newsfirstkannada.com

ಒಂದೇ ಒಂದು ಫೋನ್​ ಕಾಲ್​​ಗೆ ಹೆದರಿ ಲಕ್ಷ ಲಕ್ಷ ಹಣ ಕಳ್ಕೊಂಡ ವ್ಯಕ್ತಿ; ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!

Share :

12-09-2023

    ಸೈಬರ್ ವಂಚಕರ ಮತ್ತೊಂದು ಹೊಸ ಮುಖ

    ಲೈಂಗಿಕ ದೌರ್ಜನ್ಯ ಕೇಸ್ ಆಗಿದೆ ಎಂದು ಬೆದರಿಕೆ

    ಫೋನ್​ ಕರೆಗೆ ಹೆದರಿದವ ಕಳ್ಕೊಂಡಿದ್ದು ಲಕ್ಷ ಲಕ್ಷ ಹಣ

ಬೆಂಗಳೂರು: ಟೆಕ್ನಾಲಜಿ ಬೆಳೆದಷ್ಟೂ ಅದರ ಉಪಯೋಗಗಳಿಗಿಂತಾ, ಅದನ್ನ ದುರುಪಯೋಗ ಮಾಡ್ಕೊಳ್ಳೋರೇ ಹೆಚ್ಚು. ಅದ್ರಲ್ಲೂ ಈಗ ಸೈಬರ್​ ಕಳ್ಳರ ಹಾವಳಿ ಅಷ್ಟಿಷ್ಟಲ್ಲ. ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನ ಕಂಡುಹಿಡ್ಕೊಳ್ತಿರೋ ಕಿಡಿಗೇಡಿಗಳು ಈಗ ಬಳಸ್ತಿರೋ ಬಾಣ ಲೈಂಗಿಕ ದೌರ್ಜನ್ಯ.

ಅನ್​ನೋನ್​​ ನಂಬರ್​ಗಳಿಂದ ಬರೋ ಕಾಲ್​ಗಳಂದ್ರೆ ಜನರಲ್ಲಿ ಭಯ ಹುಟ್ಟಿಸಿಬಿಟ್ಟಿದೆ. ಯಾರ್​ ಕಾಲ್​ ಮಾಡ್ತಾರೋ? ಏನ್​ ಕೇಳ್ತಾರೋ? ಏನ್​ ಹೇಳ್ತಾರೋ? ಅನ್ನೋ ಆತಂಕ. ಆದ್ರೆ ಇದ್ಯಾವ ಆತಂಕವೂ ಇಲ್ಲದೇ ಅಪರಿಚಿತ ನಂಬರ್​ನಿಂದ ಬಂದ ಕಾಲ್​ ರಿಸೀವ್​ ಮಾಡಿದ್ರು ಈ ವ್ಯಕ್ತಿ. ಹೆಸರು ಪ್ರೋಮಿತ್ ಮೌಲಿಕ್.

ಈ ದಿನ ಪ್ರೋಮಿತ್ ಮೌಲಿಕ್ ಅವ್ರಿಗೆ ಒಂದು ಕಾಲ್​ ಬಂದಿತ್ತು. ಬ್ಯುಸಿನೆಸ್​​ ಮ್ಯಾನ್​ ಆಗಿರೋ ಪ್ರೋಮಿತ್​​ ಅವ್ರಿಗೆ ಒಂದು ಕಾಲ್​ ಬಂದಿತ್ತು. ಬಂದ ಕಾಲ್​ ಸೀವ್​ ಮಾಡಿದ್ದವ ಕಳ್ಕೊಂಡಿದ್ದು ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಹಣ. ಈ ಬಗ್ಗೆ ದೂರು ಹೆಚ್​​ಎಎಲ್​ ಪೊಲೀಸ್ ಠಾಣೆಯಲ್ಲಿ ಪ್ರೋಮಿತ್ ಮೌಲಿಕ್ ದೂರು ನೀಡಿದ್ದಾರೆ.

‘ದೆಹಲಿ ಪೊಲೀಸರು ಅಂತಹೇಳಿದ್ರು’

ಕಳೆದ 17ನೇ ತಾರೀಖಿನಂದು ನನಗೆ ಒಬ್ರು ಕಾಲ್​ ಮಾಡಿದ್ರು. ನಾವು ದೆಹಲಿ ಪೊಲೀಸ್​ ಅಂತ ಹೇಳಿದ್ರು. ಅವರ ಹೆಸರು ರಾಜು ತಿವಾರಿ ಅಂತೆ. ನಿಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್​ ದಾಖಲಾಗಿದೆ ಅಂತ ಹೇಳಿ ಹಣಕ್ಕೆ ಡಿಮ್ಯಾಂಡ್​ ಇಟ್ರು. ಹಣ ಕೊಡದೇ ಹೋದ್ರೆ ನಿಮ್ಮನ್ನ ಮತ್ತು ನಿಮ್ಮ ಕುಟುಂಬವನ್ನ ಅರೆಸ್ಟ್ ಮಾಡ್ತೀವಿ ಅಂತ ಹೇಳಿದ್ರು. ಮೊದಲು 87444 ರುಪಾಯಿ ಟ್ರಾನ್ಸ್​ಫರ್​ ಮಾಡಿಸ್ಕೊಂಡ್ರು. ಆಮೇಲೆ ಕೇಸ್​ ಕ್ಲೋಸ್​ ಮಾಡೋಕೆ ಮತ್ತೆ ಹಣ ಬೇಕು ಅಂತ 54000 ಹಾಕಿಸಿಕೊಂಡರು.

– ಪ್ರೋಮಿತ್ ಮೌಲಿಕ್, ದೂರುದಾರ

ಹಣ ಕೊಟ್ಮೇಲೆ ಸುಮ್ಮನಾಗ್ತಾರೆ ಅಂದ್ಕೊಂಡ್ರೆ ಇವರು ಕರೆ ಮಾಡೋದನ್ನ ನಿಲ್ಲಿಸಲೇ ಇಲ್ಲ. ಹೀಗಾಗಿ ಅನುಮಾನ ಬಂದು ಪ್ರೋಮಿತ್ ಮೌಲಿಕ್ ದೂರು ದಾಖಲಿಸಿದ್ದಾರೆ. ಅಬ್ಬಬ್ಬಾ.. ದಿನಕ್ಕೊಂದು ಕ್ಷಣಕ್ಕೊಂದು ಪ್ಲಾನ್​ ಮಾಡ್ಕೊಂಡು ಸಿಕ್ಕ ಸಿಕ್ಕವರಿಗೆ ಕರೆ ಮಾಡೋ ಚಾಲಾಕಿಗಳು ನಿಮಗೂ ಕರೆ ಮಾಡಬಹುದು. ಇವರು ಕತ್ತಲಲ್ಲಿ ಬೀಸೋ ಬಾಣಕ್ಕೆ ನೀವು ಬಲಿಯಾಗದಿರಿ ಅನ್ನೋದೇ ನ್ಯೂಸ್​ ಫಸ್ಟ್​​ ಕಳಕಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಒಂದು ಫೋನ್​ ಕಾಲ್​​ಗೆ ಹೆದರಿ ಲಕ್ಷ ಲಕ್ಷ ಹಣ ಕಳ್ಕೊಂಡ ವ್ಯಕ್ತಿ; ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/09/Business-Man.jpg

Load More