Advertisment

ನಾಳೆ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗುತ್ತಾ? ಹೈಕೋರ್ಟ್‌ನಲ್ಲಿ ನಡೆದ ವಾದ, ಪ್ರತಿವಾದ ಏನು?

author-image
admin
Updated On
ದರ್ಶನ್‌ ಜಾಮೀನಿಗೆ ಕುತ್ತು? ಮತ್ತೆ ಕಾನೂನು ಸಮರಕ್ಕೆ ಸಜ್ಜಾದ SPP ಪ್ರಸನ್ನ ಕುಮಾರ್‌! ಮುಂದೇನು?
Advertisment
  • ಚಿಕಿತ್ಸೆ ನೀಡದಿದ್ದರೆ ಕಾಲುಗಳು ಸ್ಪರ್ಶ ಕಳೆದುಕೊಳ್ಳುವ ಸಾಧ್ಯತೆ
  • ಮೂತ್ರ ವಿಸರ್ಜನೆ ಕಂಟ್ರೋಲ್ ಸಾಮರ್ಥ್ಯ ಕಳೆದುಕೊಳ್ಳಬಹುದು
  • ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಇದೆ ಎಂದ SPP

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ಆದೇಶವನ್ನು ನಾಳೆಗೆ (ಅ.30ಕ್ಕೆ) ಕಾಯ್ದಿರಿಸಲಾಗಿದೆ.

Advertisment

ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಅವರು ಹಾಜರಿದ್ದರು. ಮೊದಲು ವಾದ ಮಂಡಿಸಿದ ಸಿ.ವಿ ನಾಗೇಶ್ ಅವರು ವೈದ್ಯರು MRI ಮತ್ತು ಸ್ಕ್ಯಾನ್ ಮಾಡಿದ್ದಾರೆ. ರೋಗಿಗೆ ಬೆನ್ನಿನ ನರದ L5 - S1 ಡಿಸ್ಕ್ ಸಮಸ್ಯೆ ಇದೆ.

publive-image

ದರ್ಶನ್‌ಗೆ ಮುಂದೆ ಅಪಾಯ!
ದರ್ಶನ್ ಬೆನ್ನಿಗೆ ಪಟ್ಟು ಕಟ್ಟು, ಮಾಸಾಜ್ ಮಾಡಲಾಗಿದೆ. ಅದಕ್ಕೆ ಸ್ವಲ್ಪ ನೋವು ಕಡಿಮೆಯಾಗಿದೆ. ಆದರೆ ಎರಡು ಕಾಲಿನ ಊತದಿಂದ ಮುಂದೆ ಸಮಸ್ಯೆ ಇದೆ. ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಮಾಡದಿದ್ದರೆ ಮುಂದೆ ಕಾಲುಗಳು ಸ್ಪರ್ಶ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಮೂತ್ರ ವಿಸರ್ಜನೆ ಕಂಟ್ರೋಲ್ ಮಾಡುವ ಸಾಮರ್ಥ್ಯ ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 5 ತಿಂಗಳ ಸಂಚು.. ಉಡುಪಿ ಪತ್ನಿ ವಿಷದ ಸ್ಫೋಟಕ ಸತ್ಯ ಬಯಲು; ಬಾಯ್‌ ಫ್ರೆಂಡ್ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ! 

Advertisment

ದರ್ಶನ್ ಪರ ವಕೀಲರ ವಾದ ಆಲಿಸಿದ ಜಡ್ಜ್‌ ಬೆಂಗಳೂರಿನ ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯ ವ್ಯವಸ್ಥೆ ಇದೆ ಎಂದು ಪ್ರಶ್ನಿಸಿದರು. ಅದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ ಇದೆ ಎಂದರು.

publive-image

ಮತ್ತೆ ವಾದ ಮಾಡಿದ ಸಿ.ವಿ ನಾಗೇಶ್ ಅವರು ಆರೋಪಿ ತನಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಪ್ರಾಸಿಕ್ಯೂಷನ್ ಇಂತಹ ಆಸ್ಪತ್ರೆಯಲ್ಲಿ ತಗೋಬೇಕು ಅಂತ ಹೇಳಲು ಸಾಧ್ಯವಿಲ್ಲ. ಆರೋಪಿಗೆ ನಂಬಿಕೆ ಇರುವ ಕಡೆ ಸೂಕ್ತ ಚಿಕಿತ್ಸೆ ತಗೋಬಹುದು. ಕಾನೂನಿನಲ್ಲಿ ಆರೋಪಿಗೆ ಅವನ ಇಷ್ಟದ ಕಡೆ ಚಿಕಿತ್ಸೆ ಪಡೆಯಬಹುದು. ದರ್ಶನ್ ತನ್ನ ವೆಚ್ಚದಲ್ಲಿ ತನಗೆ ಬೇಕಾದ ಕಡೆ ತಗೋಬಹುದು. ವೈದ್ಯಕೀಯ ವರದಿಯ ಬಗ್ಗೆ ಯಾರು ಅನುಮಾನ ಪಡುವಂತಿಲ್ಲ. ಹೀಗಾಗಿ ನಮಗೆ ಮಧ್ಯಂತರ ಜಾಮೀನು ನೀಡಲು ಕೋರುತ್ತೇನೆ ಎಂದು ವಾದಿಸಿದರು.

ಹೀಗೆ ಅನೇಕ ವೈದ್ಯಕೀಯ ವರದಿಯ ಅಂಶಗಳನ್ನು ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಹಾಗೂ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದಿಸಿದರು. ಎರಡು ಕಡೆ ವಕೀಲರ ವಾದ, ಪ್ರತಿವಾದ ಆಲಿಸಿದ ಜಡ್ಜ್‌, ದರ್ಶನ್‌ಗೆ ವೈದ್ಯರು ಏನು ಶಿಫಾರಸ್ಸು ಮಾಡಿದ್ದಾರೆ. ಅದಕ್ಕೆ ಅಪರೇಷನ್ ಅವಶ್ಯಕತೆ ಇದೆಯಾ? ಅದರಲ್ಲೂ ಕೈದಿಯಾಗಿ ಸರ್ಕಾರದ ಕಡೆಯಿಂದ ಚಿಕಿತ್ಸೆ ಅವಕಾಶ ಇದೆಯಾ? ಮಧ್ಯಂತರ ಜಾಮೀನು ಪಡೆದು ಹೊರಗೆ ಚಿಕಿತ್ಸೆ ಬೇಕಾ? ಅನ್ನೋದರ ಬಗ್ಗೆ ಆದೇಶವನ್ನು ನಾಳೆಗೆ ಕಾಯ್ದಿರಿಸಿದ್ದಾರೆ. ನಾಳೆ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗುತ್ತಾ ಅನ್ನೋ ತೀರ್ಪು ಕುತೂಹಲ ಕೆರಳಿಸಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment