ್ರಾಬ್ಲಮ್ ಸರಿಯಾಗುವವರೆಗೂ ಸಾಮಾನ್ಯ ಜನರ ಕಷ್ಟ ತಪ್ಪೋದಿಲ್ಲ ಅನ್ನೊಂದತ್ತು ಸತ್ಯ. ಹೀಗಾಗಿ, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಿಸಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ