newsfirstkannada.com

ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿಂದೆ ಓರ್ವ PSI ನೆರಳು..? ಏನಿದು ಶಾಕಿಂಗ್ ವಿಚಾರ..?

Share :

Published June 17, 2024 at 2:27pm

    ಕೊಲೆಯ ನಂತರ PSI ಜೊತೆ ಆರೋಪಿಗಳ ಸಂಪರ್ಕ?

    ಆರೋಪಿ ವಿನಯ್ ಸಿಡಿಆರ್‌ ಪಡೆದು ಪರಿಶೀಲನೆ

    ಸಿಡಿಆರ್​ ನಲ್ಲಿ PSIಗೆ ಕರೆ ಮಾಡಿರುವ ವಿಚಾರ ಬಯಲಿಗೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಚಿತ್ರದುರ್ಗದಲ್ಲಿ ನಿನ್ನೆ ಈಡೀ ದಿನ ಸ್ಥಳ ಮಹಜರು ಕಾರ್ಯ ನಡೆಸಿದ್ದಾರೆ. ಸ್ಥಳ ಮಹಜರ್ ವೇಳೆ ಆರೋಪಿಗಳ ಮನೆಯಲ್ಲಿ ತನಿಖೆಗೆ ಹೊಸ ಸುಳಿವು ನೀಡಬಹುದಾದ ಕೆಲವು ವಸ್ತುಗಳನ್ನು ಸೀಜ್ ಮಾಡಿದ್ದಾರೆ.

ಕೊಲೆ ಪ್ರಕರಣದ ಹಿಂದೆ ಪೊಲೀಸ್ ಇನ್ಸ್​ಪೆಕ್ಟರ್ ನೆರಳು ಇದೆಯಾ ಎಂಬ ಅನುಮಾನ ಕಾಡಿದೆ ಎನ್ನಲಾಗಿದೆ. ಕೊಲೆಯ ನಂತರ PSI ಒಬ್ಬರ ಜೊತೆ ಆರೋಪಿಗಳು ಸಂಪರ್ಕ ಮಾಡಿದ್ದಾರೆ. ಆರೋಪಿ ವಿನಯ್ ಪಿಎಸ್​ಐ ಒಬ್ಬರಿಗೆ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಆರೋಪಿ ವಿನಯ್ ಅರೆಸ್ಟ್ ಆಗುತ್ತಿದ್ದಂತೆಯೇ, ಸಿಡಿಆರ್‌ ಪಡೆದು ಪರಿಶೀಲನೆ ನಡೆಸಿದಾಗ PSIಗೆ ಕರೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ:ದರ್ಶನ್​​ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ.. ಈ ನಟಿಯ ಹಿನ್ನೆಲೆ ಏನು ಗೊತ್ತಾ..?

ಈ ಸಂಬಂಧ ಪಿಎಸ್​ಐ ಅವರಿಂದ ಹೇಳಿಕೆ ಪಡೆಯಲು ತನಿಖಾಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ಅನ್ನಪೂರ್ಣೇಶ್ವರಿನಗರ ಠಾಣೆಗೆ‌ ಬಂದಿದ್ದ ಆ ಪಿಎಸ್​ಐ ತಮಗೆ ಆರೋಪಿ ವಿನಯ್ ಯಾಕೆ ಕರೆ ಮಾಡಿದ್ದ ಅನ್ನೋದ್ರ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ಪಿಎಸ್​ಐ ಪಾತ್ರವೇನು?
ರೇಣುಕಾಸ್ವಾಮಿ ಮರ್ಡರ್ ಬಳಿಕ ಓರ್ವ ಪಿಎಸ್​ಐಗೆ ಕರೆ ಮಾಡಲಾಗಿದೆ. ಪಿಎಸ್​ಐಗೆ ಕರೆ ಮಾಡಿ ಕೆಲ ಮಾಹಿತಿಗಳನ್ನು ಆರೋಪಿಗಳು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆ ಅಧಿಕಾರಿ ಕುಟುಂಬದ ಜೊತೆ ವಿದೇಶಿ ಪ್ರವಾಸದಲ್ಲಿದ್ದರು. ಹೀಗಾಗಿ ಪ್ರವಾಸ ಮುಗಿಸಿಕೊಂಡು ಬಂದು ಹೇಳಿಕೆ ನೀಡ್ತೇನೆ ಎಂದಿದ್ದರಂತೆ. ಅದರಂತೆ ವಿದೇಶದಿಂದ ವಾಪಸ್ ಆದ ಬೆನ್ನಲ್ಲೇ, ಅವರು ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಪವಿತ್ರಗೌಡ ಇನ್​ಸ್ಟಾದಿಂದ Phone Number ಶೇರ್ ಆಗಿದ್ದೇಗೆ.. ಮೊದಲ ಮೆಸೇಜ್ ಏನಾಗಿತ್ತು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿಂದೆ ಓರ್ವ PSI ನೆರಳು..? ಏನಿದು ಶಾಕಿಂಗ್ ವಿಚಾರ..?

https://newsfirstlive.com/wp-content/uploads/2024/06/Vinay.jpg

Load More