newsfirstkannada.com

ಕಪ್ಪೆ ಕಾರ್ತಿಕ್​​ನನ್ನ ಪೊಲೀಸರಿಗೆ ಶರಣಾಗಿಸಲು ದೀಪಕ್ ಮಾಡಿದ್ದ ಕಿಲಾಡಿ ಐಡಿಯಾ..!

Share :

Published June 21, 2024 at 10:09am

Update June 21, 2024 at 10:45am

    ರೇಣುಕಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್

    ದರ್ಶನ್​ ಗ್ಯಾಂಗ್​ ಅನ್ನ ಕೆದಕಿದಷ್ಟು ಮಾಹಿತಿ ಹೊರ ಬೀಳ್ತಿದೆ

    ಪರಪ್ಪನ ಅಗ್ರಹಾರದ ಜೈಲು ಸೇರಿರುವ ಪವಿತ್ರ ಗೌಡ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ನಟ ದರ್ಶನ್​ ಆ್ಯಂಡ್​ ಗ್ಯಾಂಗ್ ಮತ್ತೆ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನಷ್ಟು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹ ಮಾಡಲು ಕೋರ್ಟ್​ ಅನುಮತಿ ಮೇರೆಗೆ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಾರ್ತಿಕ್ ಅಲಿಯಾಸ್ ಕಪ್ಪೆ ಫೋನ್​ ಕಸಿದು ಬಚ್ಚಿಟ್ಟಿರುವ ಬಗ್ಗೆ ಆರೋಪಿ ದೀಪಕ್ ಬಾಯ್ಬಿಟ್ಟಿದ್ದಾನೆ. ಪೊಲೀಸರಿಗೆ ಕಾರ್ತಿಕ್ ಶರಣಾಗಲು ನಿರಾಕರಿಸಿದ್ದ. ಇದೇ ಕಾರಣಕ್ಕೆ ಫೋನ್ ಕಸಿದುಕೊಂಡು ಆಟವಾಡಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನ.. ಉತ್ತಮ ಆರೋಗ್ಯಕ್ಕಾಗಿ ಯೋಗ..!

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ ಪೋನ್ ಅನ್ನು ಆರೋಪಿ ದೀಪಕ್ ಬಚ್ಚಿಟ್ಟಿದ್ದನು. ಪೊಲೀಸರ ವಶದಲ್ಲಿರುವ ಆರೋಪಿ ದೀಪಕ್​ನನ್ನ ವಿಚಾರಣೆ ಮಾಡಲಾಗುತ್ತಿದೆ. ಈ ವೇಳೆ ಹತ್ಯೆ ನಡೆದ ಬಳಿಕ ಕಾರ್ತಿಕ್ ಪೋನ್ ಕಸಿದುಕೊಂಡು ಪಟ್ಟಣಗೆರೆಯ ಶೆಡ್​​ನಲ್ಲಿ ಬಚ್ಚಿಟ್ಟಿರುವುದಾಗಿ ಹೇಳಿದ್ದಾನೆ.

ಇದನ್ನೂ ಓದಿ: ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್​ ಟಾರ್ಚ್​ನಿಂದ ಶಾಕ್​.. ದೇಹ ಶೇಕಡಾ 30 ರಷ್ಟು ಸುಟ್ಟು ಹೋಗಿತ್ತು ಮಾಂಸಖಂಡ; ಹೇಗಿತ್ತು ಆ ಕರಾಳ?

ಬಳಿಕ ಶೇಡ್​ಗೆ ಹೋಗಿ ಮೊಬೈಲ್ ಪೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ದೀಪಕ್ ಶೆಡ್​ ಉಸ್ತುವಾರಿಯಾಗಿ ಎಲ್ಲವನ್ನು ನೋಡಿಕೊಳ್ಳುತ್ತಿದ್ದ. ಅಲ್ಲದೇ ರೇಣುಕಾಸ್ವಾಮಿ ಕೊಲೆ ನಡೆದ ಮೇಲೆ ಕಾರ್ತಿಕ್, ನಿಖಿಲ್, ಹಾಗೂ ಕೇಶವ್ ಮೂರ್ತಿ ಎನ್ನುವರನ್ನು ಪ್ರಕರಣ ಸಂಬಂಧ ಪೊಲೀಸರಿಗೆ ಶರಣಾಗಲು ಹಣದ ಆಮಿಷ ಒಡ್ಡಿ ಒಪ್ಪಿಸಿದ್ದ. ಹೀಗಾಗಿಯೇ ಕೊಲೆ ಆದ ಮೇಲೆ ಈ ಮೂವರು ಹೋಗಿ ಪೊಲೀಸರಿಗೆ ಶರಣಾಗಿದ್ದರು. ಈ ಎಲ್ಲ ಮಾಹಿತಿಗಳು ದೀಪಕ್​​ನನ್ನ ವಿಚಾರಣೆ ಮಾಡುವಾಗ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಪ್ಪೆ ಕಾರ್ತಿಕ್​​ನನ್ನ ಪೊಲೀಸರಿಗೆ ಶರಣಾಗಿಸಲು ದೀಪಕ್ ಮಾಡಿದ್ದ ಕಿಲಾಡಿ ಐಡಿಯಾ..!

https://newsfirstlive.com/wp-content/uploads/2024/06/DARSHAN_GANG.jpg

Load More