newsfirstkannada.com

ದಕ್ಷಿಣ ಕನ್ನಡ 16 ಕಡೆ NIA ದಾಳಿ; ಹವಾಲಾ ನೆಟ್​ವರ್ಕ್ ಪತ್ತೆ ಭೇದಿಸಲು ಹೊರಟ ಅಧಿಕಾರಿಗಳು

Share :

Published May 31, 2023 at 9:23am

    ದಕ್ಷಿಣ ಕನ್ನಡದಲ್ಲಿ ಹವಾಲಾ ನೆಟ್​ವರ್ಕ್​ ವಾಸನೆ

    16 ಕಡೆ NIA ಅಧಿಕಾರಿಗಳ ದಾಳಿ

    ಫುಲ್ವಾರಿ ಶರೀಫ್ ಪ್ರಕರಣ ಭೇದಿಸಲು ಹೊರಟ ಅಧಿಕಾರಿಗಳು

ಮಂಗಳೂರು: ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ  NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ದ ಸೇರಿದಂತೆ 16 ಕಡೆ  ಎನ್ ಐ ಎ ಅಧಿಕಾರಿಗಳು ದಾಳಿ ‌ನಡೆಸಿದ್ದಾರೆ.

NIA ಅಧಿಕಾರಿಗಳು ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ದಾಳಿ ಮಾಡಿದ್ದಾರೆ. 16 ಕಡೆ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಸಾಕಷ್ಟು ಮನೆ, ಕಚೇರಿ, ಒಂದು ಆಸ್ಪತ್ರೆ ಯಲ್ಲಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

ಮೋದಿಗೆ ಸಂಚು

ಬಿಹಾರದಲ್ಲಿ ಪ್ರಧಾನಿ ಮೋದಿ ದಾಳಿಗೆ ಸಂಚು ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ. ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಆರೋಪದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹವಾಲಾ  ಹಣ ಜಾಲ

ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್​​ವರ್ಕ್​ ಪತ್ತೆ ಹಿನ್ನಲೆ ಅಧಿಕಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆ ಮೂಲಕ ದಕ್ಷಿಣ ಭಾರತದ ಪಿ ಎಫ್ ಐ ಹವಾಲಾ  ಹಣ ಜಾಲ ಭೇದಿಸಲು ಮುಂದಾಗಿದ್ದಾರೆ.

ಫುಲ್ವಾರಿ ಶರೀಫ್ ಪ್ರಕರಣ

ಬಿಹಾರದ  ಪಾಟ್ನಾದಲ್ಲಿ 2022ರ ಜುಲೈ ತಿಂಗಳಲ್ಲಿ ಪತ್ತೆಯಾಗಿದ್ದ ಫುಲ್ವಾರಿ ಶರೀಫ್ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮ ದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ  ಕುರಿತಾಗಿ ಇದೀಗ ದಾಳಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಕ್ಷಿಣ ಕನ್ನಡ 16 ಕಡೆ NIA ದಾಳಿ; ಹವಾಲಾ ನೆಟ್​ವರ್ಕ್ ಪತ್ತೆ ಭೇದಿಸಲು ಹೊರಟ ಅಧಿಕಾರಿಗಳು

https://newsfirstlive.com/wp-content/uploads/2023/05/NIA.webp

Load More