newsfirstkannada.com

ಸ್ಕೂಲ್ ಫೀಸ್ ಕಟ್ಟಲು ಆಗದೇ ಮಕ್ಕಳ ಶಾಲೆ ಬಿಡಿಸಿದ ತಾಯಿ.. ದರ್ಶನ್​ ಗ್ಯಾಂಗ್​ ಮಾಡಿದ ತಪ್ಪಿಗೆ ಮಕ್ಕಳಿಗೂ ಶಿಕ್ಷೆ

Share :

Published June 26, 2024 at 10:41am

Update June 26, 2024 at 10:55am

    ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ

    ಮನೆಯಲ್ಲಿ ದುಡಿಯೋರೇ ಇಲ್ಲ, ಮಕ್ಕಳ ಶಾಲೆಗೆ ಹೆಂಗೆ ಕಳುಹಿಸಲಿ

    ಬಾಡಿಗೆ ಅಂತ ನನ್ನ ಗಂಡ ಹೋಗಿದ್ದು, ಈಗ ಜೈಲು ಪಾಲಾಗಿದ್ದಾರೆ

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್ ಅಂಡ್ ಗ್ಯಾಂಗ್​ನ 8ನೇ ಆರೋಪಿ ರವಿ ಜೈಲು ಪಾಲಾಗಿದ್ದಾನೆ. ಸದ್ಯ ಇವರ ಮನೆಯ ಸ್ಥಿತಿ ಹೇಳತೀರದಂತೆ ಆಗಿದೆ. ರವಿಯ ಹೆಂಡತಿ ಕವಿತಾ ಅವರು ಶಾಲೆಯ ಫೀಸು ಕಟ್ಟಲಾಗದೇ ಮಕ್ಕಳ ಶಾಲೆ ಬಿಡಿಸಿದ್ದು ಮನೆಯ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿದ್ದು ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಉಲ್ಟಾ ಹೊಡೆದ ಆಪ್ತ.. ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​..!

ಈ ಸಂಬಂಧ ಆರೋಪಿ ರವಿ ಪತ್ನಿ ಕವಿತಾ ಅವರು ನ್ಯೂಸ್​ಫಸ್ಟ್​ ಜೊತೆ ಮಾತನಾಡಿ.. ಗಂಡ ಇದ್ದಾಗ ಎಲ್ಲವು ಚೆನ್ನಾಗಿತ್ತು. ಈಗ ಕಷ್ಟ ಆಗಿದೆ. ಮನೆಯಲ್ಲಿ ದುಡಿಯೋರೆ ಇಲ್ಲವೆಂದರೆ ಶಾಲೆಗೆ ದುಡ್ಡು ಕಟ್ಟುವುದು ಹೇಗೆ? ದುಡ್ಡಿಲ್ಲದ ಕಾರಣ ಮಕ್ಕಳ ಶಾಲೆ ಬಿಡಿಸಿದ್ದೇನೆ. ಈಗ ಮಕ್ಕಳು ಮನೆಯಲ್ಲೇ ಇರುತ್ತಾರೆ. ಒಬ್ಬ ಮಗ 3ನೇ ತರಗತಿಯಲ್ಲಿ ಓದುತ್ತಿದ್ದಾನೆ, ಸಣ್ಣವನು ಎಲ್​​ಕೆಜಿಗೆ ಹೋಗುತ್ತಿದ್ದ. ಸಂಘ, ಗಾಡಿ ಇಎಂಐ ಸೇರಿ ಇತರೆ ಸಾಲಗಳಿಗೆ ಹಣ ಇಲ್ಲ. ಜೊತೆಗೆ ಮಕ್ಕಳ ಫೀಸುಗೆ ಕೂಡ ನಮ್ಮಲ್ಲಿ ಹಣವಿಲ್ಲದ್ದಕ್ಕೆ ಶಾಲೆ ಬಿಡಿಸಿದ್ದೇನೆ ಎಂದು ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ: ತ್ರಿಶಾ ಜೊತೆ ಡೇಟಿಂಗ್ ಮಾಡ್ತಿದ್ದಾರಾ ದಳಪತಿ ವಿಜಯ್.. ಕುತೂಹಲ ಮೂಡಿಸಿದ ಇಬ್ಬರ ಫೋಟೋಸ್..!

ಮಕ್ಕಳನ್ನ ಹಾಗೇ ಓದಿಸಬೇಕು, ಹೀಗೆ ಓದಿಸಬೇಕು ಎಂದು ಇಬ್ಬರು ಸಾಕಷ್ಟು ಕನಸು ಕಂಡಿದ್ದೇವು. ಮಕ್ಕಳ ಓದಿನ ಬಗ್ಗೆ ಗಂಡ, ನಾನು ಮಾತಾಡಿಕೊಳ್ಳುತ್ತಿದ್ದೇವು. ಈ ವರ್ಷ ಶಾಲೆಗೆ ಕಳುಹಿಸುವುದಕ್ಕೆ ಆಗುತ್ತಿಲ್ಲ ಎಂದು ಬೇಜಾರು ಆಗುತ್ತಿದೆ. ನಮಗೆ ಮುಂದಿನ ಭವಿಷ್ಯ ಅಂದರೆ ಮಕ್ಕಳೇ. ಮಕ್ಕಳು ಶಾಲೆಗೆ ಹೋದರೆ ಟೀಚರ್ ಯಾವ ರೀತಿ ನೋಡುತ್ತಾರೆ ಎನ್ನುವ ಪರಿಸ್ಥಿತಿ ಬಂದಿದೆ. ನಾವು ಏನೂ ತಪ್ಪು ಮಾಡಿಲ್ಲ. ಆದರೂ ಇಂತಹ ಅಪವಾದ ಇದೆ. ಶಾಲೆಯವರು ಫೋನ್ ಮಾಡಿ ಯಾಕೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಕೇಳುತ್ತಿದ್ದಾರೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ.. 10 ವರ್ಷದ ಬಳಿಕ ಲೋಕಸಭೆಗೆ ಅಧಿಕೃತ ವಿಪಕ್ಷ ನಾಯಕ!

ನಮ್ಮ ಮನೆಯವರು ಬಾಡಿಗೆಗೆ ಅಂತ ಹೋಗಿದ್ದಾರೆ. ಆದರೆ ಅವರನ್ನ ಬಿಟ್ಟು ಕಳುಹಿಸಿದರೆ ಆಯಿತಲ್ಲ. ಅವರನ್ನ ಯಾಕೆ ಹಿಡಿದುಕೊಳ್ಳಬೇಕು. ನನ್ನ ಗಂಡನಿಗೆ ದುಡ್ಡು ಕೊಡುತ್ತಿವಿ. ಅಪ್ರೂವಲ್ ಆಗು ಎಂದೆಲ್ಲ ಕೇಳಿದ್ದಾರೆ. ಆದರೆ ನಮ್ಮ ಮನೆಯವರು ಅಂತವರಲ್ಲ. ಹೆಂಡತಿ, ಮಕ್ಕಳಿದ್ದಾರೆ ಎಂದು ಅವರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೂಲ್ ಫೀಸ್ ಕಟ್ಟಲು ಆಗದೇ ಮಕ್ಕಳ ಶಾಲೆ ಬಿಡಿಸಿದ ತಾಯಿ.. ದರ್ಶನ್​ ಗ್ಯಾಂಗ್​ ಮಾಡಿದ ತಪ್ಪಿಗೆ ಮಕ್ಕಳಿಗೂ ಶಿಕ್ಷೆ

https://newsfirstlive.com/wp-content/uploads/2024/06/DARSHAN-49.jpg

Load More