newsfirstkannada.com

×

ಜಸ್ಟ್ 1 ನಿಮಿಷ.. ಸಿನಿಮೀಯ ರಾಬರಿ; ಕೋಟಿ, ಕೋಟಿ ಬೆಲೆಯ ‘ಚಿನ್ನ’ ಕದ್ದು ಪರಾರಿ; ಆಮೇಲೇನಾಯ್ತು? VIDEO

Share :

Published September 27, 2024 at 9:20pm

Update September 27, 2024 at 9:29pm

    ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಸಿನಿಮೀಯ ರೀತಿ ದರೋಡೆ

    ಕಾರ್ ಅಡ್ಡಗಟ್ಟಿ 2.5ಕೆಜಿ ಚಿನ್ನ ದೋಚಿದ ಪಡೆ, ಇಬ್ಬರ ಅಪಹರಣ

    ರಾಜಾರೋಷವಾಗಿ ರಾಬರಿ ಮಾಡಿದ ಲೈವ್ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ತ್ರಿಸ್ಸೂರು: ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಸಿನಿಮಿಯ ರೀತಿ ದರೋಡೆ ನಡೆದಿದೆ. ತ್ರಿಸ್ಸೂರಿನ ಪೀಚಿ ಬಳಿ ಕಾರ್​ವೊಂದನ್ನು ಅಡ್ಡಗಟ್ಟಿದ 12 ಜನರ ಗುಂಪು ಇಬ್ಬರನ್ನು ಅಪಹರಣ ಮಾಡಿ ಅವರಿಂದ 2.5ಕೆಜಿಯಷ್ಟು ಚಿನ್ನವನ್ನೂ ದೋಚಿದ್ದಾರೆ. ಅಪಹರಣಕಾರರು ಮಾಡಿದ ಕೃತ್ಯ ವಾಹನದ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.

ಇದನ್ನೂ ಓದಿ: ದೇಶದಲ್ಲಿ ಶುರುವಾಗಿರುವ ಮಂಕಿಫಾಕ್ಸ್ ಭೀತಿ; ಕೇಂದ್ರ ಸರ್ಕಾರದಿಂದ ಹೊರಬಿತ್ತು ಸಲಹೆ ಸೂಚನೆ

ರಾಷ್ಟ್ರೀಯ ಹೆದ್ದಾರಿಯಲ್ಲಿ, ಗಿಜುಗುಟ್ಟುವ ವಾಹನ ದಟ್ಟನೆಯೇ ಇರುವ ಸಂದರ್ಭದಲ್ಲಿ, ಹಾಡಹಗಲೇ ಯಾವುದೇ ಹೆದರಿಕೆಯಿಲ್ಲದೇ ಈ ರೀತಿ ದರೋಡೆ ಮಾಡಿರುವ ವಿಡಿಯೋವನ್ನು ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಕೇರಳ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಎಫ್​ಐಆರ್ ಪ್ರಕಾರ ಈ ಘಟನೆ ಸೆಪ್ಟಂಬರ್ 22 ರಂದು ನಡೆದಿದೆ ಎಂದು ತಿಳಿದು ಬಂದಿದೆ.

ಅರುಣ್ ಸನ್ನಿ ಮತ್ತು ರೋಜ್ಯಾ ಥಾಮಸ್ ಎಂಬುವವರನ್ನು ಕಿಡ್ನಾಪ್ ಮಾಡಲಾಗಿದ್ದು. ಅವರನ್ನು ಹೊಡೆದು ಬಡೆದು ಅವರಿಂದ 1.84 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಿತ್ತುಕೊಂಡು ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಸದ್ಯ ಪೊಲೀಸರಿಂದ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್ 1 ನಿಮಿಷ.. ಸಿನಿಮೀಯ ರಾಬರಿ; ಕೋಟಿ, ಕೋಟಿ ಬೆಲೆಯ ‘ಚಿನ್ನ’ ಕದ್ದು ಪರಾರಿ; ಆಮೇಲೇನಾಯ್ತು? VIDEO

https://newsfirstlive.com/wp-content/uploads/2024/09/HIGHWAY-HEIST.jpg

Load More