ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಎಚ್ಚರಿಕೆ ಕೊಡಲಾಗಿದೆ
ಕಂಗಾಲ್ ಆಗಿರುವ ಜನರ ಪಾಲಿಗೆ ಡಾನಾ, ಡಾನ್ ಆಗ್ತಿದೆ
ಚಂಡಮಾರುತದ ಎಫೆಕ್ಟ್ ಎಲ್ಲೆಲ್ಲಿ ಆಗಲಿದೆ ಗೊತ್ತಾ..?
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಡಾನಾ ಚಂಡಮಾರುತವು (Cyclone Dana) ಬೆಚ್ಚಿಬೀಳಿಸಿದೆ. ಪುರಿ ಮತ್ತು ಸಾಗರ್ ದ್ವೀಪದ ನಡುವೆ ಒಡಿಶಾ-ಪಶ್ಚಿಮ ಬಂಗಾಳದ ಕರಾವಳಿಯನ್ನು ‘ಡಾನಾ’ ಚಂಡಮಾರುತವು ತಲುಪುವ ನಿರೀಕ್ಷೆಯಿದೆ.
ಹೀಗಾಗಿ ಇತರ ರಾಜ್ಯಗಳ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ನಾಳೆಯಿಂದ ಅಕ್ಟೋಬರ್ 25ರವರೆಗೆ ಪುರಿಗೆ ಭೇಟಿ ನೀಡದಂತೆ ಸಚಿವ ಸುರೇಶ್ ಪೂಜಾರಿ ಮನವಿ ಮಾಡಿದ್ದಾರೆ. ಮಯೂರ್‌ಭಂಜ್, ಕಟಕ್, ಜಾಜ್‌ಪುರ್, ಬಾಲಸೋರ್, ಭದ್ರಕ್, ಕೇಂದ್ರಪಾರಾ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮತ್ತು ಇದು ಹಠಾತ್ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಮುಂಜಾಗೃತ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆ ಸ್ಪೆಷಲ್ ಗಿಫ್ಟ್; ಅರ್ಹ ಮಹಿಳೆಯರಿಗೆ ಸರ್ಕಾರದಿಂದ ಉಚಿತ ಸಿಲಿಂಡರ್..!
ಚಂಡಮಾರುತದ ತೀವ್ರತೆಯು ನಾಳೆ ಬೆಳಗ್ಗೆ ಕಮ್ಮಿ ಇರುತ್ತದೆ, ಆದರೆ ಗುರುವಾರ ಮತ್ತು ಶುಕ್ರವರಾರ ಅದರ ತೀವ್ರತೆ ಹೆಚ್ಚಿರಲಿದೆ. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಪುರಿ ಮತ್ತು ಸಾಗರ ಐಲ್ಯಾಂಡ್ನ ಮಧ್ಯದಲ್ಲಿ ಸೈಕ್ಲೋನ್ ಲ್ಯಾಂಡ್ಫಾಲ್ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲಿಲ್ಲಿ ಎಫೆಕ್ಟ್..?
ಗಂಜಮ್, ಪುರಿ, ಜಗತ್ಸಿಂಗ್ಪುರ್, ಕೇಂದ್ರಾಪುರ, ಭದ್ರಕ್, ಬಾಲಸೋರ್, ಮಯೂರಬಂಜ್, ಕೆಒಂಜನರ್, ಜೈಪುರ, ಅಂಗುಲ್, ಖುದ್ರಾ, ನಯಾಗರ್, ಕಟಕ್ನಲ್ಲಿ ಅಕ್ಟೋಬರ್ 23-25ರವರೆಗೆ ಸೈಕ್ಲೋನ್ ಎಫೆಕ್ಟ್ ಕಾಡಲಿದೆ. ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶ, ಅಸ್ಸಾಂ, ತ್ರಿಪುರಾ, ಮಿಜೋರಾಂ, ಮೆಘಾಲಯ, ದೆಹಲಿಯಲ್ಲಿ ಭಾರೀ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ, ಅಂಡಮನ್, ನಿಕೋಬಾರ್ನಲ್ಲೂ ಮಳೆಯ ನಿರೀಕ್ಷೆ ಇದೆ. ಈಗಾಗಲೇ ಕರ್ನಾಟಕದಲ್ಲಿ ಮಳೆಯಿಂದಾಗಿ ಜನ ತೊಂದರೆಗೆ ಒಳಗಾಗಿದ್ದಾರೆ. ಇದೀಗ ಡಾನ ಸೈಕ್ಲೋನ್ ಶುರುವಾಗಿದ್ದು, ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ:Bengaluru: ಪರಭಾಷಿಗರಿಗೆ ಕನ್ನಡ ಕಲಿಸುವ ‘ಆಟೋ ಕನ್ನಡಿಗ’.. ಈತನ ಮಹಾತ್ಕಾರ್ಯಕ್ಕೆ ಬಿಗ್ ಸೆಲ್ಯೂಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ