newsfirstkannada.com

ಒಳ್ಳೇ ಬಟ್ಟೆ, ದುಬಾರಿ ಸನ್​​ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿ ಮೇಲೆ ಹಲ್ಲೆ.. ಏನಿದು ಕೇಸ್..?

Share :

01-06-2023

    ಉತ್ತಮ ಬಟ್ಟೆ ಮತ್ತು ಸನ್‌ಗ್ಲಾಸ್ ಧರಿಸಿದ್ದಕ್ಕೆ ಹಲ್ಲೆ!

    ಜಾತಿ ಹೆಸರಿನಲ್ಲಿ ನಡೀತಿದ್ಯಾ ದೌರ್ಜನ್ಯ!

    ಏಳು ಮಂದಿ ಆರೋಪಿಗಳ ವಿರುದ್ಧ ಎಫ್​​ಐಆರ್!​

ಗಾಂಧಿನಗರ: ಭಾರತ ದೇಶವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಎಷ್ಟೇ ಮುಂದುವರಿದ್ರೂ ಜಾತಿ ಎಂಬ ಪೆಂಡಭೂತ ಇನ್ನೂ ಅಸ್ತಿತ್ವದಲ್ಲಿದೆ. ಜಾತಿ ಹೆಸರಿನಲ್ಲಿ ದೌರ್ಜನ್ಯಗಳು ದಿನೇ ದಿನೇ ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ. ಅದರಲ್ಲೂ ದಲಿತರನ್ನು ಬೆತ್ತಲೆ ಮೆರವಣಿಗೆ ಮಾಡುವ, ಬಹಿರಂಗವಾಗಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸುವ, ಮೀಸೆ ಬಿಟ್ಟರೂ ಎಂಬ ಒಂದು ಸಣ್ಣ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿ ಕ್ರೌರ್ಯ ಮೆರೆಯುವ ಎಷ್ಟೋ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಹೀಗೆ ಕೆಲವು ಕಿಡಿಗೇಡಿಗಳು ಜಾತಿ ಹೆಸರಿನಲ್ಲಿ ದೌರ್ಜನ್ಯ ಮಾಡುತ್ತಾ ಇಡೀ ಸಮಾಜ ತಲೆ ತಗ್ಗಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಇಂಥದ್ದೇ ಮತ್ತೊಂದು ಕೇಸ್​ ಬಯಲಿಗೆ ಬಂದಿದೆ.

ಹೌದು, ಗುಜರಾತ್​​ನಲ್ಲಿ ದಲಿತನೋರ್ವ ಉತ್ತಮ ಬಟ್ಟೆ ಮತ್ತು ಸನ್‌ಗ್ಲಾಸ್ ಧರಿಸಿದ್ದ ಎಂಬ ಕಾರಣಕ್ಕೆ ಮೇಲ್ಜಾತಿ ವ್ಯಕ್ತಿಗಳ ಗುಂಪೊಂದು ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದು ಬನಸ್ಕಾಂತ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ. ಎರಡು ದಿನಗಳ ಹಿಂದೆ ಮಂಗಳವಾರ ರಾತ್ರಿ ಪಾಲನ್‌ಪುರ ತಾಲೂಕಿನ ಮೋಟಾ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಸದ್ಯ ಹಲ್ಲೆಗೊಳಗಾದ ಸಂತ್ರಸ್ತ ಜೆಗರ್ ಶೆಖಾಲಿಯಾ ಎಂಬುವರು ಮತ್ತವರ ತಾಯಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಜೆಗರ್ ನೀಡಿದ ದೂರಿನ ಆಧಾರದ ಮೇಲೆ ಏಳು ಮಂದಿ ಆರೋಪಿಗಳ ವಿರುದ್ಧ ಎಫ್​​ಐಆರ್​ ಆಗಿದೆ. ತಾನು ಉತ್ತಮ ಬಟ್ಟೆ, ಕನ್ನಡಕ ಧರಿಸಿದ್ದಕ್ಕಾಗಿ ಏಳು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ಜೆಗರ್​​ ಆರೋಪಿಸಿದ್ದಾರೆ.

ಅಸಲಿಗೆ ಆಗಿದ್ದೇನು..?

ಜೆಗರ್ ಎಂಬುವರು ಉತ್ತಮ ಬಟ್ಟೆ, ಕನ್ನಡಕ ಹಾಕಿಕೊಂಡು ತನ್ನ ಮನೆ ಬಳಿ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಏಳು ಜನರ ಗುಂಪಿನ ಪೈಕಿ ಒಬ್ಬ ಇತ್ತೀಚೆಗೆ ಮೆರೆಯುತ್ತಿದ್ದೀಯಾ? ಹೀಗೆ ಮುಂದುವರಿದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಂದೇ ರಾತ್ರಿ ಜೆಗರ್​ ಮೇಲೆ ಏಳು ಮಂದಿ ಕೋಲಿನಿಂದ ಬಂದು ಹಲ್ಲೆ ನಡೆಸಿದ್ದಾರೆ. ಇನ್ನು ಮುಂದೆ ಸನ್​​ಗ್ಲಾಸ್​​, ಉತ್ತಮ ಬಟ್ಟೆ ಹಾಕಿದರೆ ಇದೇ ಶಿಕ್ಷೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಳ್ಳೇ ಬಟ್ಟೆ, ದುಬಾರಿ ಸನ್​​ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿ ಮೇಲೆ ಹಲ್ಲೆ.. ಏನಿದು ಕೇಸ್..?

https://newsfirstlive.com/wp-content/uploads/2023/06/Dalit-Beaten.jpg

Load More