newsfirstkannada.com

ಬಿಪರ್​ಜಾಯ್​ನಿಂದ ಜನರ ಜೀವನ ಅಯೋಮಯ.. ಹಗಲು ರಾತ್ರಿ ಎನ್ನದೆ ಜನರ ರಕ್ಷಣೆಗೆ ನಿಂತ NDRF ಟೀಂ

Share :

17-06-2023

    ಗುಜರಾತ್​ನಲ್ಲಿ ನೆಲಕ್ಕೆ ಉರುಳಿದ ಮನೆ, ಮರ, ವಿದ್ಯುತ್​ ಕಂಬಗಳು

    ಬಿಪರ್​ಜಾಯ್ ನರ್ತನಕ್ಕೆ ಹಳ್ಳಿ-ನಗರಗಳೆಲ್ಲ ನಾಶ, ಜನ ಕಂಗಾಲು ​

    1000 ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದೆ ಕತ್ತಲು, ರಾಜಸ್ಥಾನ ನೆಕ್ಸ್ಟ್​ ಟಾರ್ಗೆಟ್​

ಬಿಪರ್​ಜಾಯ್ ಗುಜರಾತ್​ ಜನರ ಜೀವನವನ್ನು ಡ್ಯಾಮೇಜ್​ ಮಾಡಿದೆ. ಗುಜರಾತ್​ನ ಪರಿಸ್ಥಿತಿ ಕೇಳಿದ್ರೆ, ಕೂಸು ಹುಟ್ಟೋಕೆ ಮುಂಚೆ, ಕುಲಾಯಿ ಹೊಲೆಸಿದ್ವಿ. ಬಿಪರ್​ಜಾಯ್ ಬಂದು ಕೂಸು ಇಲ್ಲ ಕುಲಾಯಿ ಇಲ್ಲ ಅನ್ನೋ ಹಾಗೆ ಮಾಡಿದೆ ಅನ್ನೋ ಹಾಗಾಗಿದೆ. ಎಲ್ಲೆ ಹೋದ್ರು, ಜನರ ನೋವಿನ ಗೋಳಿನ ಕಥೆಗಳೇ ಕಣ್ಣಿಗೆ ಬೀಳ್ತಿವೆ.

ಬಿಪರ್​ಜಾಯ್ ಸೈಕ್ಲೋನ್ ಗುಜರಾತ್​ನಲ್ಲಿ ಮಾಸದ ಗಾಯ ಮಾಡಿದೆ.. ಕಣ್ಣಿಗೆ ಕಾಣುವ ಪ್ರತಿ ಜಾಗವೂ ಚಂಡಮಾರುತ ಮಾಡಿದ ಹಾನಿಗೆ ಸಾಕ್ಷಿಯನ್ನ ಹೇಳ್ತಿವೆ.. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅಸ್ತಿಪಂಜರದ ರೀತಿ ಗೋಚರ ಆಗ್ತಿವೆ.. ಸಾವಿರಾರು ಮರಗಳು, ವಿದ್ಯುತ್​ ಕಂಬಗಳು ಅನಾಥವಾಗಿ ಬಿದ್ದಿವೆ.. ಗುಜರಾತ್ ಬಹುತೇಕ ಹಳ್ಳಿಗಳು ಕಗ್ಗತ್ತಲಲ್ಲಿ ದುಸ್ವಪ್ನ ಕಾಣ್ತಿವೆ.

ಬಿರುಸಿನ ಮಳೆಯಿಂದ ಹಳ್ಳಿ-ಪಟ್ಟಣಗಳಲ್ಲಿ ಸೈಕ್ಲೋನ್​ ದಾಳಿ ಮಾಡಿದೆ. ಬಿದ್ದ ಮಳೆ ನೀರು ಮನೆಗಳಿಗೆ ನುಗ್ಗಿ ಜನರನ್ನ ನಿರಾಶ್ರಿತರನ್ನಾಗಿ ಮಾಡಿದೆ. ಹಲವು ಮನೆಗಳು ಧರಾಶಾಹಿ ಆಗಿದ್ದು, ನೋವಿನ ಕಥೆಗಳನ್ನ ಹೇಳ್ತಿವೆ. ಆಸ್ಪತ್ರೆ, ಕಟ್ಟಡಗಳಲ್ಲಿ ನೀರು ತುಂಬಿದ್ದರಿಂದ ನೋವಿಗೂ ಮುಲಾಮು ಸಿಗದಂತಾಗಿದೆ. ರಸ್ತೆಗಳಲ್ಲಿ ನಿಂತ ನೀರು ಸಂಚಾರಕ್ಕೆ ಆಗಮಿಸ್ತಿರುವ ವಾಹನಗಳಿಂದ ಸಮಯದ ಕಂದಾಯ ಕಟ್ಟಿಸಿಕೊಳ್ತಿವೆ. ಬಿಪರ್​ಜಾಯ್​​ ಚಂಡೆಮದ್ದಳೆಗೆ ಇಬ್ಬರು ಬಲಿಯಾಗಿದ್ದು, 22 ಜನ ಗಾಯಗೊಂಡಿದ್ದಾರೆ.

ಭೀಕರ ಗಾಳಿ ಮಳೆಗೆ ಕಟ್ಟಡದ ಮೇಲ್ಛಾವಣಿ ಕುಸಿತ

ಗುಜರಾತ್​ನ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಿ ಬೊಬ್ಬೆರಿದಿರುವ ಬಿಪರ್​ಜಾಯ್​ ತೂಫಾನ್​ ಹೊಡೆತಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಇಲ್ಲಿನ ಮೊಕಾಲಿ ಪ್ರದೇಶದಲ್ಲಿ ಹಲವು ಕಟ್ಟಡಗಳ ಮೇಲ್ಚಾವಣಿ ಇಲ್ಲದೆ ಬರಿದಾಗಿವೆ. ಗಾಳಿಯ ಹೊಡೆತಕ್ಕೆ ಮನೆಯ ಮೇಲಿನ ಹೆಂಚುಗಳು ಕಿತ್ತು ಹಾರಿ ಹೋಗಿದ್ದು, ಪುಡಿ ಪುಡಿಯಾಗಿವೆ.

ಬಿರುಗಾಳಿಗೆ ಪೆಟ್ರೋಲ್​ ಬಂಕ್​ ಸ್ಥಿತಿ ಅಯೋಮಯ

ಚಂಡಮಾರುತದ ಏಟು ತಿಂದ ಈ ಪೆಟ್ರೋಲ್​ ಬಂಕ್​ ಕಿತ್ತು ಹೋಗಿದೆ. ಮೇಲಿನ ಮೇಲ್ಚಾವಣಿಯೂ ಭೀಕರ ಗಾಳಿಯಲ್ಲಿ ಹಾರಿ ಹೋಗಿದೆ.

ಬಿಪರ್​ಜಾಯ್​ ತೂಫಾನ್​ ಹೊಡೆತಕ್ಕೆ ಸರಣಿ ಅಪಘಾತ

ಗುಜರಾತ್​ನ ಈ ರಸ್ತೆ, ಬಿರುಗಾಳಿಗೆ ಅಗೋಚರವಾಗಿತ್ತು. ಕಣ್ಣಿಗೆ ಕಾಣದಷ್ಟು ದಟ್ಟ ಗಾಳಿಗೆ ಈ ಸರಣಿ ಅಪಘಾತವೇ ಸಾಕ್ಷಿ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಟ್ರಕ್​ಗಳು ಉರುಳಿಬಿದ್ದಿವೆ. ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ತೊಂದರೆ ಆಗಿತ್ತು.

ಕಣ್ಣಾಯಿಸಿದಷ್ಟು.. ನೀರೋ ನೀರು.. ರಸ್ತೆಗಳೇ ಮಾಯಾ

ಗಾಳಿ-ಮಳೆ ಜಂಟಿ ವಿಲನ್​​​ಗಳಿಗೆ ಸಮುದ್ರದ ಅಲೆಗಳು ಬೆಂಬಲಿ ನೀಡಿವೆ.. ಎಲ್ಲರೂ ಸೇರಿ ಕಡಲ ಕಿನಾರೆಯಲ್ಲಿ ರಕ್ಕಸ ಅಲೆಗಳ ರೂಪದಲ್ಲಿ ಪ್ರತಿಭಟನೆ ನಡೆಸುವಂತೆ ಕಾಣಿಸ್ತಿದೆ. ಅಲೆಗಳ ಈ ಆಟದ ಪರಿಣಾಮ ಕರಾವಳಿ ತೀರದ ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ. ಅಷ್ಟೇ ಅಲ್ಲದೇ ಸಮುದ್ರ ನೀರು ಉಕ್ಕಿ ರಸ್ತೆಯ ತುಂಬೇಲ್ಲ ರಂಗೋಲಿ ಬಿಡಿಸುತ್ತಿದೆ.

ನೆಲಕ್ಕುರುಳಿದ ಹೈವೇ ಟೋಲ್.. ಸಾವು-ನೋವು

ಬಿಪರ್​ಜಾಯ್​ದಿಂದ ಗುಜರಾತ್ ಕರಾವಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗುಜರಾತ್‌ನಲ್ಲಿ 1000 ಹಳ್ಳಿಗಳು ವಿದ್ಯುತ್ ಇಲ್ಲದೆ ಕತ್ತಲೆಗೆ ಸರಿದಿವೆ. ರಾಜಸ್ಥಾನದ ಕಡೆಗೆ ಸಾಗ್ತಿರುವ ಬಿಪರ್​ಜಾಯ್ ಸದ್ಯ ತನ್ನ ವೇಗಕ್ಕೆ ಕೊಂಚ ಬ್ರೇಕ್​​​ ಹಾಕಿ ಸಾಗ್ತಿದೆ.

ಧಗಧಗನೆ ಹೊತ್ತಿ ಉರಿದ ಕಲ್ಲಿದ್ದಲು ಸಂಗ್ರಹಗಾರ

ಮೇಲೆ ಮಳೆ-ಗಾಳಿ ವಿಲನ್​​ಗಳ ಕಾಟವಾದ್ರೆ, ಈ ಬಂದರು ಪ್ರದೇಶದಲ್ಲಿ ಅವರಿಗೆ ಜೊತೆಯಾಗಿ ಈ ಅಗ್ನಿಯೂ ನರ್ತಿಸಿದ್ದಾನೆ.. ಕಲ್ಲಿದ್ದಲು ಸಂಗ್ರಹಗಾರಕ್ಕೆ ಬೆಂಕಿ ಹೊತ್ತಿ ಧಗಧಗನೆ ಉರಿದಿದೆ.

ಸಮರೋಪಾದಿಯಲ್ಲಿ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ

ಕಡಲ ಕಿನಾರೆಗೆ ಅಪ್ಪಳಿಸಿರುವ ಅಲೆಗಳು, ಹಲವು ಕಟ್ಟಡಗಳನ್ನ ತನ್ನ ವಶಕ್ಕೆ ಪಡೆದಿವೆ. ಸಂಪೂರ್ಣವಾಗಿ ಜಲಾವೃತವಾಗಿಸಿದ ಅಲೆಗಳು ಕಾವಲಿಗೆ ನಿಂತಂತೆ ಕಾಣಿಸ್ತಿವೆ. ಮನೆಯಲ್ಲಿ ವಾಸಿಸುತ್ತಿರುವ ಜನ ಮಾತ್ರ ಪರದಾಟ ನಡೆಸಿದ್ದಾರೆ. ಈ ವೇಳೆ, ರಕ್ಷಣೆಗೆ ಧಾವಿಸಿದ NDRF ತಂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.

ಹೆಲಿಕಾಪ್ಟರ್​ ಮೂಲಕ ಜನರ ರೆಸ್ಕ್ಯೂ ಆಪರೇಷನ್

ಗುಜರಾತ್​ನಲ್ಲಿ ಎನ್‌ಡಿಆರ್‌ಎಫ್ ತಂಡ ತನ್ನ ರಕ್ಷಣಾ ಕಾರ್ಯಾಚರಣೆಯನ್ನ ಹಗಲು ರಾತ್ರಿ ಅವಿರತವಾಗಿ ಶ್ರಮಿಸ್ತಿದೆ. ಎನ್​​ಡಿಆರ್​​​ಎಫ್​​​ ತಂಡಕ್ಕೆ ಹೆಲಿಕಾಪ್ಟರ್​ಗಳು ಸಾಥ್​ ನೀಡಿವೆ.

ಸೂರಿಲ್ಲದೆ ಟೆಂಟ್​ಗಳಲ್ಲಿದ್ದವರಿಗೆ ಪೊಲೀಸರ ನೆರವು

ದಂಡೆತ್ತಿ ಬಂದ ಬಿಪರ್​ಜಾಯ್ ವಿರುದ್ಧ ಪೊಲೀಸರು ಕೂಡಾ ತೊಡೆ ತಟ್ಟಿದ್ದಾರೆ. ಸೂರಿಲ್ಲದೆ ಟೆಂಟ್​ಗಳಲ್ಲಿ ನೆಲಸಿದ್ದ ಬಡಪಾಯಿ ಜೀವಗಳನ್ನ ಪೊಲೀಸರು ರಕ್ಷಣೆ ಮಾಡಿ. ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಉಪಚರಿಸಿದ್ದಾರೆ.

ಕಾಪಾಡು ದ್ವಾರಕಾಧೀಶ.. ಸಚಿವ ಸಾಂಘ್ವಿ ಪ್ರಾರ್ಥನೆ

ಭೀಕರ ಗಾಳಿ, ಗುಡುಗು, ಮಿಂಚು ಸಹಿತ ಮಳೆಯ ಆರ್ಭಟ ಗುಜರಾತ್​​ಗೆ ಹೊಸದಲ್ಲ. ಆದ್ರೆ, ಈ ಶತಮಾನದಲ್ಲಿ ಬೀಸಿದ ಚಂಡಮಾರುತ ಮಾತ್ರ ಗುಜರಾತ್​​​ ಮರೆಯದಂತೆ ಮಾಡಿದೆ. ಇನ್ನು, ರಾಜ್ಯದ ಜನತೆಗೆ ಯಾವುದೇ ಹಾನಿ ಆಗದಂತೆ ಗುಜರಾತ್​ನ ಗೃಹ ಸಚಿವ ಹರ್ಷಭಾಯಿ ಸಾಂಘ್ವಿ ದೇವರ ಮೊರೆ ಹೋಗಿದ್ದಾರೆ. ದ್ವಾರಕಾಧೀಶನ ಸನ್ನಿಧಿಯಲ್ಲಿ ಕೂತು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗುಜರಾತ್​ನಿಂದ ರಾಜಸ್ಥಾನಕ್ಕೆ ಕಾಲಿಡುತ್ತಿರೋ ಬಿಪರ್​ಜಾಯ್​ ಚಂಡಮಾರುತ, ಮರುಭೂಮಿ ರಾಜ್ಯದಲ್ಲಿ ಧೂಳೆಬ್ಬಿಸಲಿದೆ. ಹಲವು ಜಿಲ್ಲೆಗಳ ನದಿ ಪಾತ್ರದಲ್ಲಿ, ತಗ್ಗು ಪ್ರದೇಶದಲ್ಲಿನ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಅಲ್ಲದೆ, ಕೆಲವರನ್ನ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಪರ್​ಜಾಯ್​ನಿಂದ ಜನರ ಜೀವನ ಅಯೋಮಯ.. ಹಗಲು ರಾತ್ರಿ ಎನ್ನದೆ ಜನರ ರಕ್ಷಣೆಗೆ ನಿಂತ NDRF ಟೀಂ

https://newsfirstlive.com/wp-content/uploads/2023/06/GUJARAT_BIPARJOY.jpg

Load More