newsfirstkannada.com

ಕೂಲಿ ಮಾಡುವವರು ಕೋಟ್ಯಾಧಿಪತಿಗಳು; ಹಣದ ಮೂಲ ಹುಡುಕಿದ ಪೊಲೀಸರಿಗೆ ಗಾಬರಿ! ಯಾಕೆ ಗೊತ್ತಾ?

Share :

23-06-2023

    ಪ್ರತಿದಿನ ಕೂಲಿ ಮಾಡುವವರ ಅಕೌಂಟ್‌ಗೆ 80 ಕೋಟಿ ರೂಪಾಯಿ!

    ದಿನಗೂಲಿ ಕೆಲಸಗಾರರ ಖಾತೆಗಳನ್ನು ನೋಡಿದ ಪೊಲೀಸರೇ ಶಾಕ್

    ಮುಂಬೈ ಸೈಬರ್ ಕ್ರೈಂ ಪೊಲೀಸರಿಂದ ಬೆಳಕಿಗೆ ಬಂದ ದುಡ್ಡಿನ ಮೂಲ

ಜಬಲ್‌ಪುರ: ಪ್ರತಿದಿನ ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರಿಗೆ ಕೋಟ್ಯಾಂತರ ರೂಪಾಯಿ ಹಣ ಸಿಕ್ರೆ ಏನಾಗುತ್ತೆ ಹೇಳಿ. ತಮ್ಮ ಕಣ್ಣಿಗೆ ಕಾಣಿಸುವುದನ್ನೆಲ್ಲಾ ಕೊಂಡುಕೊಳ್ಳಬೇಕು ಅನ್ನೋ ಆಸೆ ಆಗಬಹುದು. ಅಥವಾ ನನ್ನ ಜೊತೆ ಕೆಲಸ ಮಾಡೋ ಎಲ್ಲರಿಗೂ ಆರ್ಥಿಕ ಸಹಾಯ ಮಾಡಬೇಕು ಅನ್ನೋ ಮನಸು ಆಗಬಹುದು. ಆದ್ರೆ, ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ವಾರಸೋನಿ ಪಟ್ಟಣದಲ್ಲಿ ನಡೆದಿರೋದು ನಿಜಕ್ಕೂ ಅಚ್ಚರಿಯ ಸಂಗತಿ.

ಇತ್ತೀಚೆಗೆ ಮಧ್ಯಪ್ರದೇಶದ ವಾರಸೋನಿ ಗ್ರಾಮದಲ್ಲಿರುವ ದಿನಗೂಲಿ ಕೆಲಸಗಾರರ ಅಕೌಂಟ್‌ಗಳಿಗೆ ಕೋಟ್ಯಾಂತರ ರೂಪಾಯಿ ಜಮೆಯಾಗಿದೆ. ದಿಢೀರನೇ 80 ಕೋಟಿ ರೂಪಾಯಿ ವಹಿವಾಟು ನಡೆದಿರೋದಕ್ಕೆ ಪೊಲೀಸರೇ ಗಾಬರಿ ಆಗಿದ್ದಾರೆ. ಈ ಸಂಬಂಧ ದೂರದ ಮುಂಬೈ ಸೈಬರ್ ಕ್ರೈಂ ಪೊಲೀಸರು ಮಧ್ಯಪ್ರದೇಶದ ವಾರಸೋನಿ ಗ್ರಾಮಕ್ಕೆ ಹುಡುಕಿಕೊಂಡು ಬಂದಿದ್ದಾರೆ.

ಅಸಲಿಗೆ ತಮ್ಮ ಬ್ಯಾಂಕ್ ಖಾತೆಗಳಲ್ಲಿ 80 ಕೋಟಿ ರೂಪಾಯಿ ಇದೆ ಅನ್ನೋದೇ ಇಲ್ಲಿನ ದಿನಗೂಲಿ ಕೆಲಸಗಾರರಿಗೆ ಗೊತ್ತಿರಲಿಲ್ಲ. ಪಾಪ ಇಲ್ಲಿನ ಜನರಿಗೆ ಕೋಟಿಗೆ ಎಷ್ಟು ಸೊನ್ನೆಯಿಂದ ಲೆಕ್ಕ ಹಾಕಲಾಗುತ್ತೆ ಅನ್ನೋದು ಗೊತ್ತಿಲ್ಲ. ಮುಂಬೈ ಪೊಲೀಸರು ಈ ಹಳ್ಳಿಗೆ ಬಂದಾಗಲೇ ದಿನಗೂಲಿ ಕೆಲಸಗಾರರ ಖಾತೆಯಲ್ಲಿ 80 ಕೋಟಿ ರೂಪಾಯಿ ಜಮೆ ಆಗಿರೋದು ಗೊತ್ತಾಗಿದೆ. ಪೊಲೀಸರ ಮಾತು ಕೇಳಿ ಇಡೀ ಊರಿಗೆ ಊರಿಗೆ ದಿಗ್ಭ್ರಮೆಯಾಗಿದೆ.

ಇದನ್ನೂ ಓದಿ: ಮತ್ತೊಂದು ಕರೆಂಟ್ ಶಾಕ್‌!; ಹಗಲಿಗೊಂದು ವಿದ್ಯುತ್ ದರ, ರಾತ್ರಿಗೊಂದು ದರ ನಿಗದಿ ಮಾಡಲು ಮುಂದಾದ ಸರ್ಕಾರ

ಈ ವಾರಸೋನಿ ಅನ್ನೋದು ಮಧ್ಯಪ್ರದೇಶ ರಾಜ್ಯದ ಭೋಪಾಲ್‌ನಿಂದ ಸುಮಾರು 460 ಕಿಮೀ ದೂರದಲ್ಲಿರುವ ಗಡಿ ಗ್ರಾಮ. ಮಹಾರಾಷ್ಟ್ರದ ರಾಜ್ಯಕ್ಕೂ ಇಲ್ಲಿನ ಜನರಿಗೆ ಸಂಪರ್ಕಗಳಿವೆ. ಕೆಲವು ದುಷ್ಕರ್ಮಿಗಳು ಅಕ್ರಮ ಹಣವನ್ನ ವರ್ಗಾವಣೆ ಮಾಡಲು ಈ ದಿನಗೂಲಿ ಕಾರ್ಮಿಕರನ್ನ ಬಳಸಿಕೊಂಡಿದ್ದಾರೆ. ಕೂಲಿ ಕಾರ್ಮಿಕರ ಐಡಿಗಳನ್ನು ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆಲ ಯುವಕರನ್ನು ಪ್ರಶ್ನಿಸಿದಾಗ ಕೆಲವರು ಬ್ಯಾಂಕ್ ಖಾತೆ ಮಾಡಿಸಿಕೊಡುತ್ತೇವೆ ಎಂದು ಇವರ ಐಡಿ ಕಾರ್ಡ್‌ಗಳನ್ನ ಪಡೆದಿದ್ದಾರೆ. ಅವರಿಂದ ಈ ಅಕ್ರಮ ಹಣ ವರ್ಗಾವಣೆ ನಡೆದಿರಬಹುದು ಎನ್ನಲಾಗಿದೆ. ಯಾರೋ ಮಾಡಿದ ತಪ್ಪಿಗೆ ವಾರಸೋನಿ ಗ್ರಾಮದ ಜನ ಮುಂಬೈ ಪೊಲೀಸರಿಂದ ನೋಟಿಸ್ ಪಡೆದಿದ್ದಾರೆ. ಬ್ಯಾಂಕ್ ವ್ಯವಹಾರವೇ ಗೊತ್ತಿಲ್ಲದ ಅಮಾಯಕರನ್ನು ಬಳಸಿಕೊಂಡ ಖದೀಮರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕೂಲಿ ಮಾಡುವವರು ಕೋಟ್ಯಾಧಿಪತಿಗಳು; ಹಣದ ಮೂಲ ಹುಡುಕಿದ ಪೊಲೀಸರಿಗೆ ಗಾಬರಿ! ಯಾಕೆ ಗೊತ್ತಾ?

https://newsfirstlive.com/wp-content/uploads/2023/06/500-RS-Notes.jpg

Load More