newsfirstkannada.com

ಜನರಿಗೆ ಕರೆಂಟ್​ ಶಾಕ್​​.. ವಿದ್ಯುತ್​​ ದರ ಇಳಿಕೆ ಮಾಡಲು ಸಿಎಂ ಸಿದ್ದರಾಮಯ್ಯ ನಕಾರ

Share :

23-06-2023

  ಕರೆಂಟ್​ ಬಿಲ್​ ಏರಿಕೆ ಖಂಡಿಸಿ ಇಡೀ ರಾಜ್ಯಾದ್ಯಂತ ಪ್ರತಿಭಟನೆ

  ವಿದ್ಯುತ್​​ ದರ ಇಳಿಕೆ ಮಾಡಲು ಸಿಎಂ ಸಿದ್ದರಾಮಯ್ಯ ನಕಾರ..!

  ಯಾವುದೇ ಕಾರಣಕ್ಕೂ ಕರೆಂಟ್​ ಬಿಲ್​ ಇಳಿಕೆಯಿಲ್ಲ ಎಂದ ಸಿಎಂ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಅನುಷ್ಠಾನದ ಹೊತ್ತಲ್ಲೇ ಕೈಗಾರಿಕೋದ್ಯಮಿಗಳಿಗೆ ಕರೆಂಟ್ ಬಿಲ್ ಏರಿಕೆ ಬಿಸಿ ತಟ್ಟಿದೆ. ಭಾರೀ ಪ್ರತಿಭಟನೆಗಳು, ವಿಪಕ್ಷಗಳ ಟೀಕೆಗಳ ಬಳಿಕವೂ ವಿದ್ಯುತ್ ದರ ಇಳಿಸಲು ಸರ್ಕಾರ ನಿರಾಕರಿಸಿದೆ. ವಿದ್ಯುತ್ ದರ ಏರಿಸಿದ್ದು ನಾವಲ್ಲ ಅಂತ ಕಾಂಗ್ರೆಸ್​ ನಾಯಕರು ಸ್ಪಷ್ಟನೆ ಕೊಡ್ತಿದ್ದಾರೆ.

ವಿದ್ಯುತ್ ದರ ಏರಿಕೆ ವಿರೋಧಿಸಿ ಇತ್ತೀಚೆಗೆ ಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸಿದ್ದರು. ವಿದ್ಯುತ್ ದರ ಇಳಿಸಬೇಕು ಅಂತ ಆಗ್ರಹಿಸಿದ್ದರು. ಕೆಇಆರ್​ಸಿ ಕಡೆ ಬೊಟ್ಟು ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ವಿದ್ಯುತ್ ದರ ಇಳಿಕೆ ಮಾಡಲ್ಲ ಅನುಮಾನ ದಟ್ಟವಾಗಿದೆ.

ವಿದ್ಯುತ್ ದರ ಇಳಿಕೆ ಮಾಡಲು ಕಾಂಗ್ರೆಸ್ ಸರ್ಕಾರ ನಕಾರ!

ವಿದ್ಯುತ್ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಕೈಗಾರಿಕೋದ್ಯಮಿಗಳು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಬಿ.ವಿ ಗೋಪಾಲರೆಡ್ಡಿ ನೇತೃತ್ವದ ನಿಯೋಗವು ದರ ಇಳಿಕೆಗೆ ಮನವಿ ಮಾಡಿದವು. ಆದ್ರೆ ವಿದ್ಯುತ್ ದರ ಹೆಚ್ಚಳ ಹಿಂಪಡೆಯಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

ಸಿಎಂ ಹೇಳಿದ್ದೇನು?

ವಿದ್ಯುತ್ ದರ ಹೆಚ್ಚಳ ಹಿಂಪಡೆಯದಿರಲು ಸರ್ಕಾರ ನಿರ್ಧರಿಸಿದೆ. ಗೃಹಜ್ಯೋತಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಸಂಬಂಧವಿಲ್ಲ, ಕೆಇಆರ್​ಸ ಸ್ವಾಯತ್ತ ಸಂಸ್ಥೆ, ನಾವೇನೂ ಮಾಡಲು ಸಾಧ್ಯವಿಲ್ಲ, ವಿದ್ಯುತ್ ದರ ಹೆಚ್ಚಳವಾಗಿರೋದನ್ನ ಹಿಂಪಡೆಯಲು ಸಾಧ್ಯವಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆದ್ರೆ ತೆರಿಗೆ ಇಳಿಸುವ ಬಗ್ಗೆ ಪರಿಶೀಲನೆ ಮಾಡುವುದಾಗಿ ಸಿಎಂ ಅಭಯ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಸಿಎಂ ಜೊತೆ ಸಭೆ ಬಳಿಕ ಮಾತನಾಡಿದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ದರ ಇಳಿಕೆ ಮಾಡಲ್ಲ, ತೆರಿಗೆ ಇಳಿಕೆ ಭರವಸೆ ನೀಡಿದ್ದಾರೆ ಅಂದ್ರು.

‘ಎಲೆಕ್ಷನ್ ರಿಸಲ್ಟ್​ಗೂ ಮುನ್ನವೇ ವಿದ್ಯುತ್ ದರ ಏರಿಕೆ’

ನಾವೆಲ್ಲಿ ವಿದ್ಯುತ್ ದರಗಳನ್ನು ಏರಿಕೆ ಮಾಡಿದ್ದೇವೆ, ಚುನಾವಣೆ ರಿಸಲ್ಟ್​​ ಬರುವ ಮೊದಲೇ ಬಿಜೆಪಿ ಸರ್ಕಾರ ದರ ಏರಿಕೆ ಆದೇಶ ಮಾಡಿತ್ತು ಅಂತ ಡಿಸಿಎಂ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಿನಲ್ಲಿ ಗೃಹಜ್ಯೋತಿ ಜಾರಿಗೆ ಒದ್ದಾಡುತ್ತಿರೋ ಹೊತ್ತಲ್ಲಿ ಸರ್ಕಾರಕ್ಕೆ ವಿದ್ಯುತ್ ದರ ಏರಿಕೆ ವಿರೋಧದ ಬಿಸಿ ತಟ್ಟಿದೆ. ವಿದ್ಯುತ್ ದರ ಏರಿಕೆ ವಿರುದ್ಧ ಕೈಗಾರಿಕೋದ್ಯಮಿಗಳು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಮತ್ತೊಂದೆಡೆ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಕಾಯುತ್ತಿರುವ ವಿಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನರಿಗೆ ಕರೆಂಟ್​ ಶಾಕ್​​.. ವಿದ್ಯುತ್​​ ದರ ಇಳಿಕೆ ಮಾಡಲು ಸಿಎಂ ಸಿದ್ದರಾಮಯ್ಯ ನಕಾರ

https://newsfirstlive.com/wp-content/uploads/2023/06/Current-Bill-3.jpg

Load More