ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು
ದರ್ಶನ್ ರಿಲೀಸ್ಗಾಗಿ ಉರುಳು ಸೇವೆ ಮಾಡಲು ಹೋಗಿ ಸಿಕ್ಕಿಬಿದ್ರು!
ಪೊಲೀಸ್ರ ಅವಕಾಶ ನೀಡದ ಬಗ್ಗೆ ನಟ ದರ್ಶನ್ ಫ್ಯಾನ್ಸ್ ಆಕ್ರೋಶ
ಬೆಂಗಳೂರು: ನಟ ದರ್ಶನ್ ರಿಲೀಸ್ಗಾಗಿ ಪರಪ್ಪನ ಅಗ್ರಹಾರ ಜೈಲು ಮುಂದೆ 101 ತೆಂಗಿನ ಕಾಯಿ ಹೊಡೆದು ಉರುಳು ಸೇವೆ ಮಾಡಲು ಮುಂದಾಗಿದ್ದ ಅಭಿಮಾನಿಗಳನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.
ಗುರುವಾರ ಮಧ್ಯಾಹ್ನ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್ ಎಂಬಾತ ದರ್ಶನ್ ಬಿಡುಗಡೆಗೆ ಆಗ್ರಹಿಸಿ ಜೈಲು ಮುಂದೆ ಉರುಳು ಸೇವೆ ಮಾಡಲು ಬಂದಿದ್ದ. ಆಗ ಜೈಲು ಮುಂದೆ ಇದ್ದ ಪೊಲೀಸ್ರು ಆತನನ್ನು ಎಳೆದೊಯ್ದರು. ಈತನೊಂದಿಗೆ ಬಂದಿದ್ದ ಎಲ್ಲರನ್ನು ವಶಕ್ಕೆ ಪಡೆದರು.
ಇನ್ನು, ಪೊಲೀಸ್ ವಶಕ್ಕೆ ಪಡೆದು ಬಿಟ್ಟ ನಂತರ ನ್ಯೂಸ್ಫಸ್ಟ್ ಜತೆ ಮಾತಾಡಿದ ರವಿಕುಮಾರ್ ಅವರು, ನಟ ದರ್ಶನ್ ಕೊಲೆ ಮಾಡೇ ಇಲ್ಲ. ಅವರು ಬೆಳೆಯುತ್ತಿದ್ದಾರೆ ಎಂದು ಕುತಂತ್ರ ಮಾಡಿ ಒಳಗೆ ಹಾಕಿದ್ದಾರೆ. ದರ್ಶನ್ ಲಕ್ಷಾಂತರ ರೂಪಾಯಿ ಬಡವರಿಗೆ ಕೊಟ್ಟಿದ್ದಾರೆ. ಸಮಾಜ ಸೇವೆ ಮಾಡಿದ್ದಾರೆ, ಹಾಗಾಗಿ ಕೂಡಲೇ ರಿಲೀಸ್ ಮಾಡಬೇಕು ಎಂದು ಒತ್ತಾಯಿಸಿದ್ರು.
ಈ ಹಿಂದೆಯೇ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್ ಎಂಬುವರು ನಾಳೆ ದರ್ಶನ್ ಅವರನ್ನು ರಿಲೀಸ್ ಮಾಡಬೇಕು ಎಂದು ಉರುಳು ಸೇವೆ ಮಾಡುತ್ತೇವೆ. 101 ತೆಂಗಿನ ಕಾಯಿ ಹೊಡೆದು ಪರಪ್ಪನ ಅಗ್ರಹಾರದ ಜೈಲು ಮುಂದೆಯೇ ಉರುಳು ಸೇವೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಡಿ ಬಾಸ್ ಅಭಿಮಾನಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದ.
ಇದನ್ನೂ ಓದಿ: ದರ್ಶನ್ ರಿಲೀಸ್ಗಾಗಿ ಜೈಲು ಮುಂದೆ ಉರುಳು ಸೇವೆ ಮಾಡಲು ಬಂದ ಫ್ಯಾನ್ಸ್; ಪೊಲೀಸ್ರು ಮಾಡಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ