newsfirstkannada.com

ಕಾಂಗ್ರೆಸ್​ ಕಾರ್ಪೊರೇಟ್​ ಆಗಬೇಕಿದ್ದ ದರ್ಶನ್​ ಆಪ್ತ ನಾಗ.. ಕೊಲೆ ಕೇಸಲ್ಲಿ ಜೈಲು ಸೇರಿದ!

Share :

Published June 13, 2024 at 10:34pm

    ಸ್ನೇಹಿತರ ಮೂಲಕ ನಟ ದರ್ಶನ್ ಆಪ್ತವಲಯಕ್ಕೆ ನಾಗನ ಎಂಟ್ರಿ

    ಕಳೆದ 15 ವರ್ಷದಿಂದ ದರ್ಶನ್ ಜೊತೆಯಲ್ಲೇ ಇರುವ ನಾಗರಾಜ್!

    ದರ್ಶನ್ ತೋಟದ ಮನೆ ನಿರ್ವಹಣೆಯ ಹೊಣೆ ಹೊತ್ತಿದ್ದ ನಾಗರಾಜ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದರ ನಡುವೆ, ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ಕೆಲ ಆರೋಪಿಗಳ ಕಥೆಯನ್ನು ಕೇಳ್ತಿದ್ರೆ, ನಿಜಕ್ಕೂ ಶಾಕ್​ ಆಗುತ್ತೆ.. ನೆಚ್ಚಿನ ನಟನಿಗೆ ಸಹಾಯ ಮಾಡಲು ಹೋಗಿ ತಗಲಾಕಿಕೊಂಡಿರುವ ಬಹುತೇಕ ಆರೋಪಿಗಳು ದರ್ಶನ್​ ಅವರ ಅಭಿಮಾನಿಗಳೇ.. ಹೀಗಾಗಿ ತನ್ನ ಮನದರಸಿಗಾಗಿ ನಟ ದರ್ಶನ್​ ಅಭಿಮಾನಿಗಳನ್ನು ದುರ್ಬಳಕೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ.

ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​… ಅಭಿಮಾನಿಗಳ ಪಾಲಿಗೆ ಈತನೇ ‘ಒಡೆಯ’.. ಸ್ಯಾಂಡಲ್​ವುಡ್​​ ಎಂಬ ‘ಬೃಂದಾವನ’ದ ‘ಯಜಮಾನ’ನನ್ನು ಆತನ ಅಭಿಮಾನಿಗಳು ‘ಭಗವಾನ್​’ ಎಂದೇ ಆರಾಧಿಸುತ್ತಾರೆ. ಮೆಜೆಸ್ಟಿಕ್​ನ ಕರಿಯ ಯಾವುದೇ ಕಾಂಟ್ರವರ್ಸಿಯಲ್ಲಿ ಸಿಲುಕಿದ್ರೂ.. ಅಭಿಮಾನಿಗಳು ಮಾತ್ರ ನೀನೇ ನಮ್ಮ ಪ್ರಿನ್ಸ್​.. ನಿಮ್ಮ ಪರ ನಿಲ್ಲುವುದೇ ನಮ್ಮ ‘ಬಾಸ್​’ ಎಂದು ತಲೆಯ ಮೇಲೆ ಹೊತ್ತು ಚಕ್ರವರ್ತಿಯಂತೆ ಮೆರೆಸುತ್ತಿದ್ದರು.. ದರ್ಶನ್​ ಕೂಡ ಅಭಿಮಾನಿಗಳೇ ನನ್ನ ಸೆಲೆಬ್ರೆಟಿಗಳು ಎಂದು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ರು. ಆದ್ರೆ ಹೇಳೋದು ವೇದಾಂತ.. ತಿನ್ನೋದು ಬದನೆಕಾಯಿ ಎಂಬ ಗಾಧೆ ಮಾತಿನಂತೆ.. ಸುಯೋಧನ ತನ್ನ ಮನದರಿಸಿ ಪವಿತ್ರಾಗೌಡಳ ಮಾನ ಕಾಪಾಡಲು ಅಭಿಮಾನಿಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದಾನೆ. ತಮ್ಮ ಬಾಸ್​ ಮಾತನ್ನು ಪಾಲನೆ ಮಾಡೋದೇ ನಮ್ಮ ಧರ್ಮ ಎಂದು ಮಾಡಬಾರದ ಕೆಲ್ಸ ಮಾಡಿ, ಇದೀಗ ಪೊಲೀಸರ ಮುಂದೆ ಪಶ್ಚಾತಾಪದ ಮಾತುಗಳನ್ನಾಡ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ತಗಲಾಕೊಂಡಿರೋದು ಆರೋಪಿಗಳಲ್ಲಿ ಬಹುತೇಕರು ದರ್ಶನ್​ ಅಭಿಮಾನಿಗಳೇ ಅನ್ನೋದು ಆಘಾತಕಾರಿ ವಿಷ್ಯ.. ಅವರ ಹಿನ್ನೆಲೆಯನ್ನು ಕೇಳ್ತಿದ್ರೆ ಅಯ್ಯೋ ಪಾಪ ಅನ್ಸುತ್ತೆ.

ಕಾರ್ಪೋರೇಟರ್ ಕನಸು ಹೊತ್ತವನು ಇದೀಗ ಕಂಬಿ ಹಿಂದೆ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿರುವ 11ನೇ ಆರೋಪಿ ಮೈಸೂರು ನಿವಾಸಿ ನಾಗರಾಜ್​.. ನಟ ದರ್ಶನ್​ನ ಅಪ್ಪಟ ಅಭಿಮಾನಿಯಂತೆ. ನಾಗರಾಜ್ ಮೂಲತಃ ಮೈಸೂರು ನಗರದ ಟಿ.ಕೆ.ಲೇಔಟ್​ನ ನಿವಾಸಿ. ಹಿಂದೆ ಪೆಟ್ರೋಲ್​ ಬಂಕ್​ನಲ್ಲಿ ಕೆಲ್ಸ ಮಾಡ್ತಿದ್ದ ಈತ, ಬಳಿಕ ಸ್ನೇಹಿತರ ಮೂಲಕ ನಟ ದರ್ಶನ್ ಆಪ್ತವಲಯಕ್ಕೆ ಎಂಟ್ರಿಕೊಟ್ಟಿದ್ದ.. ಕಳೆದ 15 ವರ್ಷದಿಂದ ದರ್ಶನ್ ಜೊತೆಯಲ್ಲೇ ಇದ್ನಂತೆ. ಮೈಸೂರು ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ದರ್ಶನ್ ತೋಟದ ಮನೆ ನಿರ್ವಹಣೆಯ ಹೊಣೆ ಹೊತ್ತಿದ್ದ ಈ ನಾಗರಾಜ್ ಹೊತ್ತಿದ್ದ.. ಅಷ್ಟೇ ಅಲ್ಲ ದರ್ಶನ್ ಅಭಿಮಾನಿ ಸಂಘಗಳಿಗೆ ಸಂಪರ್ಕ ಸೇತುವೆಯಾಗಿದ್ನಂತೆ.. ದರ್ಶನ್​ ನಂಬಿಕೆ ಗಳಿಸಿದ್ದ ಕಾರಣ ನಾಗರಾಜ್‌ಗಾಗಿ ಮೈಸೂರಿನಲ್ಲಿ ಬಾರ್ ಇಟ್ಟುಕೊಟ್ಟಿದ್ರಂತೆ ನಟ ದರ್ಶನ್.. ಆದ್ರೆ ವ್ಯವಹಾರ ಕೈ ಹಿಡಿಯದ ಹಿನ್ನೆಲೆ ಮತ್ತೆ ದರ್ಶನ್ ಜೊತೆಯಲ್ಲೇ ನಾಗರಾಜ್​ ಸುತ್ತಾಡಿಕೊಂಡಿದ್ದ. ಇತ್ತೀಚೆಗೆ ಕಾಂಗ್ರೆಸ್​ ಪಕ್ಷದಲ್ಲಿ ಸಖತ್​ ಸಕ್ರೀಯನಾಗಿದ್ದ ನಾಗರಾಜ್​, ರಾಜ್ಯ ಕುರುಬರ ಸಂಘಕ್ಕೆ ಮೈಸೂರಿನಿಂದ ಸ್ಪರ್ಧಿಸಿ ನಿರ್ದೇಶಕನಾಗಿದ್ದ. ಹಾಗೂ ಮಹಾನಗರ ಪಾಲಿಕೆ 21ನೇ ವಾರ್ಡ್‌ನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡು, ದರ್ಶನ್ ಮೂಲಕವೇ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿ ಇದ್ನಂತೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆಸಿಕೊಂಡಿದ್ದೇ ಈ ನಾಗರಾಜ್.. ಹೀಗಾಗಿ ದರ್ಶನ್​ಗೆ ಸಹಾಯ ಮಾಡಲು ಹೋಗಿ ಕಂಬಿ ಹಿಂದೆ ಲಾಕ್​ ಆಗಿದ್ದಾನೆ.

ಇದನ್ನೂ ಓದಿ: ಪೊಲೀಸ್ರ ಮುಂದೆ ಸ್ಫೋಟಕ ಹೇಳಿಕೆ ಕೊಟ್ಟ ನಟ ದರ್ಶನ್​​.. ಅದೊಂದೇ ಉತ್ತರ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಕಾರ್ಪೊರೇಟ್​ ಆಗಬೇಕಿದ್ದ ದರ್ಶನ್​ ಆಪ್ತ ನಾಗ.. ಕೊಲೆ ಕೇಸಲ್ಲಿ ಜೈಲು ಸೇರಿದ!

https://newsfirstlive.com/wp-content/uploads/2024/06/DARSHAN_NAGARAJ_RACHAYYA.jpg

Load More