newsfirstkannada.com

×

ರೇಣುಕಾಸ್ವಾಮಿ ಕೃತ್ಯಕ್ಕೆ ಶೆಡ್​ನ ಕೆಲಸಗಾರನೇ ಐ ವಿಟ್ನೆಸ್ : ಅಂದು ಹಲ್ಲೆಯಿಂದ ಶುರುವಾಗಿ ಸಾವಿನವರೆಗೆ ಏನೇನಾಯ್ತು?

Share :

Published September 10, 2024 at 10:45am

Update September 10, 2024 at 10:46am

    ರೇಣುಕಾಸ್ವಾಮಿ ಹತ್ಯೆಯ ಕೃತ್ಯಕ್ಕೆ ಶೆಡ್​ನ ಕೆಲಸಗಾರನೇ ಐ ವಿಟ್ನೆಸ್

    ರೇಣುಕಾಸ್ವಾಮಿ ಕರೆತಂದಲ್ಲಿಂದ ಕೊಲೆವರೆಗೆ ಏನೇನಾಯ್ತು ಗೊತ್ತಾ?

    ಅಂದು ಎಲ್ಲವನ್ನೂ ಕಣ್ಣಾರೆ ಕಂಡಿರೋ ಪಟ್ಟಣಗೆರೆ ಶೆಡ್​ನ ಕೆಲಸಗಾರ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಅಗೆದಷ್ಟು ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಪೊಲೀಸರು ಕಲೆ ಹಾಕಿರುವ ಒಂದೊಂದು ಸಾಕ್ಷ್ಯಗಳು ಕೂಡ ದರ್ಶನ್​ರ ಕಾನೂನು ಕುಣಿಕೆ ಬಿಗಿಯಾಗುತ್ತಲೇ ಹೋಗುತ್ತಿದೆ. ಪೊಲೀಸರು ಒಂದೇ ಒಂದು ಸೂಜಿಯ ಮೊನೆಯಷ್ಟು ಪ್ರಕರಣ ಆಚೀಚೆ ಹೋಗದಂತೆ ಖಡಕ್ಕಾಗಿ ನಿರ್ವಹಿಸಿದ್ದಾರೆ. ಅವರು ಕಲೆ ಹಾಕಿರುವ ಸಾಕ್ಷಿಗಳ ಹೇಳಿಕೆಗಳು ಈಗಾಗಲೇ ಅನೇಕರಿಂದ ಬಂದಿವೆ. ಆದ್ರೆ ಎಲ್ಲವನ್ನೂ ಕಣ್ಣಾರೆ ಕಂಡ ಪಟ್ಟಣಗೆರೆ ಶೆಡ್​ನ ಕೆಲಸಗಾರ ನೀಡಿರುವ ಸಾಕ್ಷ್ಯ ಕೇಳಿದ್ರೆ ಎಂಥವರ ಮೈ ಕೂಡ ಒಮ್ಮೆ ಬೆವರಿ ಹೋಗಬೇಕು, ಅಂತಹದೊಂದು ಕ್ರೌರ್ಯಕ್ಕೆ, ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದೆ ಪಟ್ಟಣಗೆರೆ ಶೆಡ್​.

ಶೆಡ್​ನಲ್ಲಿರುವ ಕೆಲಸಗಾರ ಹೇಳುವ ಪ್ರಕಾರ, ನಾನು ನನ್ನ ತಾಯಿ ಹಾಗೂ ಅಣ್ಣನ ಜೊತೆ ವಾಸವಾಗಿದ್ದೇನೆ, ಪಟ್ಟಣಗೆರೆ ಜಯಣ್ಣ ಶೆಡ್​ನಲ್ಲಿ ಜನವರಿ 2024ರಿಂದ ಕೆಲಸಕ್ಕೆ ಇದ್ದೇನೆ. ಶೆಡ್​ಗೆ ಬರುವ ಗಾಡಿಗಳನ್ನು ಒಂದೊಂದು ಕಡೆ ನಿಲ್ಲಿಸುವುದು ನನ್ನ ಕೆಲಸ. ಜೂನ್ 8ರಂದು ಮಧ್ಯಾಹ್ನ ಧನ್​ರಾಜ್, ನಂದೀಶ್​ ಶೆಡ್ ಬಳಿ ಕುಳಿತಿದ್ದರು. ಆಗ ನನಗೆ ವಿನಯ್ ಫೋನ್ ಮಾಡಿ ಪವನ್ ಕಡೆ ಹುಡುಗರು ಅಂತ ಹೇಳಿದ್ರು. ಒಬ್ಬನನ್ನು ಕಾರಿನಲ್ಲಿ ಕರೆದುಕೊಂಡು ಬರ್ತಾರೆ, ಅವರನ್ನು ಒಳಗೆ ಬಿಡು ಅಂದ್ರು.

ಇದಾದ 10 ರಿಂದ 15 ನಿಮಿಷದಲ್ಲಿ ಸಿಲ್ವರ್ ಕಲರ್ ಕಲರ್ ಇಟಿಯೋಸ್​ ಕಾರು ಬಂತು. ಸೆಕ್ಯೂರಿಟಿ ಕಾರನ್ನು ಒಳಗೆ ಬಿಟ್ಟ ಕಾರನಿಂದ ನಾಲ್ವರು ಕೆಳಗಿಳಿದ್ರು. ಬಳಿಕ ಕಾರಿನಲ್ಲಿ ಬಂದ ನಾಲ್ವರನ್ನು ಕರೆದುಕೊಂಡು ಮರದ ಬಳಿಗೆ ಹೋದರು.

ಪಟ್ಟಣಗೆರೆ ಶೆಡ್​ನೊಳಗೆ ಕಾರ್ ಹೋದ ಬಳಿಕ ಏನೇನಾಯ್ತು

ಮರದ ಕೆಳಗೆ ಕರೆದುಕೊಂಡು ಹೋದ ಕೂಡಲೇ ಅವರೆಲ್ಲಾ ಲಾಠಿ, ಮರದ ಕೊಂಬೆಗಳಿಂದ ಆತನ ಮೇಲೆ ಹಲ್ಲೆ ಮಾಡುತ್ತಿದ್ದರು. ನಂದೀಶ್ ಆತನನ್ನು ಎತ್ತಿ ಎತ್ತಿ ಎಸೆಯುತ್ತಿದ್ದ, ಧನ್​ರಾಜ್ ಎಲೆಕ್ಟ್ರಿಕ್ ಶಾಕ್ ಕೊಡ್ತಿದ್ದ. ನಾನು ಹತ್ತಿರ ಹೋಗಿ ಆತನನ್ನು ಯಾಕೆ ಹೀಗೆ ಹೊಡೆಯುತ್ತಿದ್ದಾರೆ ಎಂದು ಪವನ್​ನನ್ನು ಕೇಳಿದೆ. ಅದಕ್ಕೆ ಪವನ್, ಇವನು ಪವಿತ್ರಾ ಅಕ್ಕನಿಗೆ ಕೆಟ್ಟದಾಗಿ ಮೆಸೇಜ್ ಮಾಡುವುದು, ಫೋಟೋ ಕಳುಹಿಸುವುದು ಮಾಡುತ್ತಿದ್ದ ಎಂದ. ಅಷ್ಟು ಮಾತ್ರವಲ್ಲ ಈತನ ಹೆಸರು ರೇಣುಕಾಸ್ವಾಮಿ ಚಿತ್ರದುರ್ಗದವನು ಅಂತಲೂ ಹೇಳಿದ. ಬಳಿಕ ಅಲ್ಲಿದ್ದ ಎಲ್ಲರಿಗೂ ಪವನ್ ಊಟ ತಂದುಕೊಟ್ಟ. ಅವರೆಲ್ಲಾ ಊಟಕ್ಕೆ ಹೋದರು ವಿನಯ್​​​​ ನನಗೆ ಫೋನ್ ಮಾಡಿ ಶೆಡ್​​ಗೆ ಕರೆತಂದಿರುವ ವ್ಯಕ್ತಿ ಫೋಟೋ ಕಳುಹಿಸು ಅಂದ್ರು. ಅಂಗಾತ ಮಲಗಿದ್ದ ಆತನ ಫೋಟೋ ಹಾಗೂ ವಿಡಿಯೋ ಮಾಡಿ ಕಳುಹಿಸಿದೆ. ಇದೇ ಫೋಟೋವನ್ನು ನನ್ನ ಸ್ನೇಹಿತರಾದ ರಾಜು ಮೊಬೈಲ್​ಗೂ ಸಹ ಕಳುಹಿಸಿದ್ದೆ.

ಕೆರಳಿ ಕೆಂಡವಾಗಿ ಶೆಡ್​ಗೆ ನುಗ್ಗಿದ್ದ ದರ್ಶನ್​ ಹೇಗೆಲ್ಲಾ ಹಲ್ಲೆ ಮಾಡಿದ್ರು‘?

ಬಳಿಕ ಫೋನ್ ಮಾಡಿದ್ದ ವಿನಯ್, ನಾನು, ದರ್ಶನ್ ಅಲ್ಲಿಗೆ ಬರ್ತಾ ಇದ್ದೀವಿ ಅಂದ್ರು. ಸಂಜೆ 4.30ರ ವೇಳೆ ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ದರ್ಶನ್, ಪವಿತ್ರಾಗೌಡ ಬಂದ್ರು ಕಾರಿನಿಂದ ಇಳಿದು ಬರುತ್ತಲೇ ದರ್ಶನ್ ರೇಣುಕಾಸ್ವಾಮಿಗೆ ಕಾಲಿನಿಂದ ಒದ್ದರು. ಬಳಿಕ ಪವಿತ್ರಗೌಡ ಬಂದು ಆತನಿಗೆ ಚಪ್ಪಲಿಯಿಂದ ಹೊಡೆದ್ರು. ಪವಿತ್ರ ಕೈಯಿಂದ ಚಪ್ಪಲಿ ತೆಗೆದುಕೊಂಡು ದರ್ಶನ್ ಕೂಡ ಆತನಿಗೆ ಹೊಡೆದ್ರು. ನನ್ನ ಹೆಂಡತಿ, ಮೆಸೇಜ್ ಮಾಡ್ತಿಯಾ, ಗೋವಾದಲ್ಲಿ ರೂಂ ಮಾಡ್ತೀಯಾ ಅಂತ ಆತನ ಎದೆಗೆ ಒದ್ರು, ಕೈಗಳಿಂದ ಗುದ್ದಿದ್ರು. ನಾಗರಾಜ್ ಹಗ್ಗದಿಂದ ಆತನ ಬೆನ್ನಿಗೆ ಮೇಲೆ 10-20 ಸಾರಿ ಬಾರಿಸಿದ.

ಇದನ್ನೂ ಓದಿ: ಚಿಕ್ಕಣ್ಣ ಮಾತ್ರವಲ್ಲ ಮತ್ತೊಬ್ಬ ನಟನಿಂದಲೂ ಸಾಕ್ಷಿ ಹೇಳಿಕೆ ಪಡೆದಿರುವ ಪೊಲೀಸರು; ಯಾರವರು?

ಇಷ್ಟಕ್ಕೆ ನಿಲ್ಲಲಿಲ್ಲ ದರ್ಶನ್ ಡ್ರೈವರ್ ಲಕ್ಷ್ಮಣ್ ಕೂಡ ಆತನ ಹೊಟ್ಟೆಗೆ ಗುದ್ದಿದ. ಇದೇ ವೇಳೆ ವಿನಯ್, ಪ್ರದೂಷ್ ಕೂಡ ಕಾಲಿನಿಂದ ಆತನಿಗೆ ಜೋರಾಗಿ ಒದ್ರು. ನಂತರ ದರ್ಶನ್ ಆತನ ಎದೆ ಭಾಗವನ್ನು ಕಾಲಿನಿಂದ ತುಳಿಯುತ್ತಿದ್ದರು. ಪವಿತ್ರಗೌಡಳನ್ನ ಕಾರಲ್ಲಿ ಕೂರಿಸಿ, ಪವನ್​ನಿಂದ ಆತನನ ಪ್ಯಾಂಟ್ ಬಿಚ್ಚಿಸಿದ್ರು, ಆತ ಕಳುಹಿಸಿದ್ದ ಮೆಸೇಜ್‌ಗಳನ್ನು ಓದಿಸುತ್ತಾ ಆತನ ಖಾಸಗಿ ಭಾಗಕ್ಕೆ ಹೊಡೆದ್ರು ಕುತ್ತಿಗೆಗೆ ಜೋರಾಗಿ ಒದ್ದಿದ್ದರಿಂದ ಆತನ ಕುತ್ತಿಗೆ ಒಂದು ಕಡೆಗೆ ವಾಲಿಬಿಟ್ಟಿತ್ತು.

ಇದೆಲ್ಲಾ ಆದ ಬಳಿಕ ನನಗೆ ಟೀ ತೆಗೆದುಕೊಂಡು ಬಾ ಅಂದ್ರು. ನಾನು ಎಲ್ಲರಿಗೂ ಟೀ ತಂದು ಕೊಟ್ಟೆ. ಬಳಿಕ ವಿನಯ್ ಪವಿತ್ರಾಗೌಡರನ್ನ ಮನೆಗೆ ಬಿಟ್ಟು ಬಾ ಅಂದ್ರು ನಾನು ಹೊರಟೆ, ನಾನು ವಾಪಸ್ ಬಂದಾಗಲೂ ಕೂಡ ಎಲ್ಲರೂ ರೇಣಕಾಸ್ವಾಮಿಯ ಮೇಲೆ ಹಲ್ಲೆ ಮಾಡುತ್ತಿದ್ದರು. ಆಗ ದರ್ಶನ್ ಕಾಲಿನಿಂದ ತುಳಿಯುತ್ತಿದ್ದರು. ರಾಘವೇಂದ್ರ ಆತನಿಗೆ ನೀರು ಕುಡಿಸ್ತಿದ್ದ. ಆಗ ವಿನಯ್ ಗೇಟ್ ಹತ್ತಿರ ಹೋಗು, ಯಾರನ್ನೂ ಗೇಟ್ ಬಳಿ ನಿಲ್ಲಿಸಬೇಡ ಎಂದರು

ಇದನ್ನೂ ಓದಿ: ಪೊಲೀಸರ ಚಾರ್ಜ್​ಶೀಟ್​ನಲ್ಲಿ ಚಿಕ್ಕಣ್ಣನ ಹೇಳಿಕೆಯೂ ಉಲ್ಲೇಖ; ಅಂದು ಪವನ್ ಬಂದು ದರ್ಶನ್ ಕಿವಿಯಲ್ಲಿ ಹೇಳಿದ್ದು ಏನು..?

ಬಳಿಕ ಆತನನ್ನು ಪವನ್ ಹಾಗೂ ನಂದೀಶ್ ಸೆಕ್ಯೂರಿಟಿ ರೂಂನಲ್ಲಿ ಮಲಗಿಸಿದ್ದರು. ಆತನಿಗೆ ಕಾನ್ಸಿಯಸ್ ಇಲ್ಲ, ಬಾಸ್ ಹೊಡೆದ ಜಾಗದಲ್ಲಿ ರಕ್ತ ಬರ್ತಿದೆ ಅಂತ ರಘು ಹೇಳ್ತಿದ್ದ. ನಾನು ಹೊರಗೆ ಬಂದು ಶೆಡ್ ಮಾಲೀಕ ಕಿಶೋರ್​​ಗೆ ನಡೆದಿದ್ದೆಲ್ಲವನ್ನೂ ತಿಳಿಸಿದೆ.ಆಗ ದೀಪಕ್ ಫೋನ್ ಮಾಡಿ ಎಲ್ಲಿದ್ದೀಯ ಅಂದ್ರು. ಮಲೆಮಹದೇಶ್ವರ ಬೆಟ್ಟಕ್ಕೆ ಹೋಗ್ತಿದ್ದೀನಿ ಎಂದೆ, ಆಗ ಆತ ಫೋನ್ ಕಟ್ ಮಾಡಿದ ಎಂದು ಅಂದು ನಡೆದ ಕರಾಳ ಅಧ್ಯಾಯದ ಒಂದೊಂದು ಪುಟವನ್ನು ಪೊಲೀಸರ ಎದುರು ತೆರೆದಿಟ್ಟಿದ್ದಾನೆ. ಅಂದು ಫೋಟೋ ತೆಗೆದ ಮೊಬೈಲ್​ನ್ನು ಕೂಡ ಪೊಲೀಸರಿಗೆ ನೀಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೃತ್ಯಕ್ಕೆ ಶೆಡ್​ನ ಕೆಲಸಗಾರನೇ ಐ ವಿಟ್ನೆಸ್ : ಅಂದು ಹಲ್ಲೆಯಿಂದ ಶುರುವಾಗಿ ಸಾವಿನವರೆಗೆ ಏನೇನಾಯ್ತು?

https://newsfirstlive.com/wp-content/uploads/2024/09/Darshan-case-1.jpg

Load More