ಮಹಿಳೆಯರ ಬಗ್ಗೆ ನನ್ನ ಗೌರವವು ದ್ವಿಗುಣಗೊಂಡಿದೆ ಎಂದ ನಟ
ಅಮ್ಮ ಆಗ್ತಿರುವ ಬಗ್ಗೆ ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದ ಮಿಲನಾ
ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ
ಸ್ಯಾಂಡಲ್ವುಡ್ ಸ್ಟಾರ್ ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ಖುಷಿಯನ್ನು ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಿಲನಾ ನಾಗರಾಜ್; ಅದ್ಧೂರಿಯಾಗಿ ನಡೆದ ಸೀಮಂತ ಶಾಸ್ತ್ರ
ನಮಗೆ ಹೆಣ್ಣು ಮಗು ಜನಿಸಿದೆ. ತಾಯಿ, ಮಗು ಚೆನ್ನಾಗಿದ್ದಾರೆ. ಈ ಪಯಣದಲ್ಲಿ ಪತ್ನಿ ಮಿಲನಾ ನಾಗರಾಜ್ ಅನುಭವಿಸಿದ ಮಾತೃತ್ವದ ನೋವು, ತ್ಯಾಗ ಮತ್ತು ಅವರ ಧೈರ್ಯಕ್ಕೆ ಹೆಮ್ಮೆಪಡುತ್ತೇನೆ. ಅದ್ಭುತ ಪ್ರಯಾಣದಲ್ಲಿ ಸಾಗುತ್ತಿರುವ ಎಲ್ಲಾ ತಾಯಂದಿರಿಗೆ ಒಂದು ದೊಡ್ಡ ನಮಸ್ಕಾರ. ಮಹಿಳೆಯರ ಬಗ್ಗೆ ಗೌರವ ದ್ವಿಗುಣಗೊಂಡಿದೆ. ಈ ಪ್ರಯಾಣ ನನಗೆ ಹೆಮ್ಮೆ ತಂದಿದೆ. ಜೊತೆಗೆ ಅದೃಷ್ಟದ ತಂದೆ ಆಗುತ್ತಿದ್ದೇನೆ. ನನಗೀಗ ಮಗಳಿದ್ದಾಳೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ.
ಸ್ಯಾಂಡಲ್ವುಡ್ನ ಈ ಸ್ಟಾರ್ ಜೋಡಿಯು 2021 ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. 2024ರಲ್ಲಿ ಚೊಚ್ಚಲ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ