ರೋಹಿಣಿ ಸಿಂಧೂರಿ, ಡಿ ರೂಪಾ ಕಾನೂನು ಸಮರದಲ್ಲಿ ಸಖತ್ ಟ್ವಿಸ್ಟ್
ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಕಾರ
ನವೆಂಬರ್ 5 ರಿಂದ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಮುಂದುವರಿಕೆ
ನವದೆಹಲಿ: ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಐಪಿಎಸ್ ಆಫೀಸರ್ ವರ್ಸಸ್ ಐಎಎಸ್ ಆಫೀಸರ್ ಯುದ್ಧ ಜೋರಾಗಿ ನಡೆದಿತ್ತು. ರೋಹಿಣಿ ಸಿಂಧೂರಿಯವರ ಆಕ್ಷೇಪಾರ್ಹ ಫೋಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಐಪಿಎಸ್ ಅಧಿಕಾರಿ ಡಿ.ರೂಪಾ ದೊಡ್ಡ ಕಿಚ್ಚನ್ನು ಹೊತ್ತಿಸಿದ್ದರು. ಇಬ್ಬರ ಜಗಳ ವಿಧಾನಸೌಧದ ಮೆಟ್ಟಿಲ್ಲನ್ನೂ ಕೂಡ ಏರಿ. ಕೊನೆಗೆ ನ್ಯಾಯಾಲಯದಲ್ಲಿ ಡಿ ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವ ಮಟ್ಟಕ್ಕೂ ಹೋಯ್ತು. ರೋಹಿಣಿ ತಮ್ಮ ವಿರುದ್ಧ ಹಾಕಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದ ಡಿ ರೂಪಾ ಅವರಿಗೆ ನಿರಾಸೆ ಕಾದಿತ್ತು. ಕೇಸ್ ರದ್ದಿಗೆ ಹೈಕೋರ್ಟ್ ನಿರಾಕರಿಸಿತ್ತು. ಸದ್ಯ ಡಿ. ರೂಪಾ ಅವರಿಗೆ ಸುಪ್ರೀಂಕೋರ್ಟ್ನಲ್ಲೂ ಕೂಡ ಹಿನ್ನಡೆಯುಂಟಾಗಿದೆ. ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಇದನ್ನೂ ಓದಿ: ಶಾಸಕ ಮುನಿರತ್ನಗೆ ಬಿಗ್ ಶಾಕ್.. ಪರಪ್ಪನ ಅಗ್ರಹಾರ ಜೈಲಿನಿಂದ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್, ಕೇಸ್ ರದ್ದು ಪಡಿಸಲು ನಿರಾಕರಿಸಿದ್ದ ಹೈಕೋರ್ಟ್ ಆದೇಶದಲ್ಲಿ ನಾವೇಕೆ ಮಧ್ಯಪ್ರವೇಶಿಸಬೇಕು? ನಾವು ಪ್ರಕರಣ ಸೆಟ್ಲ್ಮೆಂಟ್ ಆಗಲಿ ಎಂದು ಬಯಸಿದ್ದೇವು. ಈಗ ಇಬ್ಬರೂ ಬಹಳ ಸಮಯ ತೆಗೆದುಕೊಂಡಿದ್ದಾರೆ ಎಂದಿರುವ ಸರ್ವೋಚ್ಛ ನ್ಯಾಯಾಲಯ. ರೂಪಾ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೂಕದ್ದಮೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮುಂದುವರಿಸಿದೆ.
ಇದನ್ನೂ ಓದಿ: ನಾಳೆಯೇ FIR ಭವಿಷ್ಯ.. ದಿಢೀರ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ; ಕಾರಣವೇನು?
ಸುಪ್ರೀಂಕೋರ್ಟ್ನಲ್ಲಿ ನವೆಂಬರ್ 5ರಂದು ಅಂತಿಮ ಹಂತದ ವಿಚಾರಣೆ ನಡೆಯಲಿದ್ದು. ಮೊದಲ ಐದು ಕೇಸ್ಗಳ ಪೈಕಿ ಒಂದು ಕೇಸ್ ಆಗಿ ವಿಚಾರಣೆಗೆ ಪಟ್ಟಿ ಮಾಡಲು ಸೂಚನೆ ನೀಡಲಾಗಿದ. ನ್ಯಾಯಮೂರ್ತಿ ಅಭಯ ಓಕಾ ಪೀಠದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಈ ಸೂಚನೆ ನೀಡಲಾಗಿದೆ. ರಾಜಿ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ, ರಾಜಿ ಸಂಧಾನಕ್ಕೆ ಇಬ್ಬರು ಒಪ್ಪದ ಕಾರಣ ಸುಪ್ರೀಂಕೋರ್ಟ್ ವಿಚಾರಣೆ ಮುಂದುವರಿಸಲು ಸಜ್ಜಾಗಿದೆ.
ಇದನ್ನೂ ಓದಿ: ಮುಡಾ ಕೇಸ್ ಸಂಕಷ್ಟ.. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾ? ಬಿ.ವೈ ವಿಜಯೇಂದ್ರ ಹೇಳಿದ್ದೇನು?
ಈಗಾಗಲೇ ಕೇಸ್ ರದ್ದುಪಡಿಸುವಂತೆ ಕೋರಿ ಡಿ ರೂಪಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಡಿ ರೂಪಾ. ಸದ್ಯ ಸುಪ್ರೀಂಕೋರ್ಟ್ನಲ್ಲಿ ಡಿ ರೂಪಾ ಪರ ವಕೀಲರಾದ ಆದಿ ಸೋಂಧಿ ವಾದ ಮಂಡನೆ ಮಾಡುತ್ತಿದ್ದಾರೆ. ಪ್ರಕರಣವನ್ನು ಖುದ್ದು ತಾವೇ ವಾದ ಮಾಡಲು ರೋಹಿಣಿ ಸಿಂಧೂರಿ ಮುಂದಾಗಿದ್ದರು. ಆದರೆ ನ್ಯಾಯಾಲಯ ಅವಕಾಶ ನೀಡದ ಕಾರಣ ರೋಹಿಣಿ ಸಿಂಧೂರಿ ಪರ ಸಿದ್ಧಾರ್ಥ್ ಲೂತ್ರಾ ವಾದ ಮಂಡನೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ