newsfirstkannada.com

ಆ ಜೈಲಿಗೆ ಮಾತ್ರ ಕಳಿಸ್ಬೇಡಿ.. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗ್ಯಾಂಗ್ ನರಳಾಟ; ಬೇಡಿಕೊಂಡಿದ್ದೇನು?

Share :

Published August 28, 2024 at 8:36pm

    ಡಿ ಗ್ಯಾಂಗ್​ ದಿಕ್ಕಾಪಾಲು! ಬೆಂಗಳೂರು ಜೈಲು ಬಿಡಲು ಸಂಕಟ!

    ‘ಇದೆಲ್ಲ ಬೇಕಿತ್ತಾ ನಂಗೆ’, ಅಧಿಕಾರಿಗಳ ಮುಂದೆ ದರ್ಶನ್ ಅಳಲು

    ಹಿಂಡಲಗಾ ಜೈಲಿಗೆ ಪ್ರದೂಷ್; ನನ್ನ ಕಳಸಬೇಡಿ ಎಂದು ಗೋಳಾಟ

ಬೆಂಗಳೂರು: ಒಂದೇ ಒಂದು ಫೋಟೋ ಜೈಲಲ್ಲಿ ರಾಯಲ್ ಆಗಿದ್ದ ಡಿ ಗ್ಯಾಂಗ್​ನ ದಿಕ್ಕಾಪಾಲು ಮಾಡಾಕಿದೆ. 3 ಮಂದಿ ಬಿಟ್ಟು ಡಿ ಗ್ಯಾಂಗ್​ನ ಎಲ್ಲಾ ಕ್ಯಾಂಡಿಡೇಟ್ಸ್​ ಒಂದೊಂದು ಜೈಲಿಗೆ ಶಿಫ್ಟ್​ ಆಗ್ತಿದ್ದಾರೆ. ಒಬ್ಬೊಬ್ಬರೂ ತಮ್ಮ ತಮ್ಮ ಜೈಲುಗಳ ಹೆಸರು ಕೇಳ್ತಿದ್ದಂಗೆ ಸಾರ್​ ನಮ್ಮನ್ನ ಬಿಟ್ಬಿಡಿ, ಇಲ್ಲೇ ಇದ್ ​ಬಿಡ್ತೀವಿ ಪ್ಲೀಸ್​ ಪ್ಲೀಸ್ ಅಂತಾ ಬೇಡಿಕೊಳ್ತಿದ್ದಾರೆ. ಜಡ್ಜ್​ ಎದುರು ಗೋಳಾಡ್ತಿದ್ದಾರೆ. ಛಿದ್ರ ಛಿದ್ರ ಆಗಿರೋ ಡಿ ಗ್ಯಾಂಗ್​​ನಲ್ಲಿ ಯಾಱರ ನರಳಾಟ ಹೇಗಿದೆ ಗೊತ್ತಾ?

ಇದನ್ನೂ ಓದಿ: ಮತ್ತೆ ಒಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಕ್ಯೂಟ್‌ ಜೋಡಿ; ಏನಿದು ಹೊಸ ಸುದ್ದಿ?

ಪರಪ್ಪನ ಅಗ್ರಹಾರ. ರೇಣುಕಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ದ ದರ್ಶನ್​ ಆ್ಯಂಡ್ ಗ್ಯಾಂಗ್​ ಪಾಲಿಗೆ ಅಕ್ಷರಶಃ ಸ್ಟಾರ್​ ಹೋಟೆಲ್ ಆಗಿತ್ತು. ಫೈವ್ ಸ್ಟಾರ್ ಜೈಲಿನಲ್ಲಿ ಕೇಳಿದ್ದೆಲ್ಲ ಸಿಗ್ತಿತ್ತು ಅನ್ನೋದನ್ನ ಎರಡು ಫೋಟೋಗಳು ಮತ್ತು ಒಂದು ವಿಡಿಯೋ ಬಯಲು ಮಾಡಿತ್ತು. ಇಷ್ಟು ದಿನ ಪರಪ್ಪನ ಅಗ್ರಹಾರದಲ್ಲಿ ಆರಾಮಾಗಿದ್ದ ದರ್ಶನ್ ಆ್ಯಂಡ್​ ಗ್ಯಾಂಗ್​ ಈಗ ದಿಕ್ಕಾಪಾಲಾಗ್ತಿದೆ. ದರ್ಶನ್ ರಾಜಾತಿಥ್ಯದ ಫೋಟೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಗೊಂಡ ಅಧಿಕಾರಿಗಳು ಡಿ ಗ್ಯಾಂಗ್​​ನ್ನ ಬೇರೆ ಜೈಲಿಗೆ ಶಿಫ್ಟ್ ಮಾಡೋದಕ್ಕೆ ಮನವಿ ಮಾಡಿಕೊಂಡಿದ್ರು.ಅದ್ರಂತೆ ಕೋರ್ಟ್​ ಕೂಡ ಅನುಮತಿ ಕೊಟ್ಟಿದ್ದು, ಪರಪ್ಪನ ಅಗ್ರಹಾರದಿಂದ ಬೇರೆ ಬೇರೆ ಜಿಲ್ಲೆಗಳ ಭೀಕರ ಜೈಲುಗಳಿಗೆ ಇವ್ರನ್ನ ಎತ್ತಂಗಡಿ ಮಾಡುವ ಕಾರ್ಯ ಶುರುವಾಗಿದೆ.

ಪರಪ್ಪನ ಅಗ್ರಹಾರದಲ್ಲಿ ದರ್ಶನ್​ ಆ್ಯಂಡ್​​ ಗ್ಯಾಂಗ್​ಗೆ ಸಿಕ್ಕ ಸಹಚರರೆಲ್ಲ ರೌಡಿಗಳು. ದರ್ಶನ್ ಅನ್ನೋ ಕಾರಣಕ್ಕೆ ದೊಡ್ಡ ದೊಡ್ಡ ಪಂಟರ್​​ಗಳೆಲ್ಲ ಪರಪ್ಪನ ಅಗ್ರಹಾರದಲ್ಲಿ ಡಿ ಗ್ಯಾಂಗ್ ಚಾಕರಿಗೆ ಏನೆಲ್ಲ ಬೇಕೋ ಎಲ್ಲವನ್ನು ವ್ಯವಸ್ಥೆ ಮಾಡಿದ್ರು. ಹಾಗಾಗಿ, ದರ್ಶನ್ ಸೇರಿದಂತೆ ಉಳಿದ ಆರೋಪಿಗಳೆಲ್ಲರು ಜೈಲಲ್ಲಿ ಹಾಯಾಗಿದ್ರು ಅನ್ನೋದು ಸಿಕ್ಕಿರೋ ಮಾಹಿತಿ. ಆದ್ರೀಗ ಅದೇ ರಾಜಾತಿಥ್ಯದ ಫೋಟೋ ಒಬ್ಬೊಬ್ಬರನ್ನೂ ಒಂದೊಂದು ದಿಕ್ಕಿಗೆ ತಳ್ಳಿದೆ. ಎಲ್ಲರ ಎದೆಯಲ್ಲೂ ನಡುಕು ಶುರುವಾಗಿದೆ. ಅದ್ರಲ್ಲೂ ದರ್ಶನ್​ ಕೂಡ ಅಧಿಕಾರಿಗಳ ಮುಂದೆ ತಮ್ಮ ನೋವು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ದರ್ಶನ್ ಬಳ್ಳಾರಿ ಜೈಲಿಗೆ ಹೋಗೋದು ಯಾವಾಗ? ಕಾನೂನು ಪ್ರಕ್ರಿಯೆ ಏನೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ!

‘ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ಅಳಲು!
ದರ್ಶನ್ ಒಬ್ಬ ಸ್ಟಾರ್ ನಟ. ಹಾಗಾಗಿ, ವಿಲ್ಸನ್​ ಗಾರ್ಡ್​ ನಾಗ ಅನ್ನೋ ನಟೋರಿಯಸ್​ ಸೇರಿದಂತೆ ದೊಡ್ಡ ದೊಡ್ಡ ರೌಡಿಗಳೆಲ್ಲಾ ದರ್ಶನ್​ಗೆ ರಾಜಾತಿಥ್ಯದ ವ್ಯವಸ್ಥೆ ಮಾಡಿದ್ರು. ಅದು ಒಳಗಿನ ಕರ್ಮಕಾಂಡ ಹೊರಗಿನ ಪ್ರಪಂಚಕ್ಕೆ ಗೊತ್ತಾಗಿದ್ದೇ ಬಂತು. ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ದರ್ಶನ್​ನ​​ ಬಳ್ಳಾರಿ ಜೈಲಿಗೆ ಬಿಸಾಡಲಾಗುತ್ತಿದೆ. ಬಳ್ಳಾರಿ ಜೈಲು ಅಂದ್ರೆ ಕೈದಿಗಳ ಎದೆಯಲ್ಲಿ ಭಯ ಹುಟ್ಟುತ್ತೆ. ಈಗ ದರ್ಶನ್​​ಗೂ ಇದೇ ಆತಂಕ ಕಾಡ್ತಿದೆ. ಯಾಕಂದ್ರೆ, ಪರಪ್ಪನ ಅಗ್ರಹಾರದಲ್ಲಿ ತನ್ನ ಪುಡಾರಿ ಪಟಾಲಂ ಜೊತೆ ಆರಾಮಾಗಿದ್ದ ದರ್ಶನ್​ಗೆ ಬಳ್ಳಾರಿಯಲ್ಲಿ ಒಂಟಿಯಾಗುವ ಭೀತಿ ಕಾಡ್ತಿದೆ. ಹೀಗಾಗಿ ದರ್ಶನ್​, ಬೆಂಗಳೂರಿಂದ ಬಳ್ಳಾರಿ ಜೈಲಿಗೆ ಹೋಗೋದಕ್ಕೆ ನಖ್ರಾ ಮಾಡಿದ್ನಂತೆ.. ಇಲ್ಲೇ ನಾನು ಅರಾಮಾಗಿದ್ದೇನೆ ಅಲ್ಲಿಗೆ ಯಾಕೆ, ಯಾವುದೇ ಕಾರಣಕ್ಕೂ ಬಳ್ಳಾರಿಗೆ ಹೋಗಲ್ಲ ಹೋಗಲ್ಲ ಹೋಗಲ್ಲ ಅಂತಾ ಅಧಿಕಾರಿಗಳ ಮುಂದೆ ದರ್ಶನ್​ ಹಠ ಹಿಡಿದಿದ್ದ ಅನ್ನೋ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ದರ್ಶನ್ ಹೋಗೋ ಬಳ್ಳಾರಿ ಜೈಲಲ್ಲೂ ಇದ್ದಾರೆ ನಟೋರಿಯಸ್ ರೌಡಿಗಳು; ಒಬ್ಬೊಬ್ಬರ ಇತಿಹಾಸ ಭಯಾನಕ!

ಹಿಂಡಲಗಾ ಜೈಲಿಗೆ ಪ್ರದೂಷ್: ನನ್ನ ಕಳಸಬೇಡಿ ಎಂದು ಗೋಳಾಟ

ಪ್ರದೋಷ್​, ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ 14 ನೇ ಆರೋಪಿ. ದರ್ಶನ್​ ಅತ್ಯಾಪ್ತ ಅಂತಲೂ ಕರೆಸಿಕೊಳ್ಳುವ ಪ್ರದೋಷ್​ ರೇಣುಕಸ್ವಾಮಿ ಮೃತದೇಹವನ್ನ ಬಿಸಾಡಿ, ಕೇಸ್ ಮುಚ್ಚಿ ಹಾಕುವ ಜವಾಬ್ದಾರಿ ಹೊತ್ಕೊಂಡಿದ್ದ ಎನ್ನುವ ಆರೋಪವಿದೆ.ಅಂತಹ ಪ್ರದೋಷ್​ ಇವತ್ತು ಪರಪ್ಪನ ಅಗ್ರಹಾರದಿಂದ ಹೆಜ್ಜೆ ಮುಂದಿಡೂದಕ್ಕೂ ನರಳಡ್ತಿದ್ದಾನೆ. ಪ್ರದೋಷ್​​ನನ್ನ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಮಾನು ಎತ್ತಲಾಗಿತ್ತು, ಜೈಲಿನ ಹೆಸರು ಕೇಳಿಯೇ ಪ್ರದೋಷ್​ ಎದೆ ನಡುಗಿ ಹೋಗಿದೆ. ಹೀಗಾಗಿ, ಕೋರ್ಟ್​ನಲ್ಲಿ ಜಡ್ಜ್​ ಮುಂದೆ ಪರಿಪರಿಯಾಗಿ ಬೇಡಿ ಕೊಂಡಿದ್ದಾನೆ. ಸ್ವಾಮಿ, ದಯವಿಟ್ಟು ನನ್ನ ಬೇರೆ ಜೈಲಿಗೆ ಕಳಿಸಬೇಡಿ ಅಂತ ಕೇಳಿಕೊಂಡಿದ್ದಾನೆ.

ನನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಬೇಡಿ.. ನಮ್ಮ ತಂದೆಗೆ ಕ್ಯಾನ್ಸರ್ ಇದೆ.ಇಲ್ಲಿ ನಮ್ಮ ಮನೆಯವರ ಭೇಟಿಗೆ ಬಿಡ್ತಿಲ್ಲ. ನಮ್ಮ ಮನೆಯಲ್ಲಿ ಕ್ಯಾನ್ಸರ್​ ಪೇಷೆಂಟ್​ನ​ ಅಡ್ಮಿಟ್ ಮಾಡಿದ್ದಾರೆ. ಹೀಗಿರುವಾಗ, ನಾನು ಬೇರೆ ಕಡೆ ಹೋದ್ರೆ ಕಷ್ಟ ಆಗುತ್ತೆ ಸರ್.ನನ್ನ ಬೆಂಗಳೂರು ಜೈಲಿನಲ್ಲೇ ಇಡೋದಕ್ಕೆ ಅವಕಾಶ ಮಾಡಿಕೊಡಿ ಎಂದು ಅವಲತ್ತು ತೋಡಿಕೊಂಡಿದ್ದಾನೆ.

ಕಲಬುರಗಿ ಜೈಲಿಗೆ ನಾಗರಾಜ್, ಇಲ್ಲಿಂದ ಹೋಗಲಾರೆ ಸಾರ್ ಎಂದು ಬೇಡಿಕೆ
ರೇಣುಕಾಸ್ವಾಮಿ ಕೊಲೆ ಕೇಸ್​​ನ 11ನೇ ಆರೋಪಿ ನಾಗರಾಜ್. ದರ್ಶನ್​ ಹೊರಗಿದ್ದಾಗ ಅವನ ಎ ಟು ಝಡ್​ ನೋಡಿಕೊಳ್ತಿದ್ದೋನು. ದರ್ಶನ್​ಗೆ ಇವ್ನೇ ಮ್ಯಾನೇಜರ್ ಆಗಿದ್ದ. ಇನ್ನು, ರೇಣುಕಾಸ್ವಾಮಿಯನ್ನ ಟ್ರ್ಯಾಕ್ ಮಾಡಿ ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್​​ಗೆ ಕರೆಸಿಕೊಂಡಿದ್ದೆ ಈ ನಾಗರಾಜ್ ಅಂತಾ ಹೇಳಲಾಗುತ್ತೆ​. ಇವ್ನನ್ನ ಕಲಬುರ್ಗಿ ಜೈಲಿಗೆ ಸ್ಥಳಾಂತರ ಮಾಡಲಾಗ್ತಿದೆ. ಅದು ಕೂಡ ಸಾಮಾನ್ಯ ಜೈಲಂತೂ ಅಲ್ವೇ ಅಲ್ಲ ಎನ್ನುವ ಮಾತುಗಳೂ ಇವೆ.ಮೊದ್ಲೇ ಮೈ ಬೆಂದುಹೋಗುವಂತಹ ಬಿಸಿಲು. ಅದರ ಮಧ್ಯೆ ನಾಲ್ಕು ಕಂಬಿಗಳ ಹಿಂದೆ ಒಂಟಿ ಜೀವನ ಹೇಗೆ? ಇನ್ಮೇಲೆ ಬಾಸ್ ಇಲ್ಲದೇ ಬದುಕೋದು ಹೇಗೆ ಅನ್ನೋದೇ ನಾಗನ ಟೆನ್ಷನ್​..ಕಲಬುರಗಿ ಜೈಲಿನ ಹೆಸರು ಕೇಳಿಯೇ ಬೆಚ್ಚಿ ಬಿದ್ದಿರುವ ನಾಗರಾಜ್ ಕೂಡ ದಯವಿಟ್ಟು ಅಲ್ಲಿಗೆ ಕಳಿಸಬೇಡಿ ಸಾರ್ ಅಂತ ಜಡ್ಜ್ ಮುಂದೆ ಕೇಳಿಕೊಂಡಿದ್ದಾನಂತೆ.

ಅಮಾಯಕರಿಗೆ ಶೆಡ್​ ರುಚಿಯ ತೋರಿಸುತ್ತಿದ್ದವನಿಗೆ ವಿಜಯಪುರ ಜೈಲು!
ಪಟ್ಟಣಗೆರೆ ಶೆಡ್ ಅಂದ್ರೆ ನೆನಪಾಗೋದೇ ಈ ವಿನಯ್ ಹೆಸರು. ಆರ್ ಆರ್ ನಗರದ ಸ್ಟೋನಿ ಬ್ರೂಕ್​​ನ ಮಾಲೀಕ ವಿನಯ್ ಇವತ್ತು ದರ್ಶನ್​ಗೆ ಸಹಾಯ ಮಾಡಲು ಹೋಗಿ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಸೇರಿದ್ದಾನೆ. ಆದ್ರೀಗ ಈ ವಿನಯ್​ಗೂ ಕೂಡ ಸಂಕಷ್ಟ ಎದುರಾಗಿದ್ದು, ಗುಮ್ಮಟ ನಗರಿ ವಿಜಯಪುರಕ್ಕೆ ವಿನಯ್​​ನ್ನ ಶಿಫ್ಡ್ ಮಾಡಲಾಗ್ತಿದೆ.

ಇದನ್ನೂ ಓದಿ: ನಟ ದರ್ಶನ್‌ ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿಲ್ಲ ಯಾಕೆ? ಇಲ್ಲಿದೆ 8 ಕಾರಣಗಳು!

ವಿಜಯಪುರ ಜೈಲು ದರ್ಗಾ ಜೈಲು ಅಂತಲೇ ಫೇಮಸ್​. ಪರಪ್ಪನ ಅಗ್ರಹಾರದಂತೆ ವಿಜಯಪುರ ಜೈಲಿನಲ್ಲಿ ವಿಶೇಷ ಸೆಲ್​ಗಳಿಲ್ಲ. ಜೈಲಿನಲ್ಲಿ 50 ಕ್ಕೂ ಹೆಚ್ಚು ಸಾಮಾನ್ಯ ಸೆಲ್​​ಗಳೇ ಇವೆ. ಒಂದು ಸೆಲ್​ನಲ್ಲಿ ಮೂರರಿಂದ ನಾಲ್ಕು ಜನ ಕೈದಿಗಳನ್ನ ಇಡಲಾಗುತ್ತೆ. ಬನ್ನಂಜೆ ರಾಜ ಸಹಚರರು, ರವಿ ಪೂಜಾರಿ ಸಹಚರರು, ಹೆಬ್ಬೆಟ್ಟು ಮಂಜ, ಕೊರಂಗು ಕೃಷ್ಣಾ, ಭೀಮಾತೀರದ ಹಂತಕರು ಸೇರಿದಂತೆ ನಟೋರಿಯಸ್​​ಗಳನ್ನ ಇದೇ ದರ್ಗಾ ಜೈಲಿನಲ್ಲಿ ಇಡಲಾಗಿತ್ತು. ಈಗ ರೇಣುಕಸ್ವಾಮಿ ಕೊಲೆ ಕೇಸ್​ನ 10 ನೇ ಆರೋಪಿ ವಿನಯ್​​ನನ್ನ ದರ್ಗಾ ಜೈಲಿಗೆ ಶಿಫ್ಟ್​ ಮಾಡಲಾಗ್ತಿದ್ದು, ಜೈಲಿನ ಹೆಸರು ಕೇಳಿ ವಿನಯ್​ ಗಡ ಗಡ ನಡುಗಿ ಹೋಗಿದ್ದಾನೆ.

ಶಿವಮೊಗ್ಗ ಜೈಲಿಗೆ ಲಕ್ಷ್ಮಣ, ನಾ ಹೋಗಲಾರೆ ಎಂದು ರಾಗ
ದರ್ಶನ್​ ಕಾರು ಚಾಲಕ ಲಕ್ಷ್ಮಣ​ ಕೂಡ ಈ ಕೊಲೆ ಕೇಸ್​​ನಲ್ಲಿ ಅಂದರ್ ಆಗಿದ್ದಾನೆ.. A 15 ಆಗಿ ಪರಪ್ಪನ ಅಗ್ರಹಾರದಲ್ಲಿದ್ದ ಲಕ್ಷಣ್​​ನನ್ನ ಶಿವಮೊಗ್ಗದ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಲಕ್ಷಣ್​ ಕೂಡ ಪರಪ್ಪನ ಅಗ್ರಹಾರ ಬಿಟ್ಟು ಹೋಗೋದಕ್ಕೆ ಭಯ ಬಿದ್ದಿದ್ದಾನೆ. ಇಲ್ಲಿ ಡಿ ಗ್ಯಾಂಗ್​ ಜೊತೆ ಆರಾಮಾಗಿದ್ದವನು ಈಗ ಗ್ಯಾಂಗ್​​ನಿಂದ ದೂರ ಆಗೋದಕ್ಕೆ ಆಗಲ್ಲ.. ನನ್ನ ಕಳಿಸಬೇಡಿ ಸಾರ್ ಅಂತ ಜಡ್ಡ್​ ಮುಂದೆ ಪರಿ ಪರಿಯಾಗಿ ಕೇಳಿ ಕೊಂಡಿದ್ದಾನೆ. ಆದ್ರೆ ಜಡ್ಜ್ ಮುಂದೆ ನೋಡೋಣ. ಕುಟುಂಬದ ಭೇಟಿಗೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ಜೈಲಿಗೆ ಮಾತ್ರ ಕಳಿಸ್ಬೇಡಿ.. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗ್ಯಾಂಗ್ ನರಳಾಟ; ಬೇಡಿಕೊಂಡಿದ್ದೇನು?

https://newsfirstlive.com/wp-content/uploads/2024/06/darshan34.jpg

Load More