ಒಂದೇ ತಿಂಗಳಲ್ಲಿ 750 ಪ್ರಕರಣಗಳು ದಾಖಲು
ಸಾವಿರ ಸಾವಿರ ವಂಚಿಸುತ್ತಿದ್ದಾರೆ ಕ್ರಿಮಿನಲ್ಸ್
ಕೊರಿಯರ್ ಪಾರ್ಸಲ್ ಬಂದಿದೆ ಅಂದಕೂಡಲೇ ಎಚ್ಚೆತ್ಕೊಳ್ಳಿ
ಬೆಂಗಳೂರು: ನಗರದಲ್ಲಿ ಸೈಬರ್ ವಂಚಕರು ಪೊಲೀಸರ ನಿದ್ದೆಗೆಡಿಸುತ್ತಿದ್ದಾರೆ. ಇದಿಗ ಕೋರಿಯರ್ ಪಾರ್ಸಲ್ ಹೆಸರಲ್ಲಿ ವಂಚನೆ ಮಾಡುತ್ತಿದ್ದು, ಕಳೆದ ಒಂದು ತಿಂಗಳ ಅಂತರದಲ್ಲಿ 750 ಪ್ರಕರಣಗಳು ದಾಖಲಾಗಿವೆ.
ಎರಡು ರೂ. ಕೊಡಿ ಎಂದು ವಂಚನೆ
ನಿಮಗೆ ಕೊರಿಯರ್ ಪಾರ್ಸಲ್ ಬಂದಿದೆ ಜಸ್ಟ್ 2 ರೂಪಾಯಿ ಕೊಡಿ ಅಂತೇಳಿ ವಂಚಿಸುತ್ತಿದ್ದಾರೆ. ದಿನೇ ದಿನೆ ಪೊಲೀಸ್ ಠಾಣೆಗೆ ಕೊರಿಯರ್ ಹೆಸರಲ್ಲಿ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ದೂರು ಕೊಡಲು ಬರೋರೆಲ್ಲ ವಿದ್ಯಾವಂತರೂ, ಟೆಕ್ಕಿಗಳೇ ಜಾಸ್ತಿ ಇದ್ದಾರೆ. ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಎಷ್ಟೇ ಅರಿವು ಮೂಡಿಸಿದ್ರೂ ಜನ ಮಾತ್ರ ಬದಲಾಗುತ್ತಿಲ್ಲ.
ಹೇಗೆ ಮಾಡ್ತಾರೆ ಕೊರಿಯರ್ ಫ್ರಾಡ್..?
ಮೊದಲಿಗೆ ಮೊಬೈಲ್‌ಗೆ ಬಂದು ಫೋನ್ ಕರೆ ಬರುತ್ತದೆ. ಕಾಲ್ ಮಾಡಿದ ಕಿರಾತಕರು ನಾವು ಕೊರಿಯರ್ ಆಫೀಸ್ನಿಂದ ಎಂದು ಮಾತನಾಡ್ತಾರೆ. ನಿಮ್ಮ ಹೆಸರಿಗೆ ಒಂದು ಕೊರಿಯರ್ ಪಾರ್ಸಲ್ ಬಂದಿದೆ, ಅಡ್ರಸ್ ಹೇಳಿ ಎನ್ನುತ್ತಾರೆ. ಈ ವೇಳೆ ನೀವು ಯಾವುದೇ ಹಣ ಪಾವತಿ ಮಾಡುವಂತಿಲ್ಲ ಎನ್ನುತ್ತಾರೆ. ಮಾತನಾಡಿದ ಬಳಿಕ ಒಂದು ಲಿಂಕ್ ಕಳುಹಿಸುತ್ತೇವೆ, ಅದಕ್ಕೆ 2 ರೂಪಾಯಿ ಚಾರ್ಜ್ ಆಗುತ್ತದೆ ಅಷ್ಟೇ ಎನ್ನುತ್ತಾರೆ.
ಬರೀ ಎರಡು ರೂಪಾಯಿ ಅನ್ಕೊಂಡ ಜನ ಲಿಂಕ್ ಓಪನ್ ಮಾಡಿ ಕಳುಹಿಸುತ್ತಾರೆ. ಅಮೌಂಟ್ ಕಳುಹಿಸಿದ ಎರಡೇ ನಿಮಿಷದಲ್ಲಿ ಅಕೌಂಟ್ನಲ್ಲಿರುವ ಹಣ ಮಂಗಮಾಯವಾಗುತ್ತದೆ. ಹೀಗೆ ನಗರದಲ್ಲಿ ಸುಮಾರು 750ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಒಬ್ಬೊಬ್ಬರು 10, 20, 30 ಸಾವಿರ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ