ಇಡೀ ದೇಶವೇ ಬೆಚ್ಚಿ ಬೀಳಿಸುವ ಮತ್ತೊಂದು ವಿಕೃತಿ
ಸಂತ್ರಸ್ತ ತಾಯಿ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ
ಅಷ್ಟಕ್ಕೂ ಈ ಘಟನೆ ನಡೆದಿರೋದು ಯಾಕೆ ಗೊತ್ತಾ..?
‘ನಮ್ಮ ಎದುರಲ್ಲೇ ಸಿಕ್ಕಾಪಟ್ಟೆ ಹೊಡೆದರು. ಆತನಿಗೆ ಅವರು ನೀಡಿದ ಹಿಂಸೆಯನ್ನು ತಡೆದುಕೊಳ್ಳಲು ಆಗಲಿಲ್ಲ. ಹೆತ್ತಮಗ ಕಣ್ಣೆದುರಲ್ಲೇ ಉಸಿರು ಚೆಲ್ಲಿದ. ತಪ್ಪಿಸಲು ಹೋಗಿದ್ದ ನನ್ನ ಮತ್ತು ಮಗಳ ಮೇಲೆಯೂ ರಾಕ್ಷಸರು ಮುಗಿಬಿದ್ದರು. ನನ್ನನ್ನು ವಿವಸ್ತ್ರ ಮಾಡಿದರು. ಒಂದು ಟವೆಲ್ ಹಿಡಿದು ಕಣ್ಣೀರಿಡುತ್ತ ನಿಂತಿದ್ದೆ. ಅಷ್ಟರಲ್ಲಿ ಪೊಲೀಸರು ಬಂದರು. ನನಗೆ ಸೀರೆ ಕೊಟ್ಟರು’-ಸಂತ್ರಸ್ತನ ತಾಯಿ
ಹೌದು, ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ದಲಿತ ಯುವಕನ ಮೇಲೆ ಪೈಶಾಚಿಕ ಕೃತ್ಯವೊಂದು ನಡೆದಿದೆ. ಜನರ ಗುಂಪೊಂದು ಅಮಾನುಷವಾಗಿ ಹೊಡೆದು 18 ವರ್ಷದ ಯುವಕನನ್ನು ಹೊಡೆದು ಸಾಯಿಸಿರುವ ಆರೋಪ ಕೇಳಿಬಂದಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ.
ಯಾಕೆ ಹತ್ಯೆ..?
ಹತ್ಯೆಗೀಡಾದ ಯುವಕನ ಸಹೋದರಿ 2019ರಲ್ಲಿ ನಾಲ್ವರ ವ್ಯಕ್ತಿಗಳ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ್ದಳಂತೆ. ಇದೇ ವಿಚಾರಕ್ಕೆ, ಉದ್ರಿಕ್ತ ಗುಂಪು ಮನಸೋ ಇಚ್ಛೆ ಹಲ್ಲೆ ನಡೆಸಿ ಸಾಯಿಸಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ, ಆ ಯುವಕನ ಸಹೋದರಿಗೂ ಹೊಡೆದಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಿದ್ದ ಹೆತ್ತ ತಾಯಿ ಮೇಲೂ ಹಲ್ಲೆ ನಡೆಸಿರುವ ರಾಕ್ಷಸರು, ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದಾರೆ ಎಂಬ ಆರೋಪ ಇದೆ.
8 ಮಂದಿ ಅರೆಸ್ಟ್..!
ಪ್ರಕರಣ ಸಂಬಂಧ 9 ಮಂದಿ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದೇವೆ. SC, ST ಟ್ರೈಬ್ ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದೇವೆ. 8 ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಮಾಹಿತಿ ನೀಡಿದ್ದಾರೆ. 18 ವರ್ಷದ ಮೃತ ಯುವಕನ ಸಹೋದರಿ ಮಾಡಿರುವ ಆರೋಪದ ಪ್ರಕಾರ, ಆಕೆ ದಾಖಲಿಸಿದ್ದ ಪ್ರಕರಣವನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದರು. ಕೇಸ್ ವಾಪಸ್ ಪಡೆದಿಲ್ಲ ಎಂದು ಆಕ್ರೋಶಕ್ಕೆ ಒಳಗಾಗಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದಿದ್ದಾರೆ.
ಹತ್ಯೆಯಾದವನ ತಾಯಿ ಆರೋಪ ಏನು..?
ಏಕಾಏಕಿ ನುಗ್ಗಿದ ಕಿರಾತಕರು ಮನೆ ಮೇಲೆ ದಾಳಿ ಮಾಡಿದರು. ಮನೆಯಲ್ಲಿರುವ ವಸ್ತುಗಳನ್ನು ಬೀಸಾಡಿದರು. ಕೊನೆಗೆ ಮನೆಯ ಛಾವಡಿಗೆ ಹಾನಿ ಮಾಡಿದರು. ನಂತರ ನಮ್ಮ ಎದುರೇ ಸಹೋದರನ ಮೇಲೆ ಅಟ್ಯಾಕ್ ಮಾಡಿದರು. ಕೊನೆಗೂ ಆತ ಬದುಕಿ ಉಳಿಯಲಿಲ್ಲ. ನಮ್ಮನ್ನು ಕೆಟ್ಟದಾಗಿ ನಿಂದಿಸಿದರು. ವಿವಸ್ತ್ರಗೊಳಿಸಿದರು. ನಂತರ ಪೊಲೀಸರು ಬಂದರು. ನಾನು ಟವೆಲ್ ಹಿಡಿದು ನಿಂತಿದ್ದೆ. ಪೊಲೀಸರು ನನಗೆ ಸೀರೆ ನೀಡುವವರೆಗೂ ಟವೆಲ್ ಹಿಡಿದುಕೊಂಡೇ ನಿಂತಿದ್ದೆ ಎಂದು ಹತ್ಯೆಗೀಡಾದ ವ್ಯಕ್ತಿಯ ಅಮ್ಮ ಆರೋಪಿಸಿದ್ದಾಳೆ.
ಅವರ ಮಕ್ಕಳಿಗಾಗಿ ಇನ್ನೊಂದು ಮನೆಗೂ ಎಂಟ್ರಿ..!
ಸಂತ್ರಸ್ತನ ಚಿಕ್ಕಮ್ಮ ಮಾತನಾಡಿ, ಮೊದಲು ಮನೆ ಮೇಲೆ ದಾಳಿ ಮಾಡಿದ್ದಾರೆ. ನಂತರ ಆಕೆಯ ಇನ್ನಿಬ್ಬರು ಮಕ್ಕಳನ್ನು ಹುಡುಕಿಕೊಂಡು ಇನ್ನೊಂದು ಮನೆಗೆ ಎಂಟ್ರಿ ನಿಡಿದ್ದಾರೆ. ಫ್ರಿಡ್ಜ್ಗಳನ್ನು ಚೆಕ್ ಮಾಡಿದ್ದಾರೆ ಎಂದು ದೂರಿದ್ದಾರೆ. ಸದ್ಯ ಗ್ರಾಮದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಹತ್ಯೆಯಾದ ಯುವಕನ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಕಲೆಕ್ಟರ್, ಸರ್ಕಾರಿ ಅಧಿಕಾರಿಗಳು ಹಾಜರಿದ್ದರು. ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆ ನೀಡುವ ಭರವಸೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನಿಡುವ ನಂಬಿಕೆ ಬಂದ ಮೇಲೆ ಅಂತ್ಯಸಂಸ್ಕಾರ ಮಾಡಲಾಗಿದೆ.
ರಾಜಕೀಯ ಸ್ವರೂಪ ಪಡೆದ ಕೇಸ್
ಪ್ರಕರಣವು ಇದೀಗ ಮಧ್ಯಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಮತ್ತು ಮಾಯಾವತಿ ಅವರ ಬಹುಜನ ಸಮಾಜವಾದಿ ಪಾರ್ಟಿಯ ಮುಖಂಡರು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಆಡಳಿತದಲ್ಲಿರುವ ಸರ್ಕಾರವು ನೈತಿಕ ಪೊಲೀಸ್ಗಿರಿಗೆ ಪ್ರಚೋದನೆ ನೀಡುತ್ತಿದೆ ಎಂದು ಕಿಡಿಕಾರಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ