ಲೈನ್‌ಮ್ಯಾನ್ ಕೃತ್ಯವೆಸಗಿರುವುದು ವಿಡಿಯೋದಲ್ಲಿ ಸೆರೆ
ದಲಿತ ವ್ಯಕ್ತಿ ಮೇಲೆ ಕುಳಿತುಕೊಂಡು ಕೆನ್ನೆ, ಕೆನ್ನೆಗೆ ಹೊಡೆದ
ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು
ಲಕ್ನೋ: ದಲಿತ ವ್ಯಕ್ತಿಗೆ ವಿದ್ಯುತ್ ಇಲಾಖೆಯ ಲೈನ್ಮ್ಯಾನ್ವೊಬ್ಬರು ತನ್ನ ಚಪ್ಪಲಿಯನ್ನು ನೆಕ್ಕಿಸಿದ ಬಳಿಕ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ನಡೆದಿದೆ. ತನ್ನ ಸಂಬಂಧಿಕರ ಮನೆಗೆ ದೋಷಪೂರಿತ ವಿದ್ಯುತ್ ಸಂಪರ್ಕ ಸರಿ ಮಾಡಿದ್ದಕ್ಕಾಗಿ ಆರೋಪಿಯು ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ದಲಿತ ಸಮುದಾಯಕ್ಕೆ ಸೇರಿದ ರಾಜೇಂದ್ರ ಎನ್ನುವರು ತನ್ನ ಸಂಬಂಧಿಕರ ಮನೆಗೆ ದೋಷಪೂರಿತ ವಿದ್ಯುತ್ ಸಂಪರ್ಕವನ್ನು ಸರಿಪಡಿಸಿದ್ದರು. ಇದನ್ನು ಹೇಗೆ ಮಾಡಿದೆ ಎಂದು ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್ ತೇಜ್ಬಾಲಿ ಸಿಂಗ್ ಮೊದಲು ಆತನಿಂದ ತನ್ನ ಚಪ್ಪಲಿಯನ್ನು ನೆಕ್ಕಿಸಿದ್ದಾನೆ. ಬಳಿಕ ಕಿವಿ ಹಿಡಿದು ಬಸ್ಕಿ ಹೊಡೆಯುವಂತೆ ಮಾಡಿದ್ದಾನೆ. ಇದಾದ ಮೇಲೆ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ, ಮನಬಂದಂತೆ ಥಳಿಸಿದ್ದಾನೆ. ಕೈಯನ್ನು ತಿರುವಿ ನೆಲಕ್ಕೆ ಕೆಡವಿ ಆತನ ಮೇಲೆ ಕುಳಿತುಕೊಂಡು ಕೆನ್ನೆ ಕೆನ್ನೆಗೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸದ್ಯ ಆರೋಪಿ ಲೈನ್‌ಮ್ಯಾನ್ ಕೃತ್ಯವೆಸಗಿರೋ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಉತ್ತರ ಪ್ರದೇಶ ಸೋನ್ಭದ್ರಾದಲ್ಲಿ ಹಿಂದೂ ಲೈನ್‌ಮ್ಯಾನ್ ತೇಜಬಾಲಿ ಸಿಂಗ್ ಎಂಬಾತ ದಲಿತ ಯುವಕನನ್ನು ತನ್ನ ಚಪ್ಪಲಿ ನೆಕ್ಕಲು ಹೇಳಿದ್ದಾನೆ. ಬಳಿಕ ಬಸ್ಕಿ ತೆಗೆಯಲು ಹೇಳಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.#DalitLivesMatter #Dalit #UP pic.twitter.com/W72Ywlejmq
— NewsFirst Kannada (@NewsFirstKan) July 9, 2023