ವಿಧಾನಪರಿಷತ್ ಕಲಾಪದಲ್ಲೂ ‘ಗ್ಯಾರಂಟಿ’ ಗದ್ದಲ
ಸದನದಲ್ಲಿ ಶಿವಲಿಂಗೇಗೌಡ vs ಹೆಚ್ಡಿಕೆ ವಾಗ್ಯುದ್ಧ
ಇವತ್ತಿನ ಕಲಾಪದ ಹೈಲೈಟ್ಸ್ ಏನೇನು ಗೊತ್ತಾ..?
ಮಳೆಗಾಲದ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಸದಸ್ಯರ ಪ್ರತಾಪ-ಪ್ರಲಾಪ ಸದ್ದು ಮಾಡಿದೆ. ನಿನ್ನೆ ರಾಜ್ಯಪಾಲರ ಭಾಷಣದಿಂದ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಸದನದ ಹೊರಗೆ ಗದ್ದಲವೆದ್ದಿದ್ರೆ ಇಂದು ಸದನ ಕದನಭೂಮಿಯಾಗಿ ಮಾರ್ಪಟ್ಟಿತ್ತು. ಇವತ್ತು ಗ್ಯಾರಂಟಿ ಗೊಂದಲಗಳು ಗದ್ದಲವನ್ನೇ ಎಬ್ಬಿಸಿತ್ತು.
ಕಲಾಪ ಆರಂಭವಾಗ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ಗದ್ದಲ
ಕಲಾಪ ಆರಂಭವಾಗ್ತಿದ್ದಂತೆ ಆಡಳಿತ ವರ್ಸಸ್ ವಿಪಕ್ಷ ನಾಯಕರ ನಡುವೆ ಮಾತಿನ ಮಲ್ಲಯುದ್ಧ ನಡೆಯಿತು. ಗ್ಯಾರೆಂಟಿಗಳ ಜಾರಿಯಲ್ಲಿನ ಗೊಂದಲ ಮತ್ತು ಕಂಡೀಷನ್‌ಗಳನ್ನ ಹಾಕಿರುವ ಬಗ್ಗೆ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಬಿಜೆಪಿ ನಾಯಕರು ಪಟ್ಟು ಹಿಡಿದ್ರು. ಇದಕ್ಕೆ ಸ್ಪೀಕರ್ ಯು.ಟಿ. ಖಾದರ್ ಅವಕಾಶ ಕೊಡದಿದ್ದಕ್ಕೆ ನಮ್ಮ ಮಾತನ್ನಾದ್ರೂ ಕೇಳಿ ಅಂತ ಬಿಜೆಪಿ ನಾಯಕರು ಆಗ್ರಹಿಸಿದ್ರು. ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಸುನೀಲ್ ಕುಮಾರ್ ಸದನದಲ್ಲಿ ಪಟ್ಟು ಹಿಡಿದ್ರು.
ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಮಾನ್ಯ ಸ್ಪೀಕರ್ ಅವರೇ ಅದಕ್ಕೆ ಅವಕಾಶ ಕೊಡಲ್ಲ ಅಂದರೆ ಹೇಗೆ..? ಎಂದು ಬೊಮ್ಮಾಯಿ ಪ್ರಶ್ನೆ ಮಾಡಿದರು. ಅದಕ್ಕೆ ಎದ್ದುನಿಂತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತಿರೋದು ಬಿಜೆಪಿಗರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯರೊಬ್ಬರು ಗಲಾಟೆ ಮಧ್ಯದಲ್ಲಿ ಅವರ ಬಳಿ ಕೊಡೋಕೆ ಆಗ್ತಿಲ್ಲ. ತಡೆದುಕೊಳ್ಳೋದು ಎಲ್ಲಿಂದ ಬಂತು ಅಂತಾ ಕೌಂಟರ್ ನಿಡಿದರು. ಬಳಿಕ ಡಿಸಿಎಂ ಡಿಕೆಶಿ ಮಧ್ಯಪ್ರವೇಶಿಸಿದಾಗಲೂ ಕೇಸರಿ ಕಲಿಗಳು ಗದ್ದಲ ಮುಂದುವರೆಸಿದ್ರು. ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಡಿಕೆಶಿ ವಿರುದ್ಧ ವಾಗ್ವಾದ ನಡೆಸಿದ್ರು.
ಮೊಂಡಾಟ ಬಿಡಿ ಎಂದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಭಟನೆ
ಗದ್ದಲ ಗಲಾಟೆ ವೇಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಎದ್ದು ನಿಂತು ಮಾತನಾಡಿದ್ರು. ಈ ವೇಳೆ ಮಾತನಾಡಲು ಅವಕಾಶ ಕೊಡಿ. ಮಾನ್ಯ ವಿರೋಧ ಪಕ್ಷದವರಲ್ಲಿ ನಾನು ಮನವಿ ಮಾಡುತ್ತೇನೆ. ಈ ಮೊಂಡಾಟ ಬಿಡಿ. ಇದರಿಂದ ಏನೂ ಆಗಲ್ಲ. ಮೊಂಡಾಟ ಬಿಡಿ ಅಂತ ಹೇಳಿದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ನಾಯಕರು ಕಡತದಿಂದ ಮೊಂಡಾಟ ಪದವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ರು. ಇತ್ತ ಕಾಂಗ್ರೆಸ್ ಸದಸ್ಯರು ಕೂಡ ಬಿಜೆಪಿ ವಿರುದ್ಧ ಘೋಷಣೆ ಕೂಗ್ತಿದ್ದಂತೆ ಸ್ಪೀಕರ್ ಕಲಾಪವನ್ನು ಮುಂದೂಡಿದ್ರು.
2ನೇ ಸಲ ಕಲಾಪ ಆರಂಭ ವೇಳೆಯೂ ಬಿಜೆಪಿ ಧರಣಿ
ಇನ್ನು ಗದ್ದಲ-ಗಲಾಟೆ ಬಳಿಕ ವಿಧಾನಸಭೆ ಸ್ಪೀಕರ್ ಕಚೇರಿಯಲ್ಲಿ ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಸಭೆಯಲ್ಲಿ ಸಿದ್ದರಾಮಯ್ಯ, ಬೊಮ್ಮಾಯಿ, ಗೃಹ ಸಚಿವ ಜಿ ಪರಮೇಶ್ವರ್, ಯತ್ನಾಳ್ ಕೂಡ ಹಾಜರಾಗಿದ್ರು. ಆದ್ರೆ ನಂತರ ಆರಂಭವಾದ ಕಲಾಪದಲ್ಲೂ ಬಿಜೆಪಿ ಸದಸ್ಯರ ಗದ್ದಲ ಮುಂದುವರೆಯಿತು. ಸ್ಪೀಕರ್ ಮಾತಿಗೂ ಡೋಂಟ್ಕೇರ್ ಎನ್ನದೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆದು ಬಿಜೆಪಿ ಸದಸ್ಯರು ಮತ್ತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ರು.
ಸದನದಲ್ಲಿ ಶಿವಲಿಂಗೇಗೌಡ V\S ಹೆಚ್ಡಿಕೆ ವಾಗ್ಯುದ್ಧ
ಇನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ರಣಕಹಳೆ ಮೊಳಗಿಸಿದ್ದವು. ಗ್ಯಾರಂಟಿ ಗದ್ದಲದ ನಡುವೆ ಕೊಬ್ಬರಿ ಗಲಾಟೆಯೂ ಕಾವೇರಿತ್ತು. ಶಿವಲಿಂಗೇಗೌಡ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದ್ರು. ಕೊಬ್ಬರಿ ಬೆಳೆಗಾರರಿಗೆ ಇವರು ಕನಿಷ್ಠ ಬೆಂಬಲ ಬೆಲೆ ಕೊಟ್ಟಿಲ್ಲ. ಈಗ ನಾಚಿಕೆ ಬಗ್ಗೆ ಮಾತಾಡ್ತಿದ್ದಾರೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ವಿಧಾನಪರಿಷತ್ ಕಲಾಪದಲ್ಲೂ ‘ಗ್ಯಾರಂಟಿ’ ಗದ್ದಲ
ಕೇವಲ ವಿಧಾನಸಭೆ ಕಲಾಪ ಮಾತ್ರವಲ್ಲ ವಿಧಾನಪರಿಷತ್ ಕಲಾಪದಲ್ಲೂ ಗ್ಯಾರಂಟಿ ಗದ್ದಲ ಜೋರಾಗಿತ್ತು. ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಗ್ಯಾರಂಟಿ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಮುಂದಾದ್ರು. ಈ ವೇಳೆ ಕಾಂಗ್ರೆಸ್ ಸದಸ್ಯರು ನಿಲುವಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಗದ್ದಲ, ಮಾತಿನ ಚಕಮಕಿ ನಡೆಯಿತು. ಬಳಿಕ ಪರಿಷತ್ ಕಲಾಪವನ್ನ ಸಭಾಪತಿಗಳು ಮುಂದೂಡಿದ್ರು. ನಂತರವೂ ವಿಧಾನಪರಿಷತ್ ಸದನದಲ್ಲಿ ಗ್ಯಾರಂಟಿ ಗದ್ದಲ ಜೋರಾಯ್ತು. ಸಂಧಾನ ಸಭೆ ವಿಫಲವಾಗಿ ಬಿಜೆಪಿ ಪ್ರತಿಭಟನೆ ಕೈ ಬಿಡದಿರಲು ತೀರ್ಮಾನಿಸಿತು. ಗ್ಯಾರಂಟಿ ಯೋಜನೆಯ ಬಗ್ಗೆ ಹಲವು ಗೊಂದಲವಿದೆ. ನಮ್ಮ ಹೋರಾಟ ಮುಂದುವರಿಯಲಿದೆ ಅಂತ ಉಪಸಭಾಪತಿಗೆ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿ ಪ್ರತಿಭಟನೆ ಮುಂದುವರೆಸಿದ್ರು.
ಒಟ್ಟಾರೆ ಇಂದಿನ ಕಲಾಪದಲ್ಲಿ ಗ್ಯಾರಂಟಿಗೆ ಹಾಕಿರುವ ಕಂಡೀಶನ್ ಹಾಗೂ ಬೇಗ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಬೇಕೆಂದು ವಿಪಕ್ ಬಿಜೆಪಿ ನಾಯಕರು ಪಟ್ಟು ಹಿಡಿದ್ರು. ಈ ಗದ್ದಲ-ಗಲಾಟೆ ನಡುವೆ ನಡೆಯಬೇಕಾದ ಸಮಸ್ಯೆಗಳ ಚರ್ಚೆಯೇ ಗೌಣವಾದವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ