ಇಂದು ಹಣ ಉಳಿಸುವ ಬೇರೆ ಬೇರೆ ದಾರಿ ಕಂಡುಕೊಳ್ಳುವಿರಿ
ನೀವು ಸ್ನೇಹಿತರು ಬಂಧುಗಳಲ್ಲಿ ಹೆಚ್ಚು ಪ್ರೀತಿ ಪಾತ್ರರಾಗುತ್ತೀರಿ
ಇವತ್ತು ವ್ಯಾಪಾರ ವ್ಯವಹಾರ ಸಮಸ್ಯೆಗಳು ದೂರವಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರುಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಪುಬ್ಬಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ
ಮೇಷ ರಾಶಿ
- ಉತ್ತಮವಾದ ಭೋಜನಕ್ಕೆ ತಿಂಡಿ ತಿನಿಸುಗಳಿಗೆ ಯೋಗ್ಯವಾದ ದಿನ
- ಮೇಲಾಧಿಕಾರಿಗಳು ಹಿರಿಯರು ನಿಮ್ಮನ್ನು ಹೊಗಳುತ್ತಾರೆ
- ಮನಸ್ಸಿನಲ್ಲಿ ಯಾವುದೇ ರೀತಿಯ ಪೂರ್ವಾಗ್ರಹವನ್ನು ಇಟ್ಟುಕೊಳ್ಳಬೇಡಿ
- ಇಂದು ಪ್ರಯಾಣ ಲಾಭದಾಯಕವಾಗಲಿದೆ
- ಅನಗತ್ಯ ವಿಷಯಗಳಿಗೆ ಗಮನ ಕೊಡದಿರುವುದು ಒಳಿತು
- ಕೆಲವು ಸವಾಲುಗಳನ್ನು ಎದುರಿಸಬೇಕಾದ ದಿನವಾಗಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ವೃಷಭ
- ವ್ಯಾವಹಾರಿಕವಾಗಿ ಸಹೋದ್ಯೋಗಿಗಳೊಂದಿಗೆ ಸ್ನೇಹಿತರೊಂದಿಗೆ ಜಗಳವಾಗಬಹುದು
- ಅನಗತ್ಯ ವಿಚಾರಗಳಿಗೆ ಸಮಯ ವ್ಯರ್ಥವಾಗುತ್ತದೆ
- ಮನೆಯವರಿಗೆ ಆತಂಕವಿರಬಹುದು
- ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶುಭವಿದೆ
- ಹೆಚ್ಚು ಕೆಲಸಗಳಲ್ಲಿ ಮಗ್ನರಾಗಬೇಕು
- ಮೈಗ್ರೇನ್ ತಲೆನೋವು ಇರುವವರು ಪ್ರಯಾಣ ಮಾಡದಿರುವುದು ಒಳಿತು
- ತಾಪಸ ಮನ್ಯುವಿಗೆ ಶರಣು ಹೋಗಿ
ಮಿಥುನ
- ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕೆಲವು ಕೆಲಸಗಳಾಗುತ್ತದೆ
- ವ್ಯಾಪಾರ ವ್ಯವಹಾರ ಸಮಸ್ಯೆಗಳು ದೂರವಾಗಬಹುದು
- ಮನೆಯಲ್ಲಿ ಕಚೇರಿಯಲ್ಲಿ ಕೆಲಸದ ಒತ್ತಡ ಏರ್ಪಡುತ್ತದೆ
- ಮಧ್ಯಾಹ್ನದ ಒಳಗೆ ಆದಷ್ಟು ನಿಮ್ಮೆಲ್ಲ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳಿತು
- ನಿಮ್ಮ ಸ್ನಾಯುಗಳಲ್ಲಿ ಅಥವಾ ನರಗಳಲ್ಲಿ ತೊಂದರೆ ಕಾಣಬಹುದು
- ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಸ್ವಲ್ಪ ಲಾಭ ಕಾಣಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ
- ವೃತ್ತಿ ಜೀವನದ ದೃಷ್ಟಿಯಿಂದ ತುಂಬಾ ಜಾಗರೂಕರಾಗಿರಬೇಕು
- ಕಲೆ ಮತ್ತು ಸಂಗೀತ ಕ್ಷೇತ್ರದವರಿಗೆ ಗೌರವ ಪುರಸ್ಕಾರಗಳಿವೆ
- ಹೊಸ ಆದಾಯದ ಮೂಲಗಳು ಸಿಗಲಿದೆ
- ವೃತ್ತಿಯನ್ನು ಬಿಟ್ಟು ಬೇರೆ ವ್ಯವಹಾರದಲ್ಲಿ ಸಾಧನೆ ಮಾಡುವ ದಿನ
- ಸಹೋದರನಿಗೆ ಅಪಘಾತವಾಗುವ ಸಾಧ್ಯತೆಗಳಿವೆ ಎಚ್ಚರಿಕೆಯಿಂದಿರಲು ಹೇಳಿ
- ದುರ್ಗಾರಾಧನೆಯನ್ನು ಮಾಡಿ
ಸಿಂಹ
- ನಿಮ್ಮ ಕೆಲಸದ ವಿಚಾರದಲ್ಲಿ ಮನೆಯವರ ಸಲಹೆ ಮುಖ್ಯವಾಗುತ್ತದೆ
- ಸ್ನೇಹಿತರು ಬಂಧುಗಳಲ್ಲಿ ಹೆಚ್ಚು ಪ್ರೀತಿ ಪಾತ್ರರಾಗುತ್ತೀರಿ
- ಪೂರ್ವ ನಿಯೋಜನೆಯಂತೆ ಕೆಲಸ ನಿರ್ವಹಿಸಿದರೆ ಲಾಭ ಖಚಿತ
- ಕೆಲಸದ ಮಧ್ಯೆ ಪ್ರತಿಕೂಲಗಳಿದ್ದರೂ ಜಯಶೀಲರಾಗುತ್ತೀರಿ
- ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಕಳಂಕ ಬರಬಹುದು
- ಇಂದು ಹೆಚ್ಚು ಖರ್ಚಿಗೆ ಅವಕಾಶವಿರುತ್ತದೆ
- ಶ್ರೀಕೃಷ್ಣನನ್ನ ಪ್ರಾರ್ಥಿಸಿ
ಕನ್ಯಾ
- ಕಾರ್ಯಕ್ಷೇತ್ರದಲ್ಲಿ ತುಂಬಾ ಸ್ಪರ್ಧಾತ್ಮಕ ವಾತಾವರಣ ಇರುತ್ತದೆ
- ಎಲ್ಲಾ ಕೆಲಸಗಳನ್ನು ತುಂಬಾ ಶ್ರದ್ಧೆಯಿಂದ ನಿರ್ವಹಿಸಿ
- ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ
- ನಿಮ್ಮ ಸ್ವಭಾವದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು
- ನಿಮ್ಮ ಜೀವನದಲ್ಲಿ ಯಾವುದು ನಿಮಗೆ ತಪ್ಪೆನಿಸುವುದು ಅದನ್ನು ಸರಿಪಡಿಸಿಕೊಳ್ಳಿ
- ಮಕ್ಕಳಿಗೆ ಯಶಸ್ವಿದೆ ಶಿಕ್ಷಣ ಕ್ಷೇತ್ರದಲ್ಲಿ ಪರಿಶ್ರಮ ಮುಂದುವರೆಯಲಿ
- ಶ್ರೀಮಾತ್ರೇ ನಮಃ ಎಂದು ದೇವಿಯನ್ನು ಆರಾಧಿಸಿ
ತುಲಾ
- ಭಾವನೆಗಳ ಆಧಾರದ ಮೇಲೆ ಕೆಲಸ ಕಾರ್ಯಗಳಲ್ಲಿ ತೀರ್ಮಾನ ಬೇಡ
- ಇಂದು ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಧಾರ್ಮಿಕ ಭಾವನೆಯು ನಿಮ್ಮ ದೊಡ್ಡ ಕಾರ್ಯಗಳಿಗೆ ಸಹಕಾರಿಯಾಗಬಹುದು
- ಭೂಮಿ, ಆಸ್ತಿಗೆ ಸಂಬಂಧಿಸಿದ ಮಾತುಕತೆ ನಡೆಯಬಹುದು
- ಒಡಹುಟ್ಟಿದವರೊಂದಿಗೆ ನಿಮ್ಮ ಬಾಂಧವ್ಯ ಚೆನ್ನಾಗಿರಬಹುದು
- ನೆರೆಹೊರೆಯವರೊಂದಿಗೆ ಜಗಳ ಬೇಡ
- ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಕೊಡಿ
ವೃಶ್ಚಿಕ
- ಕಾರ್ಯದೊತ್ತಡದಿಂದ ತುಂಬಾ ಆಯಾಸವಾಗುವ ದಿನ
- ನಿಮ್ಮ ಒತ್ತಡವನ್ನು ಕೋಪವನ್ನು ಬೇರೆಯವರ ಮೇಲೆ ತೋರಿಸಬಾರದು
- ಮಾನಸಿಕವಾಗಿ ನೀವು ದೃಢವಾಗಿದ್ದರೂ ಒತ್ತಡ ನಿಮ್ಮನ್ನು ಬಲಹೀನರನ್ನಾಗಿ ಮಾಡಬಹುದು
- ಕಠಿಣ ಪರಿಶ್ರಮ ನಿಮಗೆ ಯಶಸ್ಸು, ಗೌರವವನ್ನು ಕೊಡುತ್ತದೆ
- ಇಂದು ಸಾಯಂಕಾಲ ನಿಮಗೆ ಶುಭವಿದೆ
- ನಾಳೆಯ ವಿಷಯವನ್ನು ಮರೆತು ಆನಂದ ಅನುಭವಿಸುವ ಯೋಗ
- ಶ್ರೀ ರುದ್ರನನ್ನು ಪ್ರಾರ್ಥಿಸಿ, ನಮೋ ಭಗವತೇ ರುದ್ರಾಯ..!
ಧನುಸ್ಸು
- ಬೇರೆಯವರ ಭಾವನೆಗಳಿಗೆ ನೀವು ಹೆಚ್ಚು ಸ್ಪಂದಿಸುತ್ತೀರಿ
- ಜನರು ನಿಮ್ಮ ಕಡೆ ಆಕರ್ಷಿತರಾಗುತ್ತಾರೆ
- ನಿಮ್ಮದು ಉಚಿತವಾದ ಸಲಹೆ, ಉಪಯೋಗವನ್ನು ಬೇರೆಯವರು ಪಡೆಯುತ್ತಾರೆ
- ಎಲ್ಲಾ ಇದ್ದರೂ ಸುಖ ಪಡುವ ಯೋಗ ನಿಮ್ಮದಾಗಿರುವುದಿಲ್ಲ
- ನಿಮ್ಮ ಹಿಂದೆ ಜನರು ನಿಮ್ಮನ್ನು ದೂಷಿಸುತ್ತಿರುತ್ತಾರೆ
- ಲಕ್ಷ್ಮೀದೇವಿಯನ್ನು ಆರಾಧನೆ ಮಾಡಿ
ಮಕರ
- ನಿಮ್ಮ ವಿರೋಧಿಗಳಿಗೆ ಇಂದು ಸೋಲಿರುತ್ತದೆ
- ನಿಮ್ಮ ಬಗ್ಗೆ ಶತ್ರುಗಳು ರೂಪಿಸಿದ ಯಾವ ಯೋಜನೆಗಳು ಕೆಲಸ ಮಾಡುವುದಿಲ್ಲ
- ಆರೋಗ್ಯದ ಬಗ್ಗೆ ಸಮಾಧಾನವಿರುತ್ತದೆ
- ವ್ಯಾಪಾರ, ಹೊಸ ವ್ಯವಹಾರ ಮಾಡಲು ಶುಭದಿನ
- ಹಣ ಉಳಿಸುವ ಬೇರೆ ಬೇರೆ ದಾರಿ ಕಂಡುಕೊಳ್ಳುವಿರಿ
- ಮನೆ ಮಕ್ಕಳ ಬಗ್ಗೆ ಪ್ರೀತಿ ವಿಶ್ವಾಸ ತೋರಿಸಿ
- ಶ್ರೀರಾಮದೂತ ಮಾರುತಿಯನ್ನು ಪೂಜಿಸಿ
ಕುಂಭ
- ಹೊಸ ಕೆಲಸಗಳಿಗಾಗಿ ಆತುರ ಪಡಬೇಡಿ
- ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ಇಂದು ಅವಕಾಶವಿರಲಿದೆ
- ಖಾಸಗಿ ಕೆಲಸ ಮಾಡುವವರಿಗೆ ಕಿರಿಕಿರಿ ಉಂಟಾಗಬಹುದು
- ನಿಮ್ಮ ನಡವಳಿಕೆಯಿಂದ ಮನೆಯವರಿಗೆ ಕೋಪ ಬರಬಹುದು
- ನೀವು ನೀವಾಗಿರಬೇಕು, ಹೊಸತನ್ನು ಪ್ರದರ್ಶಿಸಬೇಡಿ
- ಮಾತು-ಸ್ವಭಾವ ಸ್ವಾಭಾವಿಕವಾಗಿದ್ದರೆ ಬೆಲೆ ಹೆಚ್ಚಾಗುತ್ತದೆ
- ವಿಷ್ಣು ಮೂರ್ತಿಯನ್ನು ಆರಾಧಿಸಿ
ಮೀನ
- ನಿಮ್ಮ ಸ್ವಾಭಿಮಾನದ ಬಗ್ಗೆ ಗೌರವವಿರಲಿ ಅದು ಅಹಂಕಾರವಾಗಲು ಬಿಡಬೇಡಿ
- ಬೇರೆಯವರ ಸಲಹೆ ತೆಗೆದುಕೊಳ್ಳಿ ಆದರೆ ತೀರ್ಮಾನ ನಿಮ್ಮದಾಗಿರಲಿ
- ಬೇರೆಯವರ ಪೂರ್ಣ ಅವಲಂಬನೆ ನಿಮಗೆ ಹಿನ್ನಡೆಯಾಗಬಹುದು
- ಸರ್ಕಾರದ ಕೆಲಸಗಳು ನಿಮಗೆ ಸಂತೋಷವನ್ನುಂಟು ಮಾಡಬಹುದು
- ತಾಯಿಯವರ ಆರೋಗ್ಯದಲ್ಲಿ ಏರುಪೇರು ಆಗುವುದರಿಂದ ಚಿಂತೆಯಾಗಬಹುದು
- ಆರ್ಥಿಕ ಸಹಾಯದ ಅಗತ್ಯತೆಯು ಕಾಣುತ್ತದೆ
- ಶ್ರೀನಿವಾಸನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ