newsfirstkannada.com

ರಸ್ತೆ ಗುಂಡಿ ಕಾಣಿಸಿದರೆ ಮುಚ್ಚದೇ ಹೋಗಲ್ಲ ಬಿಲ್ಹೋರ್‌.. ಇದರ ಹಿಂದಿದೆ ಆ ಒಂದು ನೋವಿನ ಸಂಗತಿ, ಇಷ್ಟಕ್ಕೂ ಏನದು..?

Share :

11-11-2023

    ರಸ್ತೆ ಗುಂಡಿ ಮುಚ್ಚುವಲ್ಲಿ ಸರ್ಕಾರ ವಿಫಲ, ಇದು ಜನರ ಕಂಪ್ಲೇಂಟ್‌

    ರಸ್ತೆಯಲ್ಲಿ ಗುಂಡಿಗಳು ಕಂಡರೇ ಇವರು ಮುಚ್ಚದೇ ವಾಪಸ್ ಆಗಲ್ಲ!

    ಬಿಲ್ಹೋರ್‌ ಇಲ್ಲಿಯವರೆಗೂ 2000ಕ್ಕೂ ಹೆಚ್ಚು ಗುಂಡಿ ಮುಚ್ಚಿದ ವ್ಯಕ್ತಿ

ಅದೊಂದು ನೋವು ಆ ವ್ಯಕ್ತಿಯ ಮನಸ್ಥಿತಿಯನ್ನೇ ಬದಲಿಸಿಬಿಟ್ಟಿತು. ಮಗನ ಸಾವಿಗೆ ಕಾರಣವಾದ ರಸ್ತೆ ಗುಂಡಿಗಳು ಆ ವ್ಯಕ್ತಿಯ ನೆಮ್ಮದಿಯನ್ನ ಹಾಳುಗೆಡವಿತ್ತು. ಆದ್ರೆ, ಅದೇ ರಸ್ತೆ ಗುಂಡಿಗಳಿಂದ ಆ ವ್ಯಕ್ತಿ ಇಂದು ಜನಪ್ರಿಯನಾಗಿದ್ದು ದೊಡ್ಡ ಸೋಜಿಗ. ಇಡೀ ದೇಶದಲ್ಲಿಯೇ ಹೆಸರು ಮಾಡ್ತಿರೋ ಆ ಅಪರೂಪದ ವ್ಯಕ್ತಿ ಯಾರು?.

ರಸ್ತೆಯಲ್ಲಿ ಯಾವುದೇ ಗುಂಡಿಗಳು ಕಂಡರೂ ಇವ್ರು ಅಲ್ಲಿಂದ ಅಲುಗಾಡೋದೇ ಇಲ್ಲ. ಆ ರಸ್ತೆ ಗುಂಡಿಯನ್ನ ನೀಟಾಗಿ ಮುಚ್ಚಿಯೇ ಅಲ್ಲಿಂದ ಹೋಗೋದು. ರಸ್ತೆ ತುಂಬಾ ಗುಂಡಿಗಳಿವೆ. ಇದನ್ನ ಮುಚ್ಚೋರು ಯಾರು ಇಲ್ಲ ಎಂದು ಪ್ರತಿಯೊಬ್ಬರು ಹೇಳ್ತಾರೆ. ಸರ್ಕಾರ ರಸ್ತೆ ಗುಂಡಿ ಮುಚ್ಚುವಲ್ಲಿ ವಿಫಲವಾಗಿವೆ ಅನ್ನೋದು ಜನ ಸಾಮಾನ್ಯರ ಕಾಮನ್ ಕಂಪ್ಲೇಂಟ್‌. ಆದ್ರೆ, ಇವ್ರು ಕಂಪ್ಲೇಂಟ್ ಮಾಡೋದಿಲ್ಲ. ಬದಲಿಗೆ ಪರಿಹಾರ ನೀಡುತ್ತಾರೆ. ಸ್ವತಃ ಇವ್ರೇ ತಮ್ಮ ಕೈಯಿಂದ ರಸ್ತೆ ಗುಂಡಿಗಳನ್ನ ಮುಚ್ಚುತ್ತಾರೆ.

ಎಲ್ಲೆಲ್ಲಿ ಗುಂಡಿಗಳು ಇರುತ್ತವೆಯೋ ಅಲ್ಲಿ ಇವ್ರು ಇರ್ತಾರೆ

ಮುಂಬೈನ ಅಂಧೇರಿಯ ರಸ್ತೆಗಳಲ್ಲಿ 53 ವರ್ಷದ ದಾದಾರಾವ್ ಬಿಲ್ಹೋರ್‌ನ ನೋಡಿರೋರ ಸಂಖ್ಯೆ ಹೆಚ್ಚಿದೆ. ಯಾಕಂದ್ರೆ, ಇವರು ಎಲ್ಲೆಲ್ಲಿ ಗುಂಡಿಗಳು ಇರುತ್ತವೆಯೋ ಅಲ್ಲಿ ಇವ್ರು ಇರ್ತಾರೆ. ಆ ಗುಂಡಿಗಳನ್ನ ಮುಚ್ಚಿ ಅಪಘಾತವಾಗದಂತೆ ನೋಡಿಕೊಳ್ಳುತ್ತಾರೆ.

ನಿಮಗೆ ಆಶ್ಚರ್ಯವಾಗಬಹುದು ದಾದಾರಾವ್ ಬಿಲ್ಹೋರ್‌ ಇಲ್ಲಿಯವರೆಗೂ 2000ಕ್ಕೂ ಹೆಚ್ಚು ಗುಂಡಿಗಳನ್ನ ಮುಚ್ಚಿದ್ದಾರೆ. ಕಳೆದ 8 ವರ್ಷಗಳಿಂದ ಅವರು ರಸ್ತೆ ಗುಂಡಿಗಳನ್ನ ಮುಚ್ಚೋ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ. ಇವ್ರ ಕಾರ್ಯವನ್ನ ನೋಡಿ ಪಾಟ್‌ಹೋಲ್‌ ವಾರಿಯರ್ಸ್ ಗುಂಪುಗಳು ಇವರ ಜೊತೆ ಕೈ ಜೋಡಿಸಿವೆ.

ವಿಶೇಷ ಅಂದ್ರೆ, ಇವರ ಕಾರ್ಯವನ್ನ ನೋಡಿ ಯುವಕರ ಗುಂಪೊಂದು ಫಿಲ್ ಇದ್‌ ದಿ ಪಾಥೋಲ್ಸ್‌ ಪ್ರಾಜೆಕ್ಟ್ ಅನ್ನೋ ಮೊಬೈಲ್‌ ಆ್ಯಪ್ ಲಾಂಚ್ ಮಾಡಿದೆ. ಇದಿರಿಂದ ಅನೇಕ ಫಾಥೋಲ್ಸ್ ಮುಚ್ಚಲು ಕಾರಣವಾಗಿದೆ.

ಮಗನನ್ನ ಕಳೆದುಕೊಂಡ ನಂತರ ಈ ಕಾರ್ಯದಲ್ಲಿ ಮಗ್ನ

ಅಂದ್ಹಾಗೇ, ದಾದಾರಾವ್‌ ಬಿಲ್ಹೋರ್‌ ರಸ್ತೆ ಗುಂಡಿಗಳನ್ನ ಮುಚ್ಚುವ ಕಾರ್ಯದಲ್ಲಿ ಏಕೆ ತೊಡಗಿಕೊಂಡಿದ್ದಾರೆ ಗೊತ್ತಾ? ಕಾರಣ ಕೇಳಿದ್ರೆ ನೀವು ಅವರ ಮೇಲೆ ಅನುಕಂಪ ವ್ಯಕ್ತಪಡಿಸುತ್ತೀರಾ. ಯಾಕಂದ್ರೆ, ದಾದರಾವ್‌ ಬಿಲ್ಹೋರ್‌, ತಮ್ಮ ಮಗನನ್ನ ಕಳೆದುಕೊಂಡ ನಂತರ ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇವರ ಮಗ ಸಾವನ್ನಪ್ಪಿದಾಗ ಆತನ ವಯಸ್ಸು ಕೇವಲ 16. ಇವರ ಮಗ ಪ್ರಕಾಶ್‌, ಸಾವನ್ನಪ್ಪಲು ಕಾರಣ ಇದೇ ರಸ್ತೆ ಗುಂಡಿಗಳು.

ಏಳು ವರ್ಷಗಳ ಹಿಂದೆ, ಅಂಧೇರಿಯ ಜೋಗೇಶ್ವರಿ-ವಿಖ್ರೋಲಿ ಲಿಂಕ್ ರಸ್ತೆಯಲ್ಲಿ ಗೇಟ್ ನಂಬರ್ 3 ರ ಸಮೀಪವಿರುವ ಗುಂಡಿಗೆ ಬೈಕ್ ಇಳಿದ ಪರಿಣಾಮ ಕೆಳಗೆ ಬೀಳುತ್ತಾರೆ. ಇದರಿಂದ ಬಿಲ್ಹೋರ್‌, 16 ವರ್ಷದ ಮಗ ಪ್ರಕಾಶ್‌ನನ್ನು ಕಳೆದುಕೊಂಡರು. ಪ್ರಕಾಶ್‌ ಹಿಂಬದಿಯಲ್ಲಿ ಕುಳಿತ್ತಿದ್ದರ ಮತ್ತು ಹೆಲ್ಮೆಟ್‌ ಧರಿಸಿರಲಿಲ್ಲ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಪ್ರಕಾಶ್‌ ಸಾವನ್ನಪ್ಪುತ್ತಾನೆ.

ರಸ್ತೆ ಅಪಘಾತದಲ್ಲಿ ಮಗ ಸಾವು

ಬೈಕ್ ಗುಂಡಿಯೊಂದರ ಮೇಲೆ ಸ್ಕಿಡ್ ಆಗಿ ಬಿತ್ತು

ಈ ಘಟನೆ ನಡೆದಾಗ ಬಿಲ್ಹೋರ್ ಜುಲೈ 28, 2015 ರಂದು ತನ್ನ ಕಿರಾಣಿ ಅಂಗಡಿಯಲ್ಲಿದ್ದರು. ಪ್ರಕಾಶ್ ತನ್ನ ಸೋದರಸಂಬಂಧಿ ರಾಮ್ ಜೊತೆ ಹೆಲ್ಮೆಟ್ ಇಲ್ಲದೆ ಪಿಲಿಯನ್ ರೈಡ್ ಮಾಡುತ್ತಿದ್ದ. ಅವನು ಆಗಷ್ಟೇ 10ನೇ ತರಗತಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದನು. ಭಾಂಡೂಪ್‌ನ ಪಾಲಿಟೆಕ್ನಿಕ್ ಕಾಲೇಜಿಗೆ ಪ್ರವೇಶ ಪಡೆದ ನಂತರ ಅವರು ಮನೆಗೆ ಬಂದನು. ಆ ಸಮಯದಲ್ಲಿ ಭಾರೀ ಮಳೆಯಾಗುತ್ತಿತ್ತು. ಆಗ ಅವರ ಬೈಕ್ ಗುಂಡಿಯೊಂದರ ಮೇಲೆ ಸ್ಕಿಡ್ ಆಗಿ ಬಿದ್ದ ಪರಿಣಾಮ ಅವರು ಮೆದುಳಿನ ರಕ್ತಸ್ರಾವಕ್ಕೆ ತುತ್ತಾದರು ಎಂದು ಬಿಲ್ಹೋರ್ ಹೇಳ್ತಾರೆ.

ಈ ಘಟನೆಯ ನಂತರ ಬಿಲ್ಹೋರ್‌ ಮನಸ್ಥಿತಿ ಬದಲಾಗುತ್ತದೆ. ನಮಗೆ ಬಂದ ಕಷ್ಟ ಇನ್ಯಾರಿಗೂ ಬರಬಾರದು ಎಂದು ಅಂದಿನಿಂದ ರಸ್ತೆ ಗುಂಡಿಗಳನ್ನ ಮುಚ್ಚಲು ಆರಂಭಿಸುತ್ತಾರೆ. ಆ ನಂತರ ಅವ್ರಿಗೆ ಅನೇಕ ಸಂಘ ಸಂಸ್ಥೆಗಳು ಬೆಂಬಲ ನೀಡುತ್ತವೆ. ಇವತ್ತಿಗೆ ಸಾವಿರಾರು ರಸ್ತೆ ಗುಂಡಿಗಳನ್ನ ಮುಚ್ಚಿರೋ ಬಿಲ್ಹೋರ್‌, ಬೇರೊಂದು ಮನೆಯ ದೀಪ ಹಾರದಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ಗುಂಡಿ ಕಾಣಿಸಿದರೆ ಮುಚ್ಚದೇ ಹೋಗಲ್ಲ ಬಿಲ್ಹೋರ್‌.. ಇದರ ಹಿಂದಿದೆ ಆ ಒಂದು ನೋವಿನ ಸಂಗತಿ, ಇಷ್ಟಕ್ಕೂ ಏನದು..?

https://newsfirstlive.com/wp-content/uploads/2023/11/MUMBAI_MAN.jpg

Load More