ಮುಂಗಾರು ಮಳೆಗಾಗಿ ಕಾದು ಕೂತಿದೆ ರಾಜ್ಯ
ರಾಜ್ಯದ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಹೊಸ ಸೈಕ್ಲೋನ್ ಆರ್ಭಟ ಹೇಗಿದೆ..?
ಕೇರಳಕ್ಕೆ ಮುಂಗಾರು ಮಳೆ ಆಗಮನವಾಗ್ತಿದ್ದಂತೆ ಇತ್ತ ರಾಜ್ಯದಲ್ಲೂ ಅದರ ಎಫೆಕ್ಟ್ ಶುರುವಾಗ್ತಿದೆ. 3 ದಿನಗಳ ಹಿಂದೆಯೇ ಹವಾಮಾನ ಇಲಾಖೆ ಬಿಪರ್ಜಾಯ್ ಬರುವ ಮುನ್ಸೂಚನೆ ನೀಡಿತ್ತು. ಸದ್ಯ ಬಿಪರ್ಜಾರ್ ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿದೆ. ದೇವರ ನಾಡಿನಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದ್ದು ವಾಹನ ಸವಾರರ ಪಾಡಂತೂ ಹೇಳತೀರದಂತಾಗಿದೆ. ತಿರುವನಂತಪುರಂ, ಇಡುಕ್ಕಿ, ಕೊಲ್ಲಂ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗ್ತಿದ್ದು, ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 3-4 ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆ ಎಚ್ಚರಿಕೆ
ಅತ್ತ ಕೇರಳದಲ್ಲಿ ಮುಂಗಾರು ಆಗಮನದಿಂದ ವರುಣ ಆರ್ಭಟಿಸುತ್ತಿದ್ರೆ ಅದರ ಎಫೆಕ್ಟ್ ಕರ್ನಾಟಕದ ಮೇಲೂ ಆಗಿದೆ. ರಾಜ್ಯದ ಹಲವಡೆ ಮಳೆಯಾಗ್ತಿದ್ದು ವರುಣ ಅವಾಂತರ ಸೃಷ್ಟಿಸಿದ್ದಾನೆ. ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಚಂಡಮಾರುತ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಕರ್ನಾಟಕ, ಕೇರಳ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ಮಳೆ ತೀವ್ರಗೊಳ್ಳುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಅಲ್ಲದೇ ಈಗಾಗಲೇ ಕೇರಳದಲ್ಲಿ ಮಳೆಯಾಗ್ತಿದ್ದು ಕಡಲಿನ ನೀರಿನ ಮಟ್ಟ ಹೆಚ್ಚಾಗಿ ಪ್ರಕ್ಷುಬ್ದಗೊಂಡಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ
ನಿರೀಕ್ಷೆಯಂತೆ ಬಿಪರ್ಜಾಯ್ ಚಂಡಮಾರುತ ತನ್ನ ಕಬಂದಬಾಹು ಚಾಚುತ್ತಿದೆ. ಮುಂದಿನ 36 ಗಂಟೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಆರ್ಭಟಿಸಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 3-4 ದಿನಗಳು ಪಶ್ಚಿಮ ಕರಾವಳಿ ಭಾಗದ ಕರ್ನಾಟಕ, ಕೇರಳ, ಗೋವಾ, ಮುಂಬೈ, ಗುಜರಾತ್, ಲಕ್ಷ್ಮದ್ವೀಪದ ತೀರಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಅರಬ್ಬಿಸಮುದ್ರದ ಉತ್ತರದ ಕಡೆ ಚಲಿಸುತ್ತಿರುವ ಚಂಡಮಾರುತ ಗುಜರಾತ್, ಗೋವಾ, ಮುಂಬೈ ಕರಾವಳಿ ತೀರದಿಂದ ಸುಮಾರು 870 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಗಂಟೆಗೆ 155 ಕಿ.ಮೀಗೂ ಅಧಿಕ ವೇಗದಲ್ಲಿ ಗಾಳಿ ಬೀಸುತ್ತಿದ್ದು ಗರಿಷ್ಠ 180 ಕಿ.ಮೀವರೆಗೂ ವೇಗ ಪಡೆಯುವ ಮುನ್ಸೂಚನೆ ಇದೆ. ಜೂನ್ 11ರವರೆಗೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಗೋವಾ, ಮಹಾರಾಷ್ಟ್ರ, ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿರುವ ಮೀನುಗಾರರು ಮರಳುವಂತೆ ಸೂಚನೆ ನೀಡಲಾಗಿದೆ. ಇನ್ನು ಸಮುದ್ರ ತೀರ ಪ್ರದೇಶಗಳಲ್ಲಿ ನೆಲೆಸಿರುವ ಜನರ ಸ್ಥಳಾಂತರಕ್ಕೆ ಕ್ರಮ ವಹಿಸಲಾಗಿದೆ. ಎಲ್ಲಾ ಬಂದರುಗಳಿಗೆ ರಿಮೋಟ್ ಎಚ್ಚರಿಕೆ ಸಂಕೇತ ರವಾನೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳು ಕಾರ್ಯಾಚರಣೆಗೆ ಸಜ್ಜಾಗಿವೆ.
ಒಟ್ಟಾರೆ ಮುಂಗಾರು ಆಗಮನದಿಂದ ಕೇರಳ, ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ, ಅಸ್ಸಾಂ, ಮಿಜೋರಾಂ, ಲಕ್ಷದ್ವೀಪ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ. ಅಲ್ಲದೇ ಕೆಲವು ರಾಜ್ಯಗಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಚಂಡಮಾರುತದ ಪರಿಣಾಮ ತುಮಕೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ