newsfirstkannada.com

ದರ್ಶನ್ ಅಭಿಮಾನಿ ಅಂತ ರೌಡಿಸಂ.. A4 ರಘು ಪತ್ನಿಯು ಐನಾತಿ ಕಳ್ಳಿ; ಪತಿ-ಪತ್ನಿ ಕಳ್ಳಾಟ ಹೇಗಿತ್ತು ಗೊತ್ತಾ?

Share :

Published June 24, 2024 at 4:35pm

  13 ವರ್ಷಗಳ ಹಿಂದೆ ಸಹನಾ ಜತೆ ಲವ್ ಮ್ಯಾರೇಜ್ ಆಗಿದ್ದ ಆರೋಪಿ ರಾಘು

  ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷನಾಗಿದ್ದ ರಾಘವೇಂದ್ರ

  ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕಿಡ್ನ್ಯಾಪ್​ ಪ್ಲಾನ್ ಮಾಡಿದ್ದೇ ಈತ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ದರ್ಶನ್ ಅಭಿಮಾನಿ ಅಂತ ರೌಡಿಸಂ ಮಾಡುತ್ತಿದ್ದ ರಘು ಹಾಗೂ ಪತ್ನಿ ಸಹನಾ ಮೇಲೆ ಆರೋಪವೊಂದು ಕೇಳಿ ಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ A4 ರಘು ಹಾಗೂ ಪತ್ನಿ ಸಹನಾ ಮೇಲೆ ಕಳ್ಳತನದ ಆರೋಪ ಕೇಳಿ ಬಂದಿದೆ. ಆರೋಪಿ ರಘು @ರಾಘವೇಂದ್ರ ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷನಾಗಿದ್ದ.

ಯಾರು ಈ ರಾಘವೇಂದ್ರ?

ರಾಘವೇಂದ್ರ ಚಿತ್ರದುರ್ಗದ ಕೋಳಿ ಬರುಜನಹಟ್ಟಿ ನಿವಾಸಿ. ಇದೇ ರಾಘವೇಂದ್ರ ರೇಣುಕಾಸ್ವಾಮಿ ಕೊಲೆ ಕೇಸ್​ನ 4ನೇ ಆರೋಪಿಯಾಗಿದ್ದಾನೆ. ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷನಾಗಿದ್ದಾನೆ. ನಾನು ದರ್ಶನ್ ಅಭಿಮಾನಿ ಅಂತ ರೌಡಿಸಂ ಮಾಡ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಯುವಕರ ಗ್ಯಾಂಗ್ ಸೇರಿಸಿಕೊಂಡು ರೌಡಿಸಂ ಮಾಡುತ್ತಿದ್ದನಂತೆ.ತಮ್ಮ ವಿರುದ್ಧ ದೂರು ಕೊಟ್ಟವರ ಮನೆಗೆ ಗ್ಯಾಂಗ್ ಜೊತೆ ಹೋಗಿ ಗಲಾಟೆ ಮಾಡುತ್ತಿದ್ದನಂತೆ. ಏರಿಯಾದಲ್ಲಿ ಯಾರೂ ರಘು ವಿರುದ್ಧ ಕಮಕ್ ಕಿಮಕ್ ಅಂತ ಇರಲಿಲ್ಲವಂತೆ. ಕಳೆದ 15 ವರ್ಷಗಳಿಂದ ನಟ ದರ್ಶನ್​ಗೆ ರಘು ಅಭಿಮಾನಿಯಾಗಿದ್ದನಂತೆ. ಈ ರಘುನೇ ರೇಣುಕಾಸ್ವಾಮಿ ಕಿಡ್ನ್ಯಾಪ್​ನ ಪ್ಲಾನ್ ಮಾಡಿದ್ದ. ವೃತ್ತಿಯಲ್ಲಿ ಕಾರು ಚಾಲಕ, ಆದ್ರೆ ರಘು ಬಳಿ ಸ್ವಂತ ಕಾರು ಇರಲಿಲ್ಲ. ಬಾಡಿಗೆ ಕಾರಿಗೆ ಚಾಲಕನಾಗಿ ಬಾಡಿ ಮನೆ ಮಾಡಿಕೊಂಡಿದ್ದನಂತೆ. 13 ವರ್ಷಗಳ ಹಿಂದೆ ಸಹನಾ ಜೊತೆ ರಘು ಲವ್ ಮ್ಯಾರೇಜ್ ಮಾಡಿಕೊಂಡಿದ್ದ. ಅಲ್ಲಿಂದ ರಘು ಈವರೆಗೆ 12 ಬಾಡಿಗೆ ಮನೆಗಳನ್ನ ಬದಲಿಸಿದ್ದಾನೆ. ಕುಡಿದು ಬಂದು ಗಲಾಟೆ ಮಾಡ್ತಾನೆ ಅಂತ ಮನೆ ಬಿಡಿಸ್ತಿದ್ದರಂತೆ. ದರ್ಶನ್ ಚಿತ್ರದುರ್ಗ ಮಾರ್ಗದಲ್ಲಿ ತೆರಳಿದ್ರೆ ರಘು ಭೇಟಿ ಆಗುತ್ತಿದ್ದಂತೆ.

ಇದನ್ನೂ ಓದಿ: ಏನ್ ಟೈಗರ್ ಅಂದ್ರು.. ಜೈಲಿನಲ್ಲಿ ದರ್ಶನ್ ನೋಡಿ ಶಾಕ್ ಆದ ವಿನೋದ್ ಪ್ರಭಾಕರ್; ಹೇಳಿದ್ದೇನು?

ರಘು ಪತ್ನಿಯ ಕಥೆಯೇನು?
ರಾಘವೇಂದ್ರನ ಪತ್ನಿ ಸಹನಾ ಮೇಲೂ ಕಳ್ಳತನದ ಆರೋಪ ಇದೆ. ಅನ್ನ ಹಾಕಿದ ಮನೆಗೇ ಕನ್ನ ಹಾಕಿದ್ದಳಂತೆ ರಘು ಪತ್ನಿ ಸಹನಾ. ಜ್ಯೂಸ್​ನಲ್ಲಿ ಮತ್ತು ಬರೋ ಔಷಧಿ ಬೆರೆಸಿ 4 ಚಿನ್ನದ ಬಳೆ, 2 ಚಿನ್ನದ ಚೈನ್ ಕದ್ದಿದ್ದಾಳೆ ಅಂತ ಮನೆ ಮಾಲಕಿ ಆರೋಪಿಸಿದ್ದಾರೆ. ಈ ಬಗ್ಗೆ 2016ರಲ್ಲೇ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ FIR ದಾಖಲಾಗಿದೆ. ಚಿನ್ನ ಕದ್ದ ದುಡ್ಡಲ್ಲಿ ಬೆಂಗಳೂರಿಗೆ ಹೋಗಿ ಶೋಕಿ ಮಾಡಿದ್ದರಂತೆ. ಪತಿ-ಪತ್ನಿಯ ವಿರುದ್ಧ ಎದುರು ಮನೆಯ ಚಂದ್ರಮ್ಮ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಅಭಿಮಾನಿ ಅಂತ ರೌಡಿಸಂ.. A4 ರಘು ಪತ್ನಿಯು ಐನಾತಿ ಕಳ್ಳಿ; ಪತಿ-ಪತ್ನಿ ಕಳ್ಳಾಟ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2024/06/raghu-1.jpg

Load More