newsfirstkannada.com

ರಾಜ್ಯಕ್ಕೂ ತಟ್ಟಿದ ಬಿಪರ್​​ ಜಾಯ್​​ ಚಂಡಮಾರುತ.. ಇನ್ನೂ 4 ದಿನ ಭಾರೀ ಮಳೆ

Share :

10-06-2023

  ಕಡಲ ತೀರಗಳಲ್ಲಿ ಬಿಪರ್​​ಜಾಯ್ ಪ್ರಚಂಡ ಶಕ್ತಿ!

  ಮುಂದಿನ 24 ಗಂಟೆ ಬಿಪರ್​ಜಾಯ್ ಆರ್ಭಟ..!

  ಮಂಗಳೂರು ಕರಾವಳಿಯಲ್ಲಿ ಅಲೆಗಳ ಆರ್ಭಟ!

ಬೆಂಗಳೂರು: ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತದ ಎಫೆಕ್ಟ್​​ನಿಂದಾಗಿ ಎದ್ದಿರುವ ಬಿಪರ್​ಜಾಯ್​ ಬೃಹತ್ ಚಂಡಮಾರುತ ಸ್ವಲ್ಪ ಸ್ವಲ್ಪವೇ ತನ್ನ ಪ್ರಭಾವ ಶುರು ಮಾಡಿದೆ. ಕಡಲ ತೀರಗಳಲ್ಲಿ ಅಲೆಗಳ ಆರ್ಭಟ ಜೋರಾಗ್ತಿದೆ.. ಆಳೆತ್ತರದ ಅಲೆಗಳು ಚಂಡಮಾರುತದ ಮುನ್ಸೂಚನೆ ನೀಡುತ್ತಿವೆ..

ತೀವ್ರ ವಾಯುಭಾರ ಕುಸಿತವು ಬಿರುಗಾಳಿಯಾಗಿ ಬದಲಾದರೆ ಅಂದ್ರೆ ಗಾಳಿಯ ವೇಗ ಪ್ರತಿಗಂಟೆಗೆ 62ರಿಂದ 88 ಕಿ.ಮೀನಷ್ಟು ಇದ್ರೆ ಅದನ್ನು ಚಂಡಮಾರುತ ಅಂತಾರೆ. ಸದ್ಯ ಅರಬ್ಬಿಸಮುದ್ರದಲ್ಲಿ ಬಿಪರ್​ಜಾಯ್​ ಚಂಡಮಾರುತದ ಅಲೆ ಆತಂಕ ಸೃಷ್ಟಿಸಿದೆ. ಕಡಲತೀರದ ನಿವಾಸಿಗಳು ಭಯಭೀತರಾಗಿದ್ದಾರೆ.
ಉಗ್ರರೂಪ ಪಡೆಯುತ್ತಿರುವ ಬಿಪರ್​ಜಾಯ್ ಚಂಡಮಾರುತ!

ಮುಂದಿನ 24 ಗಂಟೆಗಳಲ್ಲಿ ಆರ್ಭಟಿಸಲಿದೆ ಬಿಪರ್​ಜಾಯ್!

ನಿರೀಕ್ಷೆಯಂತೆ ಬಿಪರ್​ಜಾಯ್ ಚಂಡಮಾರುತ ತನ್ನ ಕಬಂದಬಾಹು ಚಾಚುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಬಿಪರ್​ಜಾಯ್ ತೀವ್ರಗೊಳ್ಳಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಚಂಡಮಾರುತ ಪಶ್ಚಿಮ ಕರಾವಳಿಯ ಉತ್ತರ-ಈಶಾನ್ಯಕ್ಕೆ ಚಲಿಸುತ್ತಿದ್ದು ಗೋವಾ, ಮಹಾರಾಷ್ಟ್ರ, ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಐಎಂಡಿ ಎಚ್ಚರಿಕೆ ನೀಡಿದೆ. ಸೌರಾಷ್ಟ್ರ ಹಾಗೂ ಕಚ್​​ ತೀರಪ್ರದೇಶದಲ್ಲಿ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ!

ಪ್ರಸ್ತುತ ಗೋವಾದಿಂದ ಪಶ್ಚಿಮಕ್ಕೆ 690 ಕಿಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿ.ಮೀ ಮತ್ತು ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿಮೀ ದೂರದಲ್ಲಿರುವ ಚಂಡಮಾರುತ ಗಂಟೆಗೆ 145 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಚಂಡಮಾರುತದ ಪರಿಣಾಮ ದಕ್ಷಿಣ ಭಾರತದಲ್ಲೂ ಮುಂದಿನ 4 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ ಹಾಗೂ ಕೇರಳದಲ್ಲಿ ಜೂನ್ 13ರವರೆಗೆ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮಂಗಳೂರಿನ ಕರಾವಳಿಯಲ್ಲಿ ಹೆಚ್ಚಾದ ಅಲೆಗಳ ಆರ್ಭಟ!

ಬಿಪರ್​​ಜಾಯ್​ ಚಂಡಮಾರುತ ಬರಲಿದೆ ಅಂತ 3 ದಿನಗಳ ಹಿಂದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಸದ್ಯ ಮಂಗಳೂರಿನ ಬಟ್ಟಂಪಾಡಿ ಕಡಲತೀರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಕಡಲ ಕಿನಾರೆಗೆ ಅಪ್ಪಳಿಸುತ್ತಿರುವ ಆಳೆತ್ತರದ ಅಲೆಗಳು ಚಂಡಮಾರುತ ಏಳಲು ಷರಾ ಬರೆಯುತ್ತಿವೆ..

ಅಲೆಗಳ ಅಬ್ಬರಕ್ಕೆ ತೀರ ಪ್ರದೇಶದ ಮನೆಗಳು, ರೆಸಾರ್ಟ್​ ಹಾಗೂ ರಸ್ತೆಗಳು ಸಮುದ್ರ ಪಾಲಾಗಿವೆ. ಈ ಭಾಗದ ಮತ್ತಷ್ಟು ಮನೆಗಳಿಗೆ ಅಪಾಯ ಆಗುವ ಸಾಧ್ಯತೆ ಇದೆ. ಹೀಗಾಗಿ ಕಡಲತೀರದ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಸೂಚಿಸಿದೆ. ಕರಾವಳಿ ಭಾಗದಲ್ಲಿ ಹೈಅಲರ್ಟ್​ ಘೋಷಿಸಲಾಗಿದೆ.

ಇನ್ನು ಕರಾವಳಿ ತೀರದ ಜನ ಚಂಡಮಾರುತದ ಭೀತಿಯಲ್ಲಿದ್ದಾರೆ.. ಹಲವು ವರ್ಷಗಳಿಂದ ಬಟ್ಟಂಪಾಡಿಯಲ್ಲಿ ನೆಲೆ ಕಟ್ಟಿರುವ ನಿವಾಸಿಗಳು ಬೇರೆ ಕಡೆ ಹೋಗಲಾರದೇ, ಅಲ್ಲಿಯೂ ಇರಲೂ ಆಗದೇ ಭಯದಲ್ಲೇ ಜೀವ ದೂಡುತ್ತಿದ್ದಾರೆ.

ಒಂದ್ಕಡೆ ಚಂಡಮಾರುತದ ಎಫೆಕ್ಟ್​ನಿಂದಾಗಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮುಂಗಾರಿನ ನಿರೀಕ್ಷೆಯಲ್ಲಿದ್ದ ರೈತರು ಕೃಷಿ ಕಾರ್ಯಕ್ಕೆ ಸಜ್ಜಾಗ್ತಿದ್ದಾರೆ. ಮತ್ತೊಂದೆಡೆ ಚಂಡಮಾರುತದ ಭೀತಿಯಿಂದ ಕಡಲ ತೀರದ ನಿವಾಸಿಗಳು ಆತಂಕಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಕ್ಕೂ ತಟ್ಟಿದ ಬಿಪರ್​​ ಜಾಯ್​​ ಚಂಡಮಾರುತ.. ಇನ್ನೂ 4 ದಿನ ಭಾರೀ ಮಳೆ

https://newsfirstlive.com/wp-content/uploads/2023/06/Bipar-Joy.jpg

Load More