300 ಕೋಟಿ ಸಲಾರ್… ಹೈ ವೋಲ್ಟೇಜ್ ಸಿನಿಮಾ
450 ಕೋಟಿಯ ಆದಿಪುರುಷ್.. ಲಾಭ ಎಷ್ಟು ಮಾಡ್ಬಹುದು?
ಜನವರಿಯಲ್ಲಿ 500 ಕೋಟಿಯ ‘ಪ್ರಾಜೆಕ್ಟ್ಕೆ’!
ಪ್ಯಾನ್ ಇಂಡಿಯಾದಲ್ಲಿ ಏಳೆಂಟು ತಿಂಗಳು ಪ್ರಭಾಸ್ ಮೇನಿಯಾ. ಡಾರ್ಲಿಂಗ್ ನಂಬಿದವರಿಗೆ ಈ ಏಂಟು ತಿಂಗಳು ಅದೃಷ್ಟ ಪರೀಕ್ಷೆ. ಇದು 500 ಕೋಟಿ ಅಥವಾ 1000 ಕೋಟಿ ವಿಷಯಲ್ಲ. ಆಲ್ಮೋಸ್ಟ್ 3000 ಕೋಟಿ ಕಥೆ. ಬಾಹುಬಲಿ ಆದ್ಮೇಲೆ ಪ್ರಭಾಸ್ ವಿಚಾರದಲ್ಲಿ ಎಕ್ಸ್ಪೆಕ್ಟ್ಟೇಶನ್ಗೆ ತಕ್ಕಂತೆ ಏನೂ ಆಗ್ತಿಲ್ಲ. ಸಾಹೋ, ರಾಧೆಶ್ಯಾಮ್ ಅಂತ ಹೈ ಬಜೆಟ್ ಚಿತ್ರಗಳನ್ನ ಮಾಡಿದ್ರು ನಿರೀಕ್ಷೆಯಂತೆ ಬ್ಯುಸಿನೆಸ್ ಆಗ್ಲಿಲ್ಲ. ಡಾರ್ಲಿಂಗ್ನ ನಂಬಿ ಕೋಟ್ಯಾಂತರ ರೂಪಾಯಿ ಇನ್ವೆಸ್ಟ್ ಮಾಡಿದ ಪ್ರೊಡ್ಯೂಸರ್ಸ್ಗೆ ಲಾಭಕ್ಕಿಂತ ನಷ್ಟ ಆಗಿದ್ದೇ ಹೆಚ್ಚು. ಆದರೂ ಕೋಟಿ ಸರದಾರನ ಮೇಲೆ ನಂಬಿಕೆ ಕಳೆದುಕೊಳ್ಳದ ನಿರ್ಮಾಪಕರು ಕೋಟಿ ಕೋಟಿ ಸುರಿದು ಇನ್ನಷ್ಟು ದೊಡ್ಡದಾಗಿ ಸಿನಿಮಾಗಳನ್ನ ಮಾಡ್ತಾ ಇದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಮೂರು ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದಕ್ಕಿಂತ ಒಂದು ವಿಶೇಷವಾಗಿದ್ದು, ಈ ಚಿತ್ರಗಳ ಬಜೆಟ್ ಕೂಡ ಅಷ್ಟೇ ದುಬಾರಿಯಾಗಿದೆ. ಈ ಮೂರು ಚಿತ್ರಗಳ ಒಟ್ಟು ಬಜೆಟ್ ಅಂದಾಜಿಸಿದ್ರೆ 1000 ದಿಂದ 1500 ಕೋಟಿವರೆಗೂ ಆಗುತ್ತೆ ಎನ್ನಲಾಗುತ್ತಿದೆ. ಬಜೆಟ್ ಇಷ್ಟಾದ್ರೆ ಇನ್ನು ಈ ಚಿತ್ರಗಳಿಂದ ಟಾರ್ಗೆಟ್ ಎಷ್ಟಿರಬಹುದು ಅನ್ನೋದು ಈಗ ಬಣ್ಣದ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬಾಲಿವುಡ್ನ ಖ್ಯಾತ ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಮೂಡಿ ಬರ್ತಿರೋ ಸಿನಿಮಾ ಆದಿಪುರುಷ್. ರಾಮಾಯಣ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಸೀತಾಮಾತೆ ಪಾತ್ರದಲ್ಲಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಜೆಟ್ ಅಂದಾಜು 450 ಕೋಟಿ. ಅರ್ಧದಷ್ಟು ಬಜೆಟ್ನ ಚಿತ್ರದ ವಿಎಫ್ಎಕ್ಸ್ಗೆ ಖರ್ಚು ಮಾಡಿದೆಯಂತೆ ಚಿತ್ರತಂಡ. ಹಿಂದಿ, ತೆಲುಗು, ಕನ್ನಡ ಸೇರಿ ಐದು ಭಾಷೆಯಲ್ಲಿ ಜೂನ್ 16ಕ್ಕೆ ಆದಿಪುರುಷ್ ತೆರೆಗೆ ಬರ್ತಿದ್ದು, ಒನ್ ಟು ಡಬಲ್ ಗಳಿಕೆ ಮೇಲೆ ಪ್ರಭಾಸ್ ಟೀಮ್ ಕಣ್ಣಿಟ್ಟಿದೆ. ಅಂದ್ರೆ 450 ಕೋಟಿ ಬಜೆಟ್ನ ಈ ಸಿನಿಮಾ ಕನಿಷ್ಠ ಅಂದ್ರು 1000 ಕೋಟಿ ಕಲೆಕ್ಷನ್ ಮಾಡ್ಬೇಕು ಅನ್ನೋದು ಪ್ಲಾನಿಂಗ್ ಅಂತೆ.
300 ಕೋಟಿ ಸಲಾರ್… ಹೈ ವೋಲ್ಟೇಜ್ ಸಿನಿಮಾ
ಎರಡು ಸೋಲುಗಳಿಂದ ಅಪ್ಸೆಟ್ ಆಗಿರೋ ಪ್ರಭಾಸ್ಗೆ ಆದಿಪುರುಷ್ ಗೆಲುವಿನ ಮಾಲೆ ಹಾಕುತ್ತೆ ಎಂಬ ನಿರೀಕ್ಷೆ ಇದೆ. ಆದ್ರೆ, ಬಿಡುಗಡೆಗೂ ಮುಂಚೆಯೇ ಚಿತ್ರದ ಕ್ವಾಲಿಟಿ ಬಗ್ಗೆ ನೆಗೆಟಿವ್ ಅಭಿಪ್ರಾಯ ಮೂಡಿರೋ ಹಿನ್ನೆಲೆ ಆದಿಪುರುಷ್ಗಿಂತ ಸಲಾರ್ ಚಿತ್ರದ ಮೇಲೆ ಎಕ್ಸ್ಪೆಕ್ಟೇಶನ್ ಜಾಸ್ತಿ ಇದೆ. ಹೌದು, ಹೊಂಬಾಳೆ ಫಿಲಂಸ್ ಅಡಿ ತಯಾರಾಗ್ತಿರುವ ಸಲಾರ್ಗೆ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಿರೋದ್ರಿಂದ ಪ್ರಭಾಸ್ಗೆ ಬಿಗ್ ಬ್ರೇಕ್ ಕೊಡೋದೇ ಸಲಾರ್ ಎಂಬ ನಂಬಿಕೆ ಸೃಷ್ಟಿಯಾಗಿದೆ. ಇನ್ನು, ಕಲೆಕ್ಷನ್ ಬಗ್ಗೆ ಹೇಳೋದಾದ್ರೆ ಕೆಜಿಎಫ್ ಸಿನಿಮಾ 1100 ಕೋಟಿವರೆಗೂ ಬ್ಯುಸಿನೆಸ್ ಮಾಡಿತ್ತು. ಅದನ್ನ ಮೀರಿಸುವಂತೆ ಸಲಾರ್ ಬರ್ತಿದೆ ಅನ್ನೋದು ಇಂಡಸ್ಟ್ರಿಯೊಳಗಿನ ಖಾಸ್ಬಾತ್ ಸಮಾಚಾರ. ಸೆಪ್ಟೆಂಬರ್ 28ಕ್ಕೆ ಸಲಾರ್ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಗ್ತಿದೆ.
ಜನವರಿಯಲ್ಲಿ 500 ಕೋಟಿಯ ‘ಪ್ರಾಜೆಕ್ಟ್ಕೆ’!
ಜೂನ್ನಲ್ಲಿ ಆದಿಪುರುಷ್, ಸೆಪ್ಟೆಂಬರ್ನಲ್ಲಿ ಸಲಾರ್ ಮುಗಿತ್ತಿದ್ದಂತೆ ಜನವರಿಯಲ್ಲಿ ಪ್ರಭಾಸ್ ನಟನೆಯ ಮತ್ತೊಂದು ಹೈ ವೋಲ್ಟೇಜ್ ಸಿನಿಮಾ ‘ಪ್ರಾಜೆಕ್ಟ್ಕೆ’ ತೆರೆಗೆ ಬರಲಿದೆ. ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫಿಕ್ಷನ್ ಚಿತ್ರ ಇದಾಗಿದ್ದು, ಈ ಚಿತ್ರವೂ ಆಲ್ಮೋಸ್ಟ್ 450 ರಿಂದ 500 ಕೋಟಿ ವೆಚ್ಚದಲ್ಲಿ ರೆಡಿಯಾಗ್ತಿದೆ. ಮೇಕಿಂಗ್ ಹಂತದಲ್ಲಿ ಭಾರಿ ಹೈಪ್ ಸೃಷ್ಟಿಸಿರುವ ಈ ಚಿತ್ರ ಹಾಲಿವುಡ್ ರೇಂಜ್ಗೆ ಮೇಕಿಂಗ್ ಆಗ್ತಿದೆ ಎನ್ನಲಾಗಿದೆ. ಈ ಸಿನಿಮಾದ ಸ್ಪೆಷಲ್ ಏನಪ್ಪಾ ಅಂದ್ರೆ ಇದೇ ಮೊದಲ ಸಲ ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಸಹ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಹಾಗಾಗಿ, ಪ್ರಾಜೆಕ್ಟ್ಕೆ ಚಿತ್ರವೂ ಸಾವಿರ ಕೋಟಿ ಮೇಲೆ ಕಣ್ಣಾಕಿದೆ ಎಂದು ಹೇಳಲಾಗ್ತಿದೆ.
ಒಟ್ಟಿನಲ್ಲಿ ಪ್ರಭಾಸ್ ಕೈಯಲ್ಲಿರೋ ಈ ಮೂರು ಚಿತ್ರಗಳು ಮೂರು ರತ್ನಗಳು. ಒಂದೊಂದು ಚಿತ್ರವೂ ಒಂದೊಂದು ಸಾವಿರ ಕೋಟಿ ವ್ಯವಹಾರ ಮಾಡೋ ನಿರೀಕ್ಷೆ ಇದೆ. ಇನ್ನು ಈ ಮೂರು ಚಿತ್ರಗಳು ಕೇವಲ ಏಂಟು ತಿಂಗಳ ಅಂತರದಲ್ಲಿ ತೆರೆಗೆ ಬರ್ತಿರೋದ್ರಿಂದ ಏಂಟು ತಿಂಗಳಲ್ಲಿ ಮೂರು ಸಾವಿರ ಕೋಟಿ ಬ್ಯುಸಿನೆಸ್ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ