newsfirstkannada.com

×

ದರ್ಶನ್​ಗೆ ಎಚ್ಚರಿಕೆ ಕೊಟ್ಟ ವಕೀಲರು; ಬಳ್ಳಾರಿ ಜೈಲಿನಲ್ಲಿ ಪದೇ ಪದೆ ಕಿರಿಕ್..! ಈಗ ಏನ್ಮಾಡಿದ್ರು..?

Share :

Published September 17, 2024 at 11:06am

Update September 17, 2024 at 11:09am

    ಜೈಲಿನಲ್ಲಿ ಪದೇ ಪದೇ ಕಿರಿಕ್ ಮಾಡಿಕೊಳ್ಳುತ್ತಿರುವ ಆರೋಪಿ ದರ್ಶನ್​

    ದರ್ಶನ್​ರ ಯಡವಟ್ಟುಗಳಿಂದ ಕಾನೂನು ಹೋರಾಟಕ್ಕೆ ತೊಡಕಾಗುವ ಭಯ

    ವಕೀಲರಿಂದಲೇ ನೀತಿ ಪಾಠ ಹೇಳಿಕೊಳ್ಳೊ ಪ್ರಸಂಗ ತಂದುಕೊಂಡ ದರ್ಶನ್​

ಬಳ್ಳಾರಿ: ಪರಪ್ಪನ ಅಗ್ರಹಾರದಲ್ಲಿ ಯಡವಟ್ಟು ಮಾಡಿಕೊಂಡು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸೇರಿದ್ರು ದರ್ಶನ್​. ದರ್ಶನ್ ಎಲ್ಲಿ ಹೋದ್ರು ಕಿರಿಕ್​ ಮಾಡುವುದನ್ನು ಬಿಟ್ಟಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಯಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾರೆ. ಬದಲಾಗುವ ಇರಾದೆ, ಪಶ್ಚಾತಾಪದ ಭಾವ ಅವರಲ್ಲಿ ಸಾಸಿವೆ ಕಾಳಷ್ಟೂ ಮೂಡಿಲ್ಲ ಅನ್ನೋದಕ್ಕೆ ಈ ಹಿಂದೆ ಮಾಧ್ಯಮಗಳ ಕ್ಯಾಮರಾಗಳತ್ತ ಮಧ್ಯದ ಬೆರಳು ತೋರಿ ಅಸಹ್ಯ ರೀತಿಯಲ್ಲಿ ಸಂಜ್ಞೆ ಮಾಡಿದ್ದೇ ದೊಡ್ಡ ನಿದರ್ಶನ.

ಇದನ್ನೂ ಓದಿ: ದರ್ಶನ್​​ಗೆ ಅಧಿಕಾರಿಗಳು ವಾರ್ನಿಂಗ್.. ಬಳ್ಳಾರಿ ಜೈಲಿಗೆ ಬಂದರೂ ಬುದ್ಧಿ ಕಲಿಯಲಿಲ್ಲ ಎಂದು ಬೇಸರ.. ಆಗಿದ್ದೇನು..?

ದರ್ಶನ್​ ಅವರ ಈ ರೀತಿಯ ಅಹಂ ಹಾಗೂ ನಡುವಳಿಕೆಗಳು ಕೊಡಲಿಯ ಕಾವು ಕುಲಕ್ಕೆ ಮೂಲ ಅನ್ನುವಂತೆ ಅವರ ಗುಣ ಅವರಿಗೇ ಮೂಲವಾಗುತ್ತಿವೆ. ದರ್ಶನ್ ಬಳ್ಳಾರಿ ಜೈಲಿನಲ್ಲಿ ಒಂದಿಲ್ಲೊಂದು ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಟಿವಿಗಾಗಿ ಜೈಲು ಹಾಗೂ ಜೈಲಾಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಇದೆಲ್ಲದರ ಪರಿಣಾಮ ಏನಾಗಲಿದೆ ಅನ್ನೊದು ದರ್ಶನ್​ಗೆ ಅರಿವಿಲ್ಲ. ಹೀಗಾಗಿ ಈ ರೀತಿಯೆಲ್ಲ ಮಾಡಬೇಡಿ ಇದು ಕೊನೆಗೆ ನಿಮಗೆ ಮುಳುವಾಗುತ್ತದೆ ಎಂದು ದರ್ಶನ್ ಪರ ವಕೀಲರೇ ಹೇಳಬೇಕಾದ ಸ್ಥಿತಿ ಬಂದಿದೆ.

ಇದನ್ನೂ ಓದಿ:ದರ್ಶನ್​ಗಾಗಿ ಬಳ್ಳಾರಿ ಜೈಲಿಗೆ ಬಂತು ಲೆಟರ್​.. ಕಳುಹಿಸಿದ್ಯಾರು? ಅದರಲ್ಲೇನಿತ್ತು?

ದರ್ಶನ್ ಮಾಡಿಕೊಳ್ಳುವ ಒಂದೊಂದು ಕಿರಿಕ್ ಒಂದೊಂದು ಯಡವಟ್ಟು ಅವರ ಜಾಮೀನಿನ ಮೇಲೆ ತೀವ್ರ ಪರಿಣಾಮ ಬೀರಲಿವೆ. ಅದನ್ನು ಅರಿತಿರುವ ದರ್ಶನ್ ಪರ ವಕೀಲರು ಈಗ ದರ್ಶನ್​ಗೆ ನೀತಿ ಪಾಠ ಮಾಡಲು ಸಜ್ಜಾಗಿದ್ದಾರೆ. ಜೈಲಿನಲ್ಲಿ ಇಲ್ಲದ ಯಡವಟ್ಟುಗಳನ್ನ ಮಾಡಿಕೊಳ್ಳಬೇಡಿ. ಪದೇ ಪದೇ ಈ ರೀತಿಯಾಗಿ ಕಿರಿಕ್ ಮಾಡಿಕೊಂಡಲ್ಲಿ ಬೇಲ್​ಗೆ ಸಮಸ್ಯೆಯಾಗುವುದರ ಜೊತೆಗೆ ಕಾನೂನು ಹೋರಾಟಕ್ಕೂ ತೊಡಕು ಉಂಟಾಗುತ್ತದೆ ಎಂದು ಹೇಳಿ ಪತ್ರ ಬರೆದು ಎಚ್ಚರಿಸಿದ್ದಾರೆ. ಬಳ್ಳಾರಿಯ ಜೈಲಿಗೆ ಬಂದ ಪತ್ರವನ್ನು ಜೈಲು ಸಿಬ್ಬಂದಿ ಈಗಾಗಲೇ ದರ್ಶನ್​ಗೆ ತಲುಪಿಸಿದ್ದಾರೆ. ಈಗಲಾದರೂ ದರ್ಶನ್ ಇಲ್ಲದ ಕಿರಿಕ್ ಮಾಡಿಕೊಳ್ಳುವುದನ್ನು ನಿಲ್ಲಿಸುತ್ತಾರಾ ಇಲ್ಲ ಸ್ವಭಾವಕ್ಕೆ ಔಷಧಿಯಿಲ್ಲ ಎಂಬ ಗಾದೆಯನ್ನು ನಿಜ ಮಾಡುತ್ತಾರಾ ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ಗೆ ಎಚ್ಚರಿಕೆ ಕೊಟ್ಟ ವಕೀಲರು; ಬಳ್ಳಾರಿ ಜೈಲಿನಲ್ಲಿ ಪದೇ ಪದೆ ಕಿರಿಕ್..! ಈಗ ಏನ್ಮಾಡಿದ್ರು..?

https://newsfirstlive.com/wp-content/uploads/2024/09/darshan8.jpg

Load More