newsfirstkannada.com

ಒಂದೇ ಒಂದು ಸೀನ್​​ಗಾಗಿ ಬರೋಬ್ಬರಿ 10 ಕೋಟಿ ರೂ. ವೆಚ್ಚ.. ಬಗೆದಷ್ಟು ಬಯಲಾಗ್ತಿದೆ ‘ಸಲಾರ್’ ರಹಸ್ಯ..!

Share :

09-06-2023

    ಸಮುದ್ರದಲ್ಲಿ ಸಲಾರ್​ ಮೆಗಾ ಆ್ಯಕ್ಷನ್ ಸೀಕ್ವೆನ್ಸ್​!

    ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಸಲಾರ್

    ಸೆ.28 ರಂದು ರಿಲೀಸ್ ಆಗ್ತಿದ್ದು, ಎಷ್ಟು ಭಾಷೆಯಲ್ಲಿ ಗೊತ್ತಾ?

ಅಗೆದೆಷ್ಟು ಆಳ ಎಂಬಂತೆ ಸಲಾರ್ ಚಿತ್ರದ ಬಗ್ಗೆ ಹುಡುಕಿದಷ್ಟು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಲೇ ಇದೆ. ಬಹುತೇಕ ಚಿತ್ರೀಕರಣ ಮುಗಿಸಿ ಕ್ಲೈಮ್ಯಾಕ್ಸ್​ ಶೂಟಿಂಗ್​ನಲ್ಲಿರುವ ಸಲಾರ್ ತಂಡ ಇನ್ನೈದು ದಿನದ ಕೆಲಸ ಮುಗಿಸಿದ್ರೆ ಟಾಕಿ ಪೋಷನ್ ಕಂಪ್ಲೀಟ್ ಮಾಡ್ತಾರಂತೆ. ಅದಾದ ಮೇಲೆ ಟೀಸರ್, ಟ್ರೇಲರ್ ಜೊತೆಗೆ ಪ್ರಮೋಷನ್ ಬಾವುಟ ಹಾರಿಸೋಕೆ ಸಕಲ ಸಿದ್ಧತೆಯೂ ಆಗಿದೆ ಎನ್ನಲಾಗ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್​ ನಟನೆಯ ಹಾಗೂ ಕೆಜಿಎಫ್ ಖ್ಯಾತಿಯ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ತಯಾರಾಗಿರುವ ಬಹುಕೋಟಿ ವೆಚ್ಚದ ಚಿತ್ರ ಸಲಾರ್. ಹೆಚ್ಚು ಕಡಿಮೆ ಅಂದ್ರು ಸಲಾರ್​ ಚಿತ್ರಕ್ಕೆ 400 ಕೋಟಿವರೆಗೂ ಬಜೆಟ್​ ಆಗುತ್ತೆ ಅಂತ ಅಂದಾಜಿಸಲಾಗಿದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರ್, ಜಗಪತಿ ಬಾಬು ಹೀಗೆ ದೊಡ್ಡ ದೊಡ್ಡ ಸ್ಟಾರ್​ಗಳೇ ಚಿತ್ರದಲ್ಲಿರುವುದರಿಂದ ಅವ್ರ ಸಂಭಾವನೆ ಸೇರಿ ಭಾರಿ ವೆಚ್ಚದಲ್ಲಿ ಮೇಕಿಂಗ್ ಆಗಿದೆ.

ಈಗ ವಿಷ್ಯ ಏನಪ್ಪ ಅಂದ್ರೆ ಸಲಾರ್ ಚಿತ್ರದ ಆ್ಯಕ್ಷನ್ ಸೀನ್​ವೊಂದಕ್ಕೆ ಡಿಸಿಟಿ ಟೆಕ್ನಾಲಜಿ ಬಳಸಿದ್ದಾರಂತೆ. ಇದು ಚಿತ್ರದ ಬಹುಮುಖ್ಯ ದೃಶ್ಯವಾಗಿದ್ದು, ಇದಕ್ಕಾಗಿ ಭಾರಿ ಬಜೆಟ್​ ಖರ್ಚು ಮಾಡಿದ್ದಾರೆ ಎಂಬ ಇನ್​ಸೈಡ್​ ಮಾಹಿತಿಯೊಂದು ಫಿಲ್ಮಿಫಸ್ಟ್​ ತಂಡಕ್ಕೆ ಎಕ್ಸ್​ಕ್ಲೂಸಿವ್ ಆಗಿ ಸಿಕ್ಕಿದೆ.

ಸಲಾರ್ ಪಕ್ಕಾ ಆ್ಯಕ್ಷನ್ ಅಡ್ವೆಂಚರ್ ಸಿನಿಮಾ.. ಕೆಜಿಎಫ್, ಕೆಜಿಎಫ್ 2 ಚಿತ್ರದಲ್ಲಿ ನೀವೇನು ಆ್ಯಕ್ಷನ್​ ನೋಡಿದ್ರು ಅದನ್ನ ಮೀರಿಸೋ ಧಮಾಕ ಸೀನ್ಸ್​ ಸಲಾರ್ ಚಿತ್ರದಲ್ಲಿ ನೋಡೋಕೆ ಸಿಗುತ್ತಂತೆ.. ಹಾಗಾಗಿ ಒಂದೊಂದು ಸೀನ್​ಗೂ ಅಷ್ಟು ವರ್ಕ್ ಮಾಡಿದ್ದಾರಂತೆ ಪ್ರಶಾಂತ್ ನೀಲ್.

ಸಲಾರ್ ಚಿತ್ರದಲ್ಲಿ 20 ನಿಮಿಷಗಳಷ್ಟು ದೊಡ್ಡದಾದ ಸಾಹಸ ದೃಶ್ಯವೊಂದಿದೆ. ಈ ಸೀನ್​ಗಾಗಿ ಬರೋಬ್ಬರಿ 10 ಕೋಟಿ ಖರ್ಚು ಮಾಡಿದ್ದಾರಂತೆ. ವಿಶೇಷ ಅಂದ್ರೆ ಈ ಸೀನ್​ ಕಂಪ್ಲೀಟ್​ ಪೋಷನ್ ಶೂಟ್ ಆಗಿರೋದು ಸಮುದ್ರದಲ್ಲಂತೆ. ಹಾಗಾಗಿ ಈ ಸೀನ್​ ಸಲಾರ್ ಚಿತ್ರದ ಮೋಸ್ಟ್​ ಇಂಪಾರ್ಟೆಂಟ್​ ಹಾಗೂ ಹೈಲೈಟ್​ ಎನ್ನಲಾಗಿದೆ. ಮತ್ತೊಂದು ವಿಶೇಷ ಅಂದ್ರೆ ಸಲಾರ್ ಸಿನಿಮಾನ DCT ಟೆಕ್ನಾಲಜಿ ಬಳಸಿ ಚಿತ್ರೀಕರಿಸುತ್ತಿದ್ದಾರಂತೆ. DCT ಅಂದ್ರೆ ಡಾರ್ಕ್ ಸೆಂಟ್ರಿಕ್ ಥೀಮ್ ಅಂತ. ಇದು ಭಾರತೀಯ ಚಿತ್ರರಂಗದ ಮೊಟ್ಟ ಮೊದಲ DCT ತಂತ್ರಜ್ಞಾನದ ಚಿತ್ರವಾಗಿದ್ದು, ಲೈಟಿಂಗ್ ಪ್ಯಾಟ್ರನ್ ಹಾಗೂ ಕಲರ್ ಟೋನ್ ಕೂಡ ಡಾರ್ಕ್ ಆಗಿ ಕಾಣಲಿದೆಯಂತೆ.

ಒಟ್ನಲ್ಲಿ ಸಲಾರ್​ ಚಿತ್ರದ ರಿಲೀಸ್ ದಿನಾಂಕ ಹತ್ರಾ ಬರ್ತಿದ್ದಂತೆ ಒಂದೊಂದೇ ರೋಚಕ ವಿಷ್ಯಗಳು ಹೊರಬೀಳುತ್ತಿದೆ. ಕನ್ನಡ, ತೆಲುಗಿನ ಜೊತೆ ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್ ಹೀಗೆ ಬರೋಬ್ಬರಿ ಆರು ಭಾಷೆಗಳಲ್ಲಿ ಸೆಪ್ಟೆಂಬರ್ 28ಕ್ಕೆ ಸಲಾರ್ ತೆರೆಗೆ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಒಂದು ಸೀನ್​​ಗಾಗಿ ಬರೋಬ್ಬರಿ 10 ಕೋಟಿ ರೂ. ವೆಚ್ಚ.. ಬಗೆದಷ್ಟು ಬಯಲಾಗ್ತಿದೆ ‘ಸಲಾರ್’ ರಹಸ್ಯ..!

https://newsfirstlive.com/wp-content/uploads/2023/06/SALAR.jpg

Load More