ಆಸೆ ತೋರಿಸಿ ಯುವತಿಯನ್ನು ಸಮ್ಮತಿಯಿಲ್ಲದೇ ದೈಹಿಕವಾಗಿ ಬಳಸಿಕೊಂಡ್ರಾ ಜಾನಿ
ಜಾನಿ ಮಾಸ್ಟರ್ ಮೇಲೆ ಸಾಲು ಸಾಲು ಆರೋಪ ಮಾಡಿರುವ ಆ ಮಹಿಳೆ ಯಾರು?
ಪೊಲೀಸರಿಗೆ ನೀಡಿದ ದೂರಿನಲ್ಲಿ ಜಾನಿ ಮಾಡಿರುವ ಒಂದೊಂದು ಕೃತ್ಯ ಬಹಿರಂಗ
ಅದೊಂದು ದಿವ್ಯ ಪ್ರತಿಭೆ. ಕನ್ನಡ, ತೆಲುಗು ತಮಿಳು ನಟ ನಟಿಯರೆಲ್ಲ ಇವರು ಕುಣಿಸಿದಂತೆ ಅವರು ಕುಣಿಯುತ್ತಿದ್ದರು. ಕುಣಿಯುವುದು ಕುಣಿಸುವುದೇ ವೃತ್ತಿ ಮಾಡಿಕೊಂಡಿದ್ದ ಅದ್ಭುತ ಪ್ರತಿಭೆ, ರಜನಿಕಾಂತ್ರಿಂದ ಹಿಡಿದು ಸಲ್ಮಾನ್ಖಾನ್ವರೆಗೂ ಇವನು ಹಾಕಿಕೊಟ್ಟ ಸ್ಪೆಪ್ಗಳನ್ನು ಅವರು ಹಾಕುತ್ತಿದ್ದರು. ಯಶಸ್ಸು ದುಡ್ಡು ಅನ್ನೋದು ದಂಡಿ ದಂಡಿಯಾಗಿ ಬಂದು ಅವನ ಮನೆಯಂಗಳದಲ್ಲಿ ಬಿದ್ದಿತ್ತು. ಸದಾ ಹೊಸತನಕ್ಕೆ ತುಡಿಯುವ, ಹೊಸದೊಂದನ್ನು ಸೃಷ್ಟಿಸಿ ಡಾನ್ಸ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸುತ್ತಿದ್ದ ವಿಶ್ವಾದ್ಯಂತ ಸದ್ದು ಮಾಡಿದ್ದ ಜಾನಿ ಮಾಸ್ಟರ್ ವಿರುದ್ಧವೇ ಈಗ ಬಲತ್ಕಾರದ ಕೇಸ್ ಬಿದ್ದಿದೆ.
ಜಾನಿ ಮಾಸ್ಟರ್ ಅಂದ ತಕ್ಷಣ ನಮಗೆ ನೆನಪು ಬರೋದು ಅಪ್ಪು ಡಾನ್ಸ್ ಫೀಲ್ ದ ಪವರ್ ಅಂತ ಫ್ಯಾನ್ಸ್ಗೆ ಪವರ್ ಫುಲ್ ಸ್ಟೆಪ್ಸ್ ಹಾಕಿಸಿದ್ದು. ಓಪನ್ ದಿ ಬಾಟಲ್ ಅಂತ ಕನ್ನಡಿಗರಿಗೆ ಡ್ಯಾನ್ಸ್ ಕಿಕ್ ಏರಿಸಿದ್ದು. ಇಷ್ಟೇ ಅಲ್ಲ ರಾರಾ ರಕ್ಕಮ್ಮ ಅಂತಾ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರತನಕವೂ ಕಿಚ್ಚೆಬ್ಬಿಸಿದ್ದು ನಮ್ಮ ಸ್ಟಾರ್ ಹೀರೋಗಳೇ ಆದ್ರೂ ಈ ಎಲ್ಲಾ ಟ್ರೇಡ್ಮಾರ್ಕ್ ಸ್ಟೆಪ್ಗಳ ಹಿಂದೆ ಒಂದು ದೈತ್ಯ ಶಕ್ತಿ ಇತ್ತು. ಹೆಸರಾಂತ ಕೊರಿಯೋಗ್ರಾಫರ್ ಒಬ್ಬನ ಕಾಲ್ಚೆಳಕಗಳಿತ್ತು. ಬರೀ ಇಲ್ಲಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿ ಅಂತಾ ಇಡೀ ದೇಶದ ದಿಗ್ಗಜ ನಾಯಕರನ್ನೇ ಥಕಥೈ ಅಂತಾ ಕುಣಿಸಿದ್ದ ಖ್ಯಾತ ಕೊರಿಯೋಗ್ರಾಫರ್ ಬೇರಾರೂ ಅಲ್ಲ. ಶೇಖ್ ಜಾನಿ ಭಾಷಾ, ಉರುಫ್ ಜಾನಿ ಮಾಸ್ಟರ್.
3 ಭಾಷೆಗಳಲ್ಲೂ ಟಾಪ್ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ!
ಕಳೆದ ತಿಂಗಳು 28ನೇ ತಾರೀಕು ಯುವತಿಯ ಮನೆ ಮುಂದೆ ಒಂದು ಬ್ಯಾನರ್ ರೀತಿ ಪೋಸ್ಟರ್ ನೇತಾಕಲಾಗಿ. ಅದರಲ್ಲಿ ಇದೇ ನಿನ್ನ ಕೊನೆಯ ಶೂಟಿಂಗ್, ಇನ್ನೇಲೆ ನಿಂಗೆ ಅವಕಾಶಗಳೇ ಇಲ್ಲದಂತೆ ಮಾಡ್ತೀನಿ ಅಂತಾ ಬರೆದಿತ್ತಂತೆ. ಜಾನಿಯಿಂದ ಆ ಯುವತಿಗೆ ಪ್ರಾಣ ಹಾನಿ ಇರೋದನ್ನೂ ಎಫ್ಐಆರ್ನಲ್ಲಿ ದಾಖಲಿಸಿದ್ದಾಳೆ. ಯುವತಿಯ ದೂರಿನ ಮೇರೆಗೆ ಹೈದರಾಬಾದ್ನ ರಾಯದುರ್ಗ ಪೊಲೀಸರು ಜೀರೋ ಎಫ್‌ಐಆರ್ ದಾಖಲಿಸಿದ್ದಾರೆ. ಆಕೆ ನರಸಿಂಗಿ ನಿವಾಸಿಯಾಗಿದ್ರಿಂದ, ಇನ್ನಷ್ಟು ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನ ನರಸಿಂಗಿ ಪೊಲೀಸರಿಗೆ ವರ್ಗಾಯಿಸಿದ್ದಾರೆ.
ಅಷ್ಟಕ್ಕೂ ಜಾನಿ ವಿರುದ್ಧ ದಾಖಲಾಗಿರೋ ಸೆಕ್ಷನ್ಗಳ್ಯಾವ್ಯಾವು ಅಂತ ನೋಡೊದಾದ್ರೆ. ಜಾನಿ ವಿರುದ್ಧ ಯುವತಿ ಕೊಟ್ಟ ದೂರಲ್ಲಿ ಮೂರು ವಿಷ್ಯಗಳು ಸ್ಪಷ್ಟ ಹೇಳಿದ್ದಾಳೆ. ಅವುಗಳಲ್ಲಿ ಐಪಿಸಿ ಸೆಕ್ಷನ್ 376 ಪ್ರಕಾರ ಅತ್ಯಾಚಾರ ಕೇಸ್ ಆಗಿ, ಸೆಕ್ಷನ್ 506 ಕ್ರಿಮಿನಲ್ ಬೆದರಿಕೆಯಾಗಿ, ಇನ್ನೂ ಸೆಕ್ಷನ್ 323 ಕಲಂ (2) (ಎನ್) – ಇದು ಸ್ವಯಂಪ್ರೇರಿತವಾಗಿ ಗಾಯ ಮಾಡಿದ್ದು, ನೋವುಂಟು ಮಾಡಿದ್ದಕ್ಕೆ ಕೇಸ್ ದಾಖಲಾಗಿದೆ.)
ಇದು ಜಾನಿ ಮಾಸ್ಟರ್ ವಿರುದ್ಧ ನೊಂದ ಯುವತಿ ಮಾಡಿರೋ ಆರೋಪ. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಜಾನಿ ಅಂದ್ರೆ ಒಂದು ರೇಂಜ್ ಇದ್ದ ಡ್ಯಾನ್ಸರ್ಗೆ ಈಗ ಈ ರೇಪ್ ಕೇಸ್ ಆತನ ಸಾಧನೆಯನ್ನ ಅಣಕಿಸುವಂತಾಗಿದೆ. ಒಬ್ಬ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೋರಿಯಾಗ್ರಾಫರ್ ವಿರುದ್ಧ ರೇಪ್ ಕೇಸ್ ದಾಖಲಾಗಿದ್ದು ಇಡೀ ತೆಲುಗು ಇಂಡಸ್ಟ್ರಿ ಮೌನವಾಗಿರುವಂತೆ ಮಾಡಿದೆ. ಬಟ್, ಜಾನಿಗೆ ಈ ಜೈಲು, ಪೊಲೀಸ್ ಕೇಸು ಇದ್ಯಾವೂ ಹೊಸದಲ್ಲ..ಅಷ್ಟೇ ಅಲ್ಲ, ಆತ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ರೀತಿಯೂ ಸಖತ್ ರೋಚಕವಾಗಿತ್ತು ಅಂದ್ರೆ ನೀವು ನಂಬಲೇಬೇಕು. ಜಾನಿಯ ಇತರೆ ಕೇಸ್ಗಳ ಹಿಸ್ಟರಿ ನೋಡಿದ್ರೆ ಜಾನಿ ಕಹಾನಿ ಸಣ್ಣದಲ್ಲ ಅಂತನಿಸಿಬಿಡುತ್ತೆ.