Advertisment

5 ರಾಜ್ಯಗಳನ್ನು ನಡುಗಿಸಿದ ಸೈಕ್ಲೋನ್‌.. ಫೆಂಗಲ್‌ಗೆ ತುತ್ತಾದ 11 ಮಂದಿ; ಮನೆಯಿಂದ ಹೊರ ಬರೋಕೆ ಭಯ! VIDEO

author-image
admin
Updated On
5 ರಾಜ್ಯಗಳನ್ನು ನಡುಗಿಸಿದ ಸೈಕ್ಲೋನ್‌.. ಫೆಂಗಲ್‌ಗೆ ತುತ್ತಾದ 11 ಮಂದಿ; ಮನೆಯಿಂದ ಹೊರ ಬರೋಕೆ ಭಯ! VIDEO
Advertisment
  • ಆಂಧ್ರಪ್ರದೇಶ, ಕರ್ನಾಟಕ, ಕೇರಳದ ಮೇಲೂ ಸೈಕ್ಲೋನ್ ಎಫೆಕ್ಟ್
  • 90 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಜನ ಪತರುಗುಟ್ಟಿದ್ದಾರೆ
  • ಭಾರಿ ಮಳೆಯಾಗುವ ಮುನ್ಸೂಚನೆ, ರೆಡ್​ ಅಲರ್ಟ್ ಘೋಷಣೆ

ಫೆಂಗಲ್ ಚಂಡಮಾರುತ ತಮಿಳುನಾಡು, ಪಾಂಡಿಚೇರಿಯಲ್ಲಿ ಅಬ್ಬರಿಸಿದಾಯ್ತು. ಈಗ ಆಂಧ್ರಪ್ರದೇಶ, ಕರ್ನಾಟಕ, ಕೇರಳದ ಮೇಲೂ ಸೈಕ್ಲೋನ್ ಎಫೆಕ್ಟ್ ಬೀರಿದೆ. ತಮಿಳುನಾಡಿನಲ್ಲಿ ಚಂಡಮಾರುತ ತಂದಿರುವ ಫಜೀತಿ ಅಷ್ಟಿಷ್ಟಲ್ಲ. ಪಾಂಡಿಚೇರಿಯಲ್ಲಿ ಮಳೆ ಕೊಂಚ ತಗ್ಗಿದ್ರೂ ಅವಾಂತರಗಳು ಮುಂದುವರಿದಿದೆ. ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ.

Advertisment

ಫೆಂಗಲ್ ಸೈಕ್ಲೋನ್ ಅಬ್ಬರಕ್ಕೆ ತಮಿಳುನಾಡಿದ ರಾಜಧಾನಿ ಚೆನ್ನೈ ಸೇರಿ ಹಲವು ಜಿಲ್ಲೆಗಳು ತತ್ತರಿಸಿವೆ. 90 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಜನ ಪತರುಗುಟ್ಟಿದ್ದಾರೆ. ಮರಣ ಮಳೆ ಅಬ್ಬರ 11 ಜನರನ್ನು ಬಲಿ ಹಾಕಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

publive-image

ಚೆನ್ನೈನ ರಸ್ತೆಗಳು ಹೊಳೆಯಂತಾಗಿವೆ. ತಗ್ಗುಪ್ರದೇಶದಲ್ಲಿರುವ ಮನೆಗಳು, ಕಟ್ಟಡಗಳು, ವಾಹನಗಳು ಸಂಪೂರ್ಣ ಮುಳುಗಿವೆ. ಗಲ್ಲಿಗಲ್ಲಿಗಳಲ್ಲೂ ನೀರು ಧುಮ್ಮಿಕ್ಕುತ್ತಿದೆ. ಕಡಲೂರಿನ ಉಚ್ಚಿಮೇಡು ಪ್ರದೇಶದ ಸುತ್ತಮುತ್ತ ನಗರಗಳಲ್ಲೂ ಪ್ರವಾಹ ಪರಿಸ್ಥಿತಿ ಇದ್ದು ಸಂತ್ರಸ್ತರನ್ನು NDRF ತಂಡ ರಕ್ಷಿಸಿದೆ.

ಕೃಷ್ಣಗಿರಿ ಜಿಲ್ಲೆಯಲ್ಲಿ 503 ಮಿ.ಮೀ ಮಳೆಯಾಗಿದೆ. ಉತ್ತಂಗರೈ ಬಳಿ ಕೆರೆ ಕೋಡಿ ಭೋರ್ಗರೆದು ಹರಿದ ಪರಿಣಾಮ ರಸ್ತೆ ಪಕ್ಕ ನಿಲ್ಲಿಸಿದ ಬಸ್​ಗಳು ತರಗೆಲೆಗಳಾಗಿವೆ. ಆಟಿಕೆಗಳಂತೆ ಬದಲಾಗಿವೆ. ಬಳಿಕ ಕ್ರೇನ್ ಮೂಲಕ ಪ್ರವಾಹಕ್ಕೆ ಸಿಲುಕಿದ್ದ ಬಸ್​​ಗಳನ್ನು ಮೇಲಕ್ಕೆತ್ತಲಾಗಿದೆ.

Advertisment


">December 2, 2024

ವಿಲ್ಲುಪುರಂ ಜಿಲ್ಲೆಯಲ್ಲಿ ದಾಖಲೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 50 ಸೆಂ.ಮೀ ಮಳೆ ಸುರಿದಿದೆ. ಪರಿಣಾಮ ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮೇಲೆ ಹೊಳೆಯಂತೆ ನೀರು ಹರಿಯುತ್ತಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ವಿಲ್ಲುಪುರಂ ಜಿಲ್ಲೆಯ ಮೈಲಂನಲ್ಲಿ ನದಿ ತೀರದ ಗ್ರಾಮಗಳು ಮುಳುಗಿದ್ದು ಜನರನ್ನು ಸುರಕ್ಷಿತ ಸ್ಥಳಾಂತರಿಸಲಾಗುತ್ತಿದೆ. ಇನ್ನೊಂದೆಡೆ ಪ್ರವಾಹದಿಂದ ಮನೆಯಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಪ್ರವಾಹದಿಂದಾಗಿ ಹಲವು ಹಳ್ಳಿಗಳನ್ನ ಸಂಪರ್ಕಿಸೋ ರಸ್ತೆಗಳು ಜಲದಿಗ್ಬಂಧನಕ್ಕೊಳಪಟ್ಟಿವೆ. ಫೆಂಗಲ್ ಚೆಲ್ಲಾಟಕ್ಕೆ ಮೂಕರೋಧನೆ ಹೇಳತೀರದಾಗಿದೆ. ಭಾರಿ ಮಳೆಗೆ ಉರುಳಿ ಬಿದ್ದಿರುವ ಮರದ ಬಳಿ ಆಶ್ರಯ ಪಡೆದಿದ್ದ ಶ್ವಾನದ ಮರಿಗಳನ್ನ ರಕ್ಷಿಸಲಾಗಿದೆ.

ಭಾರಿ ವರ್ಷಧಾರೆಗೆ ತಿರುವಣ್ಣಾಮಲೈ ಜಿಲ್ಲೆಯ ಚಿದಂಬರಂನಲ್ಲಿ ಭೂಕುಸಿತ ಸಂಭವಿಸಿದೆ. ಬೃಹತ್ ಗಾತ್ರದ ಬಂಡೆಯೊಂದು ಉರುಳಿಬಿದ್ದ ಪರಿಣಾಮ ಹಲವು ಮನೆಗಳಿಗೆ ಹಾನಿಯಾಗಿದೆ. ಒಂದೇ ಕುಟುಂಬದ 7 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ಇದ್ದು ಶೋಧ ಕಾರ್ಯಾಚರಣೆ ನಡೀತಿದೆ. ಇನ್ನು ಮನೆ ಕಳೆದುಕೊಂಡವರು ಕಣ್ಣೀರಾಕುವಂತಿದೆ. ರಾಜಧಾನಿ ಚೆನ್ನೈ ಸೇರಿದಂತೆ ಮಳೆ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Advertisment


">December 1, 2024

ಧರ್ಮಪುರಿಯಲ್ಲಿ 331 ಮಿ.ಮೀ, ಕಲ್ಲಕುರುಚಿಯಲ್ಲಿ 300 ಮಿ.ಮೀ ಮಳೆ, ಸೇಲಂನಲ್ಲಿ 238 ಮಿ.ಮೀ, ತಿರುವಣ್ಣಾಮಲೈನಲ್ಲಿ 225 ಮಿ.ಮೀ ಮಳೆ ಸುರಿದಿದೆ. ಇಂದು ಚೆನ್ನೈನಲ್ಲಿ ರೈಲುಗಳು, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಆಗಿದೆ. ಚೆನ್ನೈನಲ್ಲಿ ಸ್ವತಃ ಸಿಎಂ ಎಂ.ಕೆ.ಸ್ಟಾಲಿನ್ ಪರಿಹಾರ ಕಾರ್ಯಗಳನ್ನು ಮಾನಿಟರ್ ಮಾಡ್ತಿದ್ದಾರೆ.

ಇದನ್ನೂ ಓದಿ: ರಾಜ್ಯದ 10 ಜಿಲ್ಲೆಗಳಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; ಪೋಷಕರು ಓದಲೇಬೇಕಾದ ಸ್ಟೋರಿ 

Advertisment

ಪಾಂಡಿಚೇರಿಯಲ್ಲಿ ಮಳೆ ಅಬ್ಬರ ಸ್ವಲ್ಪ ತಗ್ಗಿದ್ರೂ ಅವಾಂತರಗಳು ಮುಂದುವರಿದಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಪುದುಚೇರಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ, ಜನಜೀವನ ಸಹಜಸ್ಥಿತಿಗೆ ಮರಳಲು ಹರಸಾಹಸಪಡ್ತಿದೆ. ಪುದುಚೇರಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 600ಕ್ಕೂ ಹೆಚ್ಚು ಮಂದಿಯನ್ನು ಎನ್​ಡಿಆರ್​ಎಫ್​ ಪಡೆ ರಕ್ಷಣೆ ಮಾಡಿದೆ.

ನೆರೆಯ ಆಂಧ್ರಪ್ರದೇಶದ ದಕ್ಷಿಣ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುತ್ತಿದೆ. ಸುವರ್ಣಮುಖಿ ನದಿ ಉಕ್ಕಿ ಹರಿದಿದ್ದು, ತಿರುಪತಿಯ ಪಾಪನಾಶಿನಿ ಜಲಪಾತಕ್ಕೆ ಜೀವ ಕಳೆ ಬಂದಿದೆ. ರಾಯಲಸೀಮೆ, ನೆಲ್ಲೂರು, ಚಿತ್ತೂರು ಸೇರಿ ಕಡಪ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಅತ್ತ ಕೇರಳದ ವಯನಾಡು, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು ರೆಡ್​ಅಲರ್ಟ್ ಘೋಷಣೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment