newsfirstkannada.com

ರಾಜ್ಯದಲ್ಲೂ ಬಿಪರ್ ಜಾಯ್ ಚಂಡಮಾರುತದ ಆರ್ಭಟ.. ಕರಾವಳಿಯಲ್ಲಿ ಇನ್ನೂ 4 ದಿನ ಮಳೆ ಸಾಧ್ಯತೆ!

Share :

Published June 12, 2023 at 12:46am

Update June 12, 2023 at 12:48am

    ಸಮುದ್ರ ತೀರದ ಪ್ರದೇಶಗಳು ಅಲ್ಲೋಲ ಕಲ್ಲೋಲ

    ಬಿಪರ್​ ಜಾಯ್ ಆರ್ಭಟಕ್ಕೆ ಕರಾವಳಿ ಕಂಗಾಲು

    ಕರಾವಳಿ ತೀರದಲ್ಲಿ ಅಲೆಗಳ ಅಬ್ಬರ ಜೋರು..!

ಅರಬ್ಬಿ ಸಮುದ್ರಲ್ಲಿ ಜನ್ಮತಾಳಿದ ಬೀಪರ್​ ಜಾಯ್​ ಚಂಡಮಾರುತದ ಅಬ್ಬರ ಮತ್ತಷ್ಟು ಜೋರಾಗಿದೆ. ಬಿಪರ್​ ಜಾಯ್ ಆರ್ಭಟಕ್ಕೆ ಕರಾವಳಿ ತೀರದ ಪ್ರದೇಶಗಳು ಕಂಗಾಲಾಗಿವೆ. ಗೋವಾ, ಮಹಾರಾಷ್ಟ್ರ, ಗುಜರಾತ್​ನತ್ತ ಬೀಪರ್​ ಪ್ರಯಾಣ ಬೆಳೆಸಿದ್ದು ಬಿರುಗಾಳಿಯೊಂದಿದೆ ಕಡಲ ತೀರದಲ್ಲಿ ಕಳವಳ ಸೃಷ್ಟಿಸಿದೆ. ಇದು ಬಿಪರ್​ಜಾಯ್​ ಚಂಡಮಾರುತದ ಆರ್ಭಟ. ಅರಬ್ಬಿ ಸಮುದ್ರದಲ್ಲಿ ಜನ್ಮ ತಾಳಿದ ಈ ಬಿಪರ್​ಜಾಯ್​ ಚಂಡಮಾರುತ ಸಮುದ್ರ ತೀರದ ಪ್ರದೇಶಗಳನ್ನ ಅಲ್ಲೋಲ ಕಲ್ಲೋಲ ಮಾಡ್ತಿದೆ. ನಿನ್ನೆ ರಾಜ್ಯದ ಕರಾವಳಿ ಭಾಗದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಬಿಪರ್​ಜಾಯ್, ಇಂದು​ ತನ್ನ ದಂಡಯಾತ್ರೆಯನ್ನ ಗೋವಾ, ಮಹಾರಾಷ್ಟ್ರ, ಗುಜರಾತ್​ನಲ್ಲಿ ಆರಂಭಿಸಿದೆ.

ಬೀಪರ್ ಜಾಯ್​​ ಚಂಡಮಾರುತ ಪಶ್ಚಿಮ ಕರಾವಳಿಯ ಉತ್ತರ -ಈಶಾನ್ಯ ಭಾಗಕ್ಕೆ ತನ್ನ ಪ್ರಯಾಣವನ್ನ ಆರಂಭಿಸಿದೆ. ಈ ಪರಿಣಾಮ ಗೋವಾ, ಮಹಾರಾಷ್ಟ್ರ, ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಬಿರುಗಾಳಿ ಬೀಸುತ್ತಿದೆ.. ಧೂಳು ಮಿಶ್ರಿತ ಬಿರುಗಾಳಿಯ ಆರ್ಭಟಕ್ಕೆ ಗುಜರಾತ್​ನ​ ಅಹಮದಾಬಾದ್​​ ನಗರದ ಜನತೆ ತತ್ತರಿಸಿಹೋಗಿದ್ದಾರೆ. ಅಲ್ಲದೆ ಕರಾವಳಿ ತೀರದಲ್ಲಿ ಅಲೆಗಳ ಅಬ್ಬರ ಸಹ ಜೋರಾಗಿದ್ದು, ಕಡಲ್ಕೊರೆತ ಸಹ ಉಂಟಾಗಿದೆ.. ಆಳೆತ್ತರದ ಅಲೆಗಳು ಸಮುದ್ರ ತೀರದಲ್ಲಿ ಆರ್ಭಿಸುತ್ತಿದ್ದು ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

ಸೌರಾಷ್ಟ್ರ ಹಾಗೂ ಕಚ್​​ ತೀರಪ್ರದೇಶದಲ್ಲೂ ಬಿಪರ್​ ಜಾಯ್​ ಭೀತಿ

ಕರ್ನಾಟಕದಿಂದ ಗೋವಾ, ಮಹಾರಾಷ್ಟ್ರ, ಗುಜರಾತ್ ಮೂಲಕ ಸೌರಾಷ್ಟ್ರ ಹಾಗೂ ಕಚ್​​ ತೀರಪ್ರದೇಶದತ್ತ ಬಿಪರ್​ ಜಾಯ್​ ಚಂಡಾಮಾರುತ ಸಾಗುತ್ತಿದೆ.. ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿ.ಮೀ ಮತ್ತು ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿಮೀ ದೂರದಲ್ಲಿರುವ ಚಂಡಮಾರುತ ಗಂಟೆಗೆ 145 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ.. ಚಂಡಮಾರುತದ ಪರಿಣಾಮ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ.. ಅಲ್ಲದೆ ನೆರೆಯ ರಾಷ್ಟ್ರ ಪಾಕಿಸ್ತಾನದ ಮೇಲೂ ಬಿಪರ್​ ಜಾಯ್ ದೃಷ್ಟಿ ನೆಟ್ಟಿದ್ದು, ಕರಾಚಿಯ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಚಂಡಮಾರುತದ ಪರಿಣಾಮ ಕರ್ನಾಟಕ ಹಾಗೂ ಕೇರಳದಲ್ಲಿ ಜೂನ್ 13ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ.. ಕರಾವಳಿಯಲ್ಲಿ ಅಲೆಗಳ ಅಬ್ಬರ ಹಾಗೂ ಬಿರುಗಾಳಿಯ ಬೀಸುತ್ತಿರೋದ್ರಿಂದ ಗುಜರಾತ್, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ IMD ಸೂಚಸಿದೆ.. ಮುಂದಿನ 6 ಗಂಟೆಗಳ ಕಾಲ ಕರ್ನಾಟಕ ಹಾಗೂ ಕೇರಳದ ಕೆಲ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ.

ಬಿಪರ್​ ಜಾಯ್ ಎಫೆಕ್ಟ್​.. ರಾಜ್ಯದ ಕೆಲವಡೆ ಮಳೆ

ಬಿಪರ್​ ಜಾಯ್ ಚಂಡಮಾರುತದ ಎಫೆಕ್ಟ್​ನಿಂದ ಹಾಸನ ಹಾಸನ ನಗರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.. ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಗಾಳಿ ಸಹಿತ ಮಳೆ ಸುರಿಯುತ್ತಿದೆ.. ಇನ್ನೂ ಬೆಣ್ಣೆನಗರಿ ದಾವಣಗೆರೆಯಲ್ಲೂ 20 ನಿಮಿಷಕ್ಕೂ ಅಧಿಕ ಕಾಲ ಧಾರಾಕಾರ ಮಳೆಯಾಗಿದೆ. ಒಟ್ಟಿನಲ್ಲಿ ಮಾನ್ಸೂನ್​ಗೂ ಮುನ್ನ ಲಗ್ಗೆ ಇಟ್ಟ ಬಿಪರ್​ ಜಾಯ್​ ಚಂಡಮಾರುತ ಕರಾವಳಿ ತೀರದ ಪ್ರದೇಶಗಳನ್ನ ಕಂಗೆಡಿಸಿದೆ.. ಚಂಡಮಾರುತದ ಎಫೆಕ್ಟ್​ ಮಾನ್ಸೂನ್​ ಮೇಲೂ ತಟ್ಟುವ ಸಾಧ್ಯತೆ ಇದ್ದು ಮುಂಗಾರು ಮಳೆ ಈ ಬಾರಿ ತಡವಾಗಿ ಆರಂಭವಾಗುವ ಭೀತಿ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲೂ ಬಿಪರ್ ಜಾಯ್ ಚಂಡಮಾರುತದ ಆರ್ಭಟ.. ಕರಾವಳಿಯಲ್ಲಿ ಇನ್ನೂ 4 ದಿನ ಮಳೆ ಸಾಧ್ಯತೆ!

https://newsfirstlive.com/wp-content/uploads/2023/06/death-4-1.jpg

Load More