ಕ್ಯಾಬ್ ಚಾಲಕನ್ನು ಪ್ರೀತಿಸಿ ಮದುವೆಯಾಗಿದ್ದ ಕೊರಿಯೋಗ್ರಾಫರ್!
ಯುವತಿಯದ್ದು ಪಾರ್ಟಿ ಕಲ್ಚರ್.. ಮಿಡ್ ನೈಟ್ ಬರ್ತಿದ್ರು.. ಹೋಗ್ತಿದ್ರು
ನಿನ್ನೆ ರಾತ್ರಿ ಗಾಢ ನಿದ್ರೆಗೆ ಹೋಗಿದ್ದ ನವ್ಯಶ್ರಿ ಗೆಳತಿಗೆ ಬೆಳಗ್ಗೆ ಎಚ್ಚರ!
ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ನವ್ಯಶ್ರೀ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಮರ್ಡರ್ ಪ್ರಕರಣ ನಿಜಕ್ಕೂ ಬೆಚ್ಚಿ ಬೀಳಿಸಿದ್ದು, ಹಂತಕನ ಕ್ರೂರತೆ ಘನ ಘೋರವಾಗಿದೆ. ನಿನ್ನೆ ನವ್ಯಶ್ರೀ ಮನೆಯಲ್ಲಿ ಆಕೆಯ ಗೆಳತಿ ಕೂಡ ಉಳಿದುಕೊಂಡಿದ್ದಳು. ರಾತ್ರಿ ಗಾಢ ನಿದ್ರೆಗೆ ಹೋಗಿದ್ದ ನವ್ಯಶ್ರಿಯ ಗೆಳತಿಗೆ ಬೆಳಗ್ಗೆ ಎಚ್ಚರವಾಗಿದ್ದು, ರಕ್ತಪಾತ ಕಂಡು ಓಡಿ ಹೋಗಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ತನಗಷ್ಟೇ ಬೇಲ್ ಪಡೆಯಲು ಪವಿತ್ರಾ ಪ್ಲಾನ್; ಏನದು?
ಕೊಲೆಯಾದ ನವ್ಯಶ್ರೀ ಹಾಗೂ ಕ್ಯಾಬ್ ಚಾಲಕ ಕಿರಣ್ ಕಳೆದ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಗಂಡ, ಹೆಂಡತಿ ಕೆಂಗೇರಿ ಉಪನಗರ, ಎಸ್.ಎಂ.ವಿ. ಲೇಔಟ್, 1 ನೇ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ನಿನ್ನೆ ಬೆಳಗ್ಗೆ ನವ್ಯಶ್ರೀ ತನ್ನ ಸ್ನೇಹಿತೆಗೆ ಕರೆ ಮಾಡಿ ಮನೆಗೆ ಬರುವಂತೆ ಮನವಿ ಮಾಡಿದ್ದಾಳೆ. ತನಗೆ ಮನೆಯಲ್ಲೂ ನೆಮ್ಮದಿ ಇಲ್ಲ. ಹೊರಗಡೆಯೂ ನೆಮ್ಮದಿ ಇಲ್ಲ ಅಂತ ಗೆಳತಿಗೆ ಹೇಳಿದ್ದಾಳೆ. ಆಕೆಯ ಸ್ನೇಹಿತೆ ಬಂದ ನಂತರ ನವ್ಯಾ ಆಕೆಯ ಇನೋರ್ವ ಗೆಳೆಯನಿಗೆ ಕರೆ ಮಾಡಿದ್ದಾಳೆ. ನನಗೆ ಮನೆಯಲ್ಲಿ ಸೇಫ್ ಇಲ್ಲ ಅನ್ನೋ ಫೀಲ್ ಆಗುತ್ತಿದೆ ಎಂದು ಆತನಿಗೂ ಭೇಟಿಯಾಗುವಂತೆ ಹೇಳಿದ್ದಾಳೆ.
ನವ್ಯ ಭೇಟಿಯಾದ ಮೂವರು ಸ್ನೇಹಿತರು ಆರ್.ಆರ್ ನಗರಕ್ಕೆ ಕಾರಿನಲ್ಲಿ ಹೋಗಿ ಮೋಮೋಸ್ ತಿಂದಿದ್ದಾರೆ. ಆಗ ನವ್ಯಶ್ರೀ ಗೆಳೆಯ ನೀನು ನಿನ್ನ ಗಂಡನ ಮೇಲೆ ಕಂಪ್ಲೇಂಟ್ ಕೊಡು ಅಂತ ಹೇಳಿದ್ದಾನೆ. ಕೊನೆಗೆ ಗೆಳೆಯನನ್ನು ಆತನ ಮನೆಗೆ ಡ್ರಾಪ್ ಮಾಡಿದ್ದ ನವ್ಯಶ್ರೀ ಮತ್ತು ಆಕೆಯ ಗೆಳತಿ ರಾತ್ರಿ 11:30ಕ್ಕೆ ವಾಪಸ್ ಮನೆಗೆ ಬಂದಿದ್ದಾರೆ.
ಆಮೇಲೆ ನವ್ಯಶ್ರೀ ಮನೆಯಲ್ಲಿ ಆಕೆಯ ಗೆಳತಿ ರಾತ್ರಿ ಉಳಿದುಕೊಂಡಿದ್ದಳು. ರಾತ್ರಿ ಗಾಢನಿದ್ರೆಗೆ ಹೋಗಿದ್ದ ನವ್ಯಶ್ರೀಯ ಗೆಳತಿಗೆ ಬೆಳಗ್ಗೆ ಎಚ್ಚರವಾಗಿದೆ. ಬೆಳಗ್ಗೆ 6 ಗಂಟೆಗೆ ತನ್ನ ಬಟ್ಟೆ ಒದ್ದೆಯಾಗಿರುವ ಆದ ಅನುಭವ ಆಗಿದೆ. ಎಚ್ಚರವಾಗಿ ನೋಡಿದಾಗ ನವ್ಯಶ್ರೀ ಕತ್ತು ಕೊಯ್ದು ಕೊಲೆ ಮಾಡಿರುವುದು ಕಂಡುಬಂದಿದೆ.
ನವ್ಯಶ್ರೀ ಗೆಳತಿ ತಾನು ಭಯದಿಂದ ಕಿರುಚಿ, ಅಕ್ಕಪಕ್ಕದವರನ್ನು ಕರೆದಿದ್ದಾರೆ. ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಕೊಲೆಯಾದ ಬಗ್ಗೆ ತಿಳಿಸಿದ್ದಾರೆ. ನವ್ಯಶ್ರೀ ಗಂಡ ಕಿರಣ್ ಕೊಲೆ ಮಾಡಿರುತ್ತಾನೆಂದು ಗೆಳತಿಯಿಂದ ದೂರಿದ್ದು, ಕೆಂಗೇರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಆರೋಪಿ ಕಿರಣ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ಕೊರಿಯೋಗ್ರಾಫರ್ ನವ್ಯಾ ಬರ್ಬರ ಹತ್ಯೆ; ಅಸಲಿಗೆ ಆಗಿದ್ದೇನು?
ಅಕ್ಕ-ಪಕ್ಕದ ಮನೆಯವರು ಹೇಳೋದೇನು?
ನವ್ಯ ಹಾಗೂ ಕಿರಣ್ ಕೆಂಗೇರಿ ಉಪನಗರದ ಈ ಮನೆಗೆ ಕಳೆದ 6 ತಿಂಗಳ ಹಿಂದಷ್ಟೇ ಬಂದಿದ್ದಾರೆ. ಬರೀ ಜಗಳ ಮಾಡ್ತಿದ್ರು. ನಾವು ಗಂಡ ಹೆಂಡತಿ ಜಗಳ ಅಂತ ನಾವು ಸುಮ್ಮನಾಗುತ್ತಿದ್ದೆವು ಎಂದು ಪಕ್ಕದ ಮನೆಯವರು ಹೇಳುತ್ತಾರೆ.
ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದ ಯುವತಿಯದ್ದು ಪಾರ್ಟಿ ಕಲ್ಚರ್.. ಮಿಡ್ ನೈಟ್ ಬರ್ತಿದ್ರು, ಹೋಗ್ತಿದ್ರು. ಬೀದಿಯಲ್ಲಿ ಜಗಳ ಆಡ್ತಿದ್ರು. 3 ದಿನಗಳ ಹಿಂದೆ ರೋಡ್‌ನಲ್ಲಿ ಜಗಳ ಆಡ್ತಿದ್ದರಂತೆ. ಹುಡುಗಿ ತಾಯಿ ಮುಂಚೆ ಬರ್ತಿದ್ರು. ಆಮೇಲೆ ಅವರು ಬರೋದು ಕಡಿಮೆ ಆಯಿತು. ನಮ್ಮ ಜತೆ ಮಾತಾಡುತ್ತಿರಲಿಲ್ಲ. ಮನೆಗೆ ಅವರ ತುಂಬಾ ಜನ ಫ್ರೆಂಡ್ಸ್ ಬರುತ್ತಿದ್ದರು. ನಿನ್ನೆ ಸಂಜೆ ಚೆನ್ನಾಗೇ ಇದ್ರು. ನೋಡಿದ್ರೆ ಇವತ್ತು ಬೆಳಗ್ಗೆ ಹೀಗಾಗಿದೆ. ಹುಡುಗಿ ಸ್ನೇಹಿತೆ ಕೂಗಿ ಕೊಂಡಾಗಲೇ ಕೊಲೆಯಾಗಿದ್ದು ಗೊತ್ತಾಗಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ