newsfirstkannada.com

ನಿಮಗೆ ಆನ್​​ಲೈನ್​​ ಶಾಪಿಂಗ್​​ ಮಾಡೋ ಚಟ ಇದೆಯೇ? ನೀವು ಓದಲೇಬೇಕಾದ ಸ್ಟೋರಿ ಇದು!

Share :

01-11-2023

    ದಿನಕ್ಕೊಂದು ರೀತಿಯಲ್ಲಿ ಸೈಬರ್ ಖದೀಮರ ಕೈಚಳಕ

    ಹೇಗಿದು ಅಂತ ತಿಳಿಯೋದ್ರಲ್ಲೇ ಮತ್ತೆ ಹೊಸ ಹಾದಿ

    ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ ಸೈಬರ್ ವಂಚಕರು

ಪೊಲೀಸರು ಚಾಪೆ ಕೆಳಗೆ ನುಗ್ಗಿದ್ರೆ, ಸೈಬರ್​ ಖದೀಮರು ರಂಗೋಲಿ ಕೆಳಗೆ ನುಸುಳಿ ಬಿಡ್ತಾರೆ. ವಂಚಿಸೋದಕ್ಕೆ ದಿನಕ್ಕೊಂದು ಹೊಸ ಮಾರ್ಗ ಹುಡುಕ್ತಿರುವ ವಂಚಕರು, ಕೇವಲ 2 ರೂಪಾಯಿ ಮೂಲಕ ಜನರಿಗೆ ಪಂಗನಾಮ ಹಾಕಿದ್ದಾರೆ.

ಇತ್ತೀಚೆಗೆ ಜನರಿಗೆ ಶಾಪಿಂಗ್​ ಫ್ರೀಕ್​ ಸ್ವಲ್ಪ ಜಾಸ್ತಿ ಆಗ್ತಿದೆ. ಅಂಗಡಿಗೆ ಹೋದ್ರೆ ಗಂಟೆ ಗಟ್ಟಲೇ ಟೈಮ್​​ ವೇಸ್ಟ್​ ಆಗುತ್ತೆ ಅಂತ ಆನ್​ಲೈನ್​ನಲ್ಲೇ ಆರ್ಡರ್​ ಮಾಡ್ತಾರೆ. ಕಸ ಗುಡಿಸೋ ಪೊರಕೆಯಿಂದ ಹಿಡಿದು, ವಾಷಿಂಗ್​ ಮಷೀನ್​ವರೆಗೂ ಆನ್​ಲೈನ್​ನಲ್ಲೇ ಆರ್ಡರ್​ ಮಾಡ್ತಾರೆ. ಈ ರೀತಿ ಆನ್​ಲೈನ್​ ಸೇವೆಗಳಿಗೆ ಅಡಿಕ್ಟ್​ ಆಗಿರೋರೇ ಇದೀಗ ಸೈಬರ್​ ಖದೀಮರ ಟಾರ್ಗೆಟ್ ಆಗ್ತಿದ್ದಾರೆ.

ಅಪರಿಚಿತರು ಕಳಿಸೋ ಕೊರಿಯರ್​ ಅನ್ನ ನಂಬಿ ತಗೋಳೊಕೆ ಹೋಗಿ ಜನ ಮೋಸ ಹೋಗ್ತಿದ್ದಾರೆ. ದಿನೇ ದಿನೇ ನಗರದಲ್ಲಿ ಕೊರಿಯರ್ ವಂಚನೆ ಪ್ರಕರಣಗಳು ಜಾಸ್ತಿಯಾಗ್ತಿದ್ದು, ಒಂದೇ ತಿಂಗಳಲ್ಲಿ 750 ಕೊರಿಯರ್ ಫ್ರಾಡ್ ಕೇಸ್​ಗಳು ದಾಖಲಾಗಿದೆ.

ವಂಚನೆ ಹೇಗೆ?

ಮೊದಲಿಗೆ ನಿಮ್ಮ ಮೊಬೈಲ್​ಗೆ ಒಂದು ಫೋನ್ ಕರೆ ಬರುತ್ತೆ, ಕರೆಯಲ್ಲಿ ನಾವು ಕೊರಿಯರ್ ಆಫೀಸ್​ನಿಂದ ಅಂತಾರೆ. ನಿಮ್ಮ ಹೆಸರಿಗೆ ಕೊರಿಯರ್ ಬಂದಿದೆ, ಅಡ್ರೆಸ್ ಹೇಳಿ ಅಂತಾರೆ, ನಿಮಗೊಂದು ಲಿಂಕ್ ಕಳಿಸ್ತೀವಿ, ಅದಕ್ಕೆ ₹2 ಹಾಕಿ ಅಂತಾರೆ. ಕೇವಲ 2 ರೂಪಾಯಿ ಅಷ್ಟೇ ಅಲ್ವಾ ಅಂತ ಲಿಂಕ್ ಓಪನ್ ಮಾಡಿದ್ರೆ ಮುಗೀತು. ನೀವು 2 ರೂಪಾಯಿ ಕಳಿಸಿದ್ರೂ ನಿಮ್ಮ ಅಕೌಂಟ್ ಖಾಲಿ ಆಗುತ್ತೆ. ಆ ಲಿಂಕ್ ಬಳಸಿ ನಿಮ್ಮ ಖಾತೆಯಲ್ಲಿರೋ ಹಣವೆಲ್ಲಾ ಎಗರಿಸ್ತಾರೆ.

ಒಟ್ನಲ್ಲಿ ಮೋಸ ಹೋಗುವವರು ಎಲ್ಲಿವರೆಗೂ ಇರ್ತಾರೋ ಮೋಸ ಮಾಡುವವರು ಅಲ್ಲಿವರೆಗೂ ಇರ್ತಾರೆ.. ಈ ರೀತಿಯ ಮೋಸ ಜಾಲದಿಂದ ಅದಷ್ಟೂ ಸೇಫ್ ಆಗಿರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮಗೆ ಆನ್​​ಲೈನ್​​ ಶಾಪಿಂಗ್​​ ಮಾಡೋ ಚಟ ಇದೆಯೇ? ನೀವು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/11/cyber-1.jpg

Load More