newsfirstkannada.com

ಮುಂಗಾರಿನ ಹರುಷ ಕಿತ್ತುಕೊಂಡ ಸೈಕ್ಲೋನ್.. ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಎಚ್ಚರಿಕೆ

Share :

13-06-2023

  ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಬಿರುಗಾಳಿ-ಮಳೆ

  ವಿಮಾನ, ರೈಲು ಪ್ರಯಾಣಕ್ಕೆ ತೊಂದರೆ

  ಲಿಂಗನಮಕ್ಕಿ ಜಲಾಶಯಕ್ಕೆ ತಟ್ಟಿದ ಬರ, ನೀರು ಕುಸಿತ

ಪಶ್ಚಿಮ ಕರಾವಳಿಯಲ್ಲಿ ಬಿಪರ್‌ಜಾಯ್ ಆರ್ಭಟ ಶುರುವಾಗಿದೆ.. ಅರಬ್ಬಿಯಲ್ಲಿ ವಾಯುಭಾರ ಕುಸಿತದಿಂದ ಪಶ್ಚಿಮ ಕಿನಾರೆಯಲ್ಲಿ ಚಂಡಮಾರುತ ಚಂಡೆಮದ್ದಳೆ ಆಡ್ತಿದೆ. ಕೇರಳದಿಂದ ಹಿಡಿದು ಗುಜರಾತ್​​​ವರೆಗೆ ಕಡಲತಡಿ ಪ್ರಕ್ಷುಬ್ಧವಾಗಿದ್ದು, ಭಾರೀ ಬಿರುಗಾಳಿ ಸಹಿತ ವ್ಯಾಪಕ ಮಳೆ ಆಗ್ತಿದೆ. ಒಳನಾಡು ಭಾಗದಲ್ಲೂ ಜಿಟಿಜಿಟಿ ಮಳೆಯಿದ್ದು, ಮುಂದಿನ 2-3 ದಿನ ಮಳೆ ಬಿರುಸು ಪಡೆಯಲಿದೆ.

ವಿಮಾನ, ರೈಲು ಪ್ರಯಾಣಕ್ಕೆ ಎಫೆಕ್ಟ್​​!

ಚಂಡಮಾರುತ ತೀವ್ರ ಹೆಚ್ಚಾಗ್ತಿದ್ದು, ಈಗಾಗಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ರದ್ದಾಗಿದೆ.. ಬಲವಾದ ಗಾಳಿ, ಮಳೆಯಿಂದ ರನ್‌ವೇ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ನಡುವೆ ಸೈಕ್ಲೋನ್ ಅಬ್ಬರಿಸಲಿರುವ ಗುಜರಾತ್‌ನಲ್ಲಿ ರೈಲುಗಳ ಓಡಾಟಕ್ಕೂ ಬ್ರೇಕ್ ಬಿದ್ದಿದೆ. ಸುಮಾರು 56 ರೈಲುಗಳು ರದ್ದಾಗಿದ್ದು, ಜೂನ್ 15ರ ತನಕ ಒಟ್ಟು 95 ರೈಲುಗಳು ರದ್ದುಗೊಳ್ತಿವೆ.

ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಮಳೆ

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ 3 ದಿನ ಮಳೆ ನಿರೀಕ್ಷೆ ಇದೆ.. ಕರಾವಳಿ ಭಾಗ ಸೇರಿ ರಾಜ್ಯದ ನಾನಾ ಭಾಗದಲ್ಲಿ ವರುಣಾರ್ಭಟ ಇರಲಿದೆ.. ದಕ್ಷಿಣ ಒಳನಾಡು, ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇರಲಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಉಡುಪಿ, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಅಲರ್ಟ್​​​ ಘೋಷಿಸಲಾಗಿದೆ. ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40 ರಿಂದ 45 ಮೀಟರ್‌ನಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುವ ವಾತಾವರಣ ಇದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.. ಇನ್ನು, ಉತ್ತರ ಒಳನಾಡಿನ ಕೆಲ ಭಾಗದಲ್ಲಿ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ..

ಕಾವೇರಿ ಕೊಳ್ಳದತ್ತ ತಿರುಗಿಯೂ ನೋಡದ ಮಳೆರಾಯ

ಈಗಾಗಲೇ ಕೆಲವು ಭಾಗದಲ್ಲಿ ಉತ್ತಮ ಮಳೆ ಆಗ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಾತ್ರ ವರುಣ ನಾಪತ್ತೆ ಆಗಿದ್ದಾನೆ.. ಪರಿಣಾಮ ಕನ್ನಡಿಗರ ಜೀವನಾಡಿ ಕಾವೇರಿ ಬರಿದಾಗಿದ್ದು, ಮಂಡ್ಯ- ಮೈಸೂರು ಅನ್ನದಾತರಲ್ಲಿ ಬೆಳೆ ನಷ್ಟದ ಆತಂಕ ಶುರುವಾಗಿದೆ.. ಹೀಗಾಗಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ದೇವರ ಮೊರೆ ಹೋಗ್ತಿದ್ದಾರೆ.. ಇವತ್ತು, KRS ಡ್ಯಾಂ ಮುಂಭಾಗ ವಿಶೇಷ ಹೊಮ-ಹವನ ಹಮ್ಮಿಕೊಳ್ಳಲಾಗಿದೆ..

ಲಿಂಗನಮಕ್ಕಿ ಜಲಾಶಯಕ್ಕೆ ತಟ್ಟಿದ ಬರ, ತೀವ್ರ ನೀರು ಕುಸಿತ

ಲಿಂಗಮಮಕ್ಕಿ.. ನಾಡಿಗೆ ಪೈಸೆ ಲೆಕ್ಕದಲ್ಲಿ ವಿದ್ಯುತ್​ ಉತ್ಪಾದಿಸಿ ನೀಡುತ್ತಿರುವ ಹೆಮ್ಮೆಯ ಜಲ ವಿದ್ಯುತ್​ ಕೇಂದ್ರ.. ಆದ್ರೆ, ಇದೀಗ ಲಿಂಗನಮಕ್ಕಿಯಲ್ಲೂ ನೀರು ಕುಸಿತ ಆಗಿದೆ.. ಇದರಿಂದ ಸಿಗಂದೂರು ಶ್ರೀಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆತಂಕ ಶುರುವಾಗಿದೆ.. ಮುಂಗಾರು ಕೈಕೊಟ್ಟ ಕಾರಣ ಲಾಂಚ್​ಗಳ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.. ಆದ್ರೆ, ಜನರಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದ್ದಾರೆ..
ಒಟ್ಟಾರೆ, ಒಂದ್ಕಡೆ ಮಳೆ, ಇನ್ನೊಂದ್ಕಡೆ ಬರದ ಛಾಯೆ, ಜನರನ್ನ ಕಂಗೆಡಿಸಿದೆ.. ಮುಂದಿನ 3-4 ದಿನದಲ್ಲಿ ಪರಿಸ್ಥಿತಿ ಸುಧಾರಿಸುವ ಆಶಾಭಾವನೆಯನ್ನ ಹವಾಮಾನ ಇಲಾಖೆ ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಗಾರಿನ ಹರುಷ ಕಿತ್ತುಕೊಂಡ ಸೈಕ್ಲೋನ್.. ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಎಚ್ಚರಿಕೆ

https://newsfirstlive.com/wp-content/uploads/2023/06/CYLCONE-1.jpg

Load More