ನ್ಯಾಯ ಕೇಳಲು ಹೋದವರ ಮೇಲೆ ದೌರ್ಜನ್ಯ ಎಸಗಿದ ಆರೋಪ
ಸಚಿವ ಡಿ.ಸುಧಾಕರ್ ವಿರುದ್ಧ ನ್ಯೂಸ್ ಫಸ್ಟ್ ಚಾನೆಲೆ ನಿರಂತರ ವರದಿ
ದಲಿತರ ಮೇಲಿನ ದೌರ್ಜನ್ಯ, ವಂಚನೆ, ಹಲ್ಲೆ, ಆಸ್ತಿ ಕಬಳಿಕೆ ದೂರು
ಚಿತ್ರದುರ್ಗ: ನ್ಯಾಯ ಕೇಳಲು ಹೋದವರ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪಕ್ಕೆ ಸಚಿವ ಡಿ. ಸುಧಾಕರ್ ಗುರಿಯಾಗಿದ್ದಾರೆ. ದಲಿತರ ಮೇಲಿನ ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಆಸ್ತಿ ಕಬಳಿಕೆ ಆರೋಪದಲ್ಲಿ ಸಚಿವರ ವಿರುದ್ಧ FIR ಕೂಡ ದಾಖಲಾಗಿದೆ. ದಲಿತರ ಮೇಲಿನ ದೌರ್ಜನ್ಯದ ಈ ಸುದ್ದಿಯನ್ನ ನ್ಯೂಸ್ ಫಸ್ಟ್ ಚಾನೆಲ್ ಮೊದಲು ಬ್ರೇಕ್ ಮಾಡಿತ್ತು. ಅಷ್ಟೇ ಅಲ್ಲ ಸಚಿವ ಸುಧಾಕರ್ ಅವರ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ನ್ಯೂಸ್ ಫಸ್ಟ್ ನಿರಂತರ ಸುದ್ದಿ ಪ್ರಸಾರ ಮಾಡಿತ್ತು.
ಇದನ್ನೂ ಓದಿ: ‘ಮಚ್ಚು ಕೊಡಲಿ ಇಟ್ಕೊಂಡು ಓಡಾಡಿದ್ದೇನೆ’- ನ್ಯಾಯ ಕೇಳಲು ಹೋದವರಿಗೆ ಸಚಿವ ಡಿ. ಸುಧಾಕರ್ ಧಮ್ಕಿ
ಸಚಿವ ಡಿ.ಸುಧಾಕರ್ ವಿರುದ್ಧ ನ್ಯೂಸ್ ಫಸ್ಟ್ ಚಾನೆಲ್ ಪ್ರಸಾರ ಮಾಡಿದ್ದ ಸುದ್ದಿ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ದಲಿತರ ಮೇಲೆ ದೌರ್ಜನ್ಯ ಹಾಗೂ ಭೂಕಬಳಿಕೆ ಆರೋಪ ಎದುರಿಸುತ್ತಿರುವ ಸಚಿವ ಡಿ. ಸುಧಾಕರ್ ಅವರು ಇಂದು ನ್ಯೂಸ್ಫಸ್ಟ್ ವರದಿಗೆ ‘ಶಿವ ಶಿವ’ ಎಂದಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆದ ವೇಳೆ ಎಲ್ಲಿದೆ ನ್ಯೂಸ್ ಫಸ್ಟ್ ಎಂದು ನ್ಯೂಸ್ ಫಸ್ಟ್ ಚಾನೆಲ್‌ನ ಲೋಗೋ ಹಿಡಿದು ಶಿವ ಶಿವ ಎಂದು ಜೋರಾಗಿ ನಕ್ಕಿದ್ದಾರೆ.
ನ್ಯೂಸ್ಫಸ್ಟ್ ವರದಿಗೆ ‘ಶಿವ ಶಿವ’ ಎಂದ ಸಚಿವರು@dsudhakar2727#DSudhakar #HighCourt #LandEncroachment #Subbamma #DalitFamily #NewsFirstKannada pic.twitter.com/RtOwwHovmR
— NewsFirst Kannada (@NewsFirstKan) September 15, 2023
ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ಸಚಿವ ಡಿ.ಸುಧಾಕರ್ ಅವರು ಸರಿಯಾಗಿ ಉತ್ತರಿಸಲು ಆಗಿರಲಿಲ್ಲ. ನ್ಯೂಸ್ ಫಸ್ಟ್ ಚಾನೆಲ್‌ನ ಲೈವ್ ಡಿಬೇಟ್ನಲ್ಲಿ ಸುಧಾಕರ್ ಅವರು ಉತ್ತರಿಸಲಾಗದೇ ಎದ್ದು ಹೊರ ನಡೆದಿದ್ರು. ಇದಾದ ಮೇಲೂ ನ್ಯೂಸ್ ಫಸ್ಟ್ ಸಚಿವ ಡಿ.ಸುಧಾಕರ್ ಅವರ ವಿರುದ್ಧ ನಿರಂತರವಾಗಿ ವರದಿ ಮಾಡಿತ್ತು. ಇವತ್ತು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಧಾಕರ್, ನ್ಯೂಸ್ಫಸ್ಟ್ ಲೋಗೋ ನೋಡಿ ಶಿವ ಶಿವ ಎಂದು ವ್ಯಂಗ್ಯಭರಿತವಾಗಿ ಹೇಳಿದ್ದಾರೆ.
ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ಹಿನ್ನೆಲೆ ಸಚಿವ ಸುಧಾಕರ್ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಡಲೇ ಡಿ. ಸುಧಾಕರ್ ಅವರನ್ನ ಬಂಧಿಸಬೇಕು. ಸಂಪುಟದಿಂದ ಕೈಬಿಟ್ಟು ಕೂಡಲೇ ರಾಜೀನಾಮೆ ಪಡೆಯಲು ಬಿಜೆಪಿ, ಜೆಡಿಎಸ್ ನಾಯಕರು ಆಗ್ರಹಿಸಿದ್ದಾರೆ. ರಾಯಚೂರಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದ್ದು, ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ