ಸೈತಾನ್ ಬಿಪರ್ಜಾಯ್ಗೆ ಹೆದರಿ 1 ಲಕ್ಷ ಜನರ ಸ್ಥಳಾಂತರ
ಸೇನೆಯ 5 ಹಡಗುಗಳು, 3 ವಿಮಾನಗಳಿಂದ ರಕ್ಷಣಾ ಕಾರ್ಯಾ
ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಸೈತಾನ ರೂಪ ತಾಳಿದ ಸೈಕ್ಲೋನ್
10 ದಿನಗಳ ಕಾಲ ಅರಬ್ಬಿ ಸಮುದ್ರದಲ್ಲಿ ಚಲಿಸಿದ್ದ ಬಿಪರ್‌ಜಾಯ್ ಚಂಡಮಾರುತ ಅಂತಿಮವಾಗಿ ಭೂಮಿಯ ಮೇಲೆ ಚಲಿಸಲು ಪ್ರಾರಂಭಿಸಿದೆ. ಮುಂದಿನ 5 ದಿನಗಳ ಕಾಲ ಬಿಪರ್‌ಜಾಯ್ ಚಂಡಮಾರುತ ಯಾವ ದಿಕ್ಕಿಗೆ ಚಲಿಸುತ್ತದೆ ಅದರ ಪರಿಣಾಮ ಹೇಗಿರಲಿದೆ ಗೊತ್ತಾ?.
ಗುಜರಾತ್‌ಗೆ ಅಪ್ಪಳಿಸಿದ ಬಿಪರ್‌ಜಾಯ್ ಚಂಡಮಾರುತ
10 ದಿನಗಳ ಕಾಲ ಅರಬ್ಬಿ ಸಮುದ್ರದಲ್ಲಿ ಚಲಿಸಿದ್ದ ಬಿಪರ್‌ಜಾಯ್ ಚಂಡಮಾರುತ ಅಂತಿಮವಾಗಿ ಗುಜರಾತ್‌ಗೆ ಅಪ್ಪಳಿಸಿದೆ. ಚಂಡಮಾರುತ ಬಿಪರ್‌ಜಾಯ್ ಎಂದರೆ, ಬಂಗಾಳಿ ಭಾಷೆಯಲ್ಲಿ ವಿಪತ್ತು ಎಂದರ್ಥ. ಚಂಡಮಾರುತ ರೌದ್ರ ನರ್ತನಕ್ಕೆ ಕಚ್ ಮತ್ತು ಸೌರಾಷ್ಟ್ರ ಕರಾವಳಿ ತತ್ತರಿಸಿದೆ. ಈಗಾಗಲೇ ಅಪಾಯ ಪ್ರದೇಶಗಳಲ್ಲಿರುವ ಸುಮಾರು 1 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಚಂಡಮಾರುತದಿಂದಾಗಿ ದುರ್ಬಲ ಪ್ರದೇಶಗಳಲ್ಲಿರುವ ಜನರಿಗಾಗಿ ಸರ್ಕಾರ ಸಹಾಯವಾಣಿ ತೆರೆದಿದೆ.
ಗುಜರಾತ್ನ ಕರಾವಳಿ ಭಾಗದ 8 ಜಿಲ್ಲೆಗಳಲ್ಲಿ ಚಂಡಮಾರುತದ ಪರಿಣಾಮ ಬೀರಿದೆ. ಬೆಳಗಿನ ಜಾವದ ವೇಳೆಗೆ ಹೆಚ್ಚು ಸಕ್ರಿಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತ ಹೆಚ್ಚು ತೀವ್ರವಾಗಿದ್ದು, ಕರಾವಳಿಗೆ ಅಪ್ಪಳಿಸುತ್ತಿದ್ದಂತೆ ಹಲವಾರು ಸ್ಥಳಗಳಲ್ಲಿ ಮರಗಳನ್ನು ಉರುಳಿಸಿದೆ. ಓಖಾ ಬಂದರಿನಲ್ಲಿ ಹಲವು ದೋಣಿಗಳು ಹಾನಿಗೊಳಗಾಗಿವೆ. ದಟ್ಟವಾದ ಮೋಡಗಳು ಕಚ್ ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಗಳಲ್ಲಿ ಸೈಕ್ಲೋನ್ ಸೈತಾನನ ರೂಪ ತಾಳಿದೆ.
ಮುಂದಿನ 5 ದಿನಗಳ ಕಾಲ ಬಿಪರ್‌ಜಾಯ್ ಯಾವ ದಿಕ್ಕಿಗೆ ಚಲಿಸುತ್ತದೆ, ಪರಿಣಾಮ ಹೇಗಿರಲಿದೆ, ಯಾವೆಲ್ಲಾ ಪ್ರದೇಶಗಳನ್ನು ದಾಟಲಿದೆ ಎನ್ನುವ ವಿವರನ್ನು ದಿನಾಂಕದ ಪ್ರಕಾರ ಪಟ್ಟಿ ಮಾಡಲಾಗಿದೆ.
ದಿನಾಂಕ ಗಾಳಿಯ ವೇಗ
ಬಿಪರ್ಜಾಯ್ನಿಂದ ಜನರ ರಕ್ಷಣೆಗೆ ನಿಂತ ಕೇಂದ್ರ ಸರ್ಕಾರ
ಸರ್ಕಾರವು ಕರಾವಳಿ ಪ್ರದೇಶಗಳಲ್ಲಿ 76 ವಿವಿಧೋದ್ದೇಶ ಸೈಕ್ಲೋನ್ ಶೆಲ್ಟರ್‌ಗಳನ್ನು ನಿರ್ಮಿಸಿದೆ. 25 ರೇಡಿಯೋ ಸೆಟ್‌ಗಳು ಮತ್ತು 15 ಸ್ಯಾಟಲೈಟ್ ಫೋನ್‌ಗಳೊಂದಿಗೆ ಸಂವಹನ ಮಾರ್ಗಗಳನ್ನು ಬಲಪಡಿಸಲಾಗಿದ್ದು, ವಿದ್ಯುತ್ ಮತ್ತು ರಸ್ತೆ ಮೂಲಸೌಕರ್ಯ ಇಲಾಖೆಗಳ ತಂಡಗಳು ಸಂಪರ್ಕ ಮತ್ತು ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲು ಸ್ಟ್ಯಾಂಡ್‌ಬೈನಲ್ಲಿವೆ.
ಸೇನೆಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ
ಸೇನೆಯು 11 ಪರಿಹಾರ ಕಾಲಂಗಳನ್ನು ನಿಯೋಜಿಸಿದೆ, ವಾಯುಪಡೆಯು ತಕ್ಷಣದ ನಿಯೋಜನೆಗಾಗಿ 5 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ, ನೌಕಾಪಡೆಯು 10 ರಕ್ಷಣಾ ತಂಡಗಳನ್ನು ಸಿದ್ಧಗೊಳಿಸಿದೆ ಮತ್ತು ಕೋಸ್ಟ್ ಗಾರ್ಡ್ 5 ಹಡಗುಗಳು ಮತ್ತು 3 ವಿಮಾನಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸಿದ್ಧಪಡಿಸಿದೆ.
ಗಡಿ ಭದ್ರತಾ ಪಡೆ ತನ್ನ ಸಂಪನ್ಮೂಲಗಳನ್ನು ಹೆಚ್ಚಿಸಿದೆ ಮತ್ತು ನಾಗರಿಕ ಅಧಿಕಾರಿಗಳೊಂದಿಗೆ ಪರಿಣಾಮಕಾರಿ ಸಮನ್ವಯವನ್ನು ಸ್ಥಾಪಿಸಿದೆ. ಅಲ್ಲದೆ, ಗುಜರಾತ್ನ ಜಿಲ್ಲೆಗಳ ರಕ್ಷಣೆಗೆ ಅಂತ ಕೇಂದ್ರ ಸರ್ಕಾರದ ಸಚಿವರೇ ಫೀಲ್ಡ್ ಗಿಳಿದಿದ್ದು, ಒಬ್ಬ ಕೇಂದ್ರ ಸಚಿವರಿಗೂ ಗುಜರಾತ್ನ ಒಂದೊಂದು ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಕಣ್ಣು ಬಿಟ್ಟು ನೋಡಿದ್ರೆ ಗುಜರಾತ್ನಲ್ಲು ಜೋರು ಗಾಳಿಮಳೆ. ಸೂರ್ಯನೀದ್ದರೂ ಬೆಳಕಿಲ್ಲದೆ ಕತ್ತಲೋ, ಕತ್ತಲು. ಪ್ರಕೃತಿಯು ತನ್ನ ಕೋಪ ತಣಿಸಿಕೊಂಡು ಜನರ ಮೇಲೆ ಕರುಣೆ ತೋರಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ