newsfirstkannada.com

ಪವಿತ್ರಾ ಗೌಡ ಲಿಪ್ಸ್‌ಸ್ಟಿಕ್, ಮೇಕಪ್‌ನಿಂದ ಮಹಿಳಾ PSIಗೆ ಫಜೀತಿ; ಕಸ್ಟಡಿಯಲ್ಲೂ ಕರ್ತವ್ಯ ಲೋಪ!

Share :

Published June 26, 2024 at 1:30pm

    ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಆರೋಪಿಯಾದ ಪವಿತ್ರಾ ಗೌಡ

    ಮಹಿಳಾ ಪಿಎಸ್​ಐಗೆ ನೋಟಿಸ್ ಕಳಿಸಿದ ಡಿಸಿಪಿ ಗಿರೀಶ್ ನಾಯ್ಕ್

    ಮಹಜರು ವೇಳೆ ಕರ್ತವ್ಯ ಲೋಪವೆಸಗಿದರಾ ಮಹಿಳಾ ಪಿಎಸ್​ಐ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿ ಆಗಿರುವ ಪವಿತ್ರಾ ಗೌಡ ಹಾಗೂ ದರ್ಶನ್ ಸೇರಿದಂತೆ ಇನ್ನುಳಿದ ಆರೋಪಿಗಳು ಪರಪ್ಪನ ಜೈಲು ಪಾಲಾಗಿದ್ದಾರೆ. ಇದೀಗ ಮನೆ ಮಹಜರು ಮಾಡಲು ಆರ್​.ಆರ್​ ನಗರದ ಮನೆಗೆ ಕರೆದುಕೊಂಡು ಹೋಗಿದ್ದಾಗ ಆರೋಪಿ ಪವಿತ್ರಾ ಗೌಡ ಲಿಪ್ಸ್​​ಸ್ಟಿಕ್ ಹಚ್ಚಿಕೊಂಡು ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ವಿಜಯನಗರದ ಮಹಿಳಾ ಪಿಎಸ್​ಐ ನೇತ್ರಾಗೆ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯದಲ್ಲಿ ಬಿರುಕು.. 15 ವರ್ಷದ ಸಂಸಾರಕ್ಕೆ ಡಿವೋರ್ಸ್​​ ಕೊಡಲು ತಯಾರಿ..?

ಎ1 ಆರೋಪಿಯಾಗಿರುವ ಪವಿತ್ರಾ ಗೌಡಳನ್ನ ಜೂನ್ 15ರಂದು ಸ್ಥಳ ಮಹಜರು ಮಾಡಲೆಂದು ಆರ್​.ಆರ್​ ನಗರದಲ್ಲಿರುವ ಆಕೆಯ ಮನೆಗೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ವೇಳೆ ಮನೆ ಪವಿತ್ರಾ ಗೌಡ ಲಿಪ್ಸ್​​ಸ್ಟಿಕ್ ಹಚ್ಚಿಕೊಂಡು, ಮುಖಕ್ಕೆ ಮೇಕಪ್ ಮಾಡಿಕೊಂಡು ಬಂದಿದ್ದರು. ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ? ಇಲ್ಲಿ ಕರ್ತವ್ಯ ಲೋಪವಾಗಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ: ಸ್ಕೂಲ್ ಫೀಸ್ ಕಟ್ಟಲು ಆಗದೇ ಮಕ್ಕಳ ಶಾಲೆ ಬಿಡಿಸಿದ ತಾಯಿ.. ದರ್ಶನ್​ ಗ್ಯಾಂಗ್​ ಮಾಡಿದ ತಪ್ಪಿಗೆ ಮಕ್ಕಳಿಗೂ ಶಿಕ್ಷೆ

ಈ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್​ಐಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ನಾಯ್ಕ್ ಅವರು ನೋಟಿಸ್ ನೀಡಿದ್ದಾರೆ. ಈ ನೋಟಿಸ್​ಗೆ ಸೂಕ್ತವಾದ ವಿವರಣೆ ಕೊಡಿ ಎಂದು ತಿಳಿಸಲಾಗಿದೆ. ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಮಹಜರು ಮಾತ್ರ ಮಾಡಿಸಿಕೊಂಡು ಬರಬೇಕು. ಅದು ಬಿಟ್ಟು ಮೇಕಪ್​ ಮಾಡಿಕೊಳ್ಳಲು ಸಮಯ ಕೊಟ್ಟಿದ್ದು ಯಾಕೆ, ಲಿಪ್ಸ್​​ಸ್ಟಿಕ್ ಹಚ್ಚಿಕೊಳ್ಳಲು ಯಾಕೆ ಬಿಟ್ಟರು ಎಂಬ ಪ್ರಶ್ನೆ ಉದ್ಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಗೌಡ ಲಿಪ್ಸ್‌ಸ್ಟಿಕ್, ಮೇಕಪ್‌ನಿಂದ ಮಹಿಳಾ PSIಗೆ ಫಜೀತಿ; ಕಸ್ಟಡಿಯಲ್ಲೂ ಕರ್ತವ್ಯ ಲೋಪ!

https://newsfirstlive.com/wp-content/uploads/2024/06/PAVITRA_GOWDA-1.jpg

Load More