ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದ ಕೋರ್ಟ್
ಅಂದು ಸೆರೆಂಡರ್ ಆಗಲು ಹೇಳಿದವ್ರು ಇಂದು ಗಪ್ ಚುಪ್
ರಿಲೀಸ್ಗೆ ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಕೇಳಿರುವ ಕೋರ್ಟ್
ತುಮಕೂರು: ನ್ಯಾಯಾಲಯದಿಂದ ಜಾಮೀನು ಸಿಕ್ಕರೂ ರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳು ಇನ್ನು ತುಮಕೂರು ಜೈಲಿನಲ್ಲೇ ಉಳಿದುಕೊಂಡಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ನಂತರ ದರ್ಶನ್ ಗ್ಯಾಂಗ್ನ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಆರೋಪಿಗಳಾದ ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿಗೆ ಕಳೆದ ಸೋಮವಾರ ಬೇಲ್ ಸಿಕ್ಕಿತ್ತು. ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದ್ರೆ, ನಿಖಿಲ್ ನಾಯಕ್ ಹಾಗೂ ಕಾರ್ತಿಕ್ಗೆ 57ನೇ ಸಿಸಿಹೆಚ್ ಕೋರ್ಟ್ ಬೇಲ್ ನೀಡಿತ್ತು. 1 ಲಕ್ಷ ರೂಪಾಯಿ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಾರದು, ವಿಚಾರಣೆಗೆ ಹಾಜರಾಗಬೇಕು ಎನ್ನುವ ಷರತ್ತಿನ ಮೇಲೆ ಜಾಮೀನು ನೀಡಿತ್ತು.
ಇದನ್ನೂ ಓದಿ: ದರ್ಶನ್ಗೆ ಜೈಲಿನಲ್ಲೇ IT ಅಧಿಕಾರಿಗಳಿಂದ ಡ್ರಿಲ್, ಇಂದು ಕೂಡ ವಿಚಾರಣೆ.. ನಟನಿಗೆ ಬೇಲ್ ಸಿಗುತ್ತಾ?
ಈವರೆಗೂ ಶ್ಯೂರಿಟಿ ಯಾರು ಕೂಡ ಹಾಕದ ಕಾರಣ ಮೂವರು ಆರೋಪಿಗಳು ಜೈಲಿನಲ್ಲೇ ಇದ್ದಾರೆ. ಜಾಮೀನು ಮಂಜುರಾದರೂ ಶ್ಯೂರಿಟಿಗೆ ವ್ಯವಸ್ಥೆಯಾಗದೆ ಪರದಾಡುವಂತಾಗಿದೆ. ಆರೋಪಿಗಳ ಕಷ್ಟದ ಕಾಲದಲ್ಲಿ ಇತರರು ಕೈಕೊಟ್ಟಿದ್ದಾರೆ. ಕೈ ಹಿಡಿಯಬಹುದು ಅಂದುಕೊಂಡವರಿಂದ ಸಹಾಯಹಸ್ತ ಸಿಗದೆ ಸಮಸ್ಯೆಗೆ ಸಿಲುಕಿದಂತೆ ಆಗಿದೆ. ಹಣದಾಸೆಗಾಗಿ ಕೇಸ್ನಲ್ಲಿ ಸಿಲುಕಿ ಮೂವರು ಆರೋಪಿಗಳು ಜೈಲು ಸೇರಿದ್ದರು.
ಇದನ್ನೂ ಓದಿ: ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್.. ಐಟಿ ಇಲಾಖೆಯಿಂದ ಬಿಗ್ ಶಾಕ್ ಎದುರಾಗುತ್ತಾ?
ತಲಾ 5 ಲಕ್ಷ ಹಣ ಸಿಗುತ್ತೆ ಎಂದು ಪ್ರಕರಣವನ್ನು ಮೈಮೇಲೆ ಎಳೆದುಕೊಂಡಿದ್ದರು. ರೇಣುಕಾಸ್ವಾಮಿ ಶವ ಸಾಗಾಟ ಮಾಡಿ, ಹಣಕಾಸು ವಿಚಾರವಾಗಿ ತಾವೇ ಹತ್ಯೆ ಮಾಡಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದರು. ಅಂದು ಸೆರೆಂಡರ್ ಆಗಲು ಹೇಳಿದ್ದವರು ಇಂದು ಗಪ್ಚುಪ್ ಆಗಿದ್ದಾರೆ. ಸಾಕ್ಷ್ಯನಾಶ ಆರೋಪದಡಿ ಮೂವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ಆರೋಪಿಗಳಿಗೆ ಜಾಮೀನು ಮಂಜೂರು ಆಗಿತ್ತು. ಈಗ ಜೈಲಿನಿಂದ ಹೊರಬರಲಾಗದೇ ಹೆಣಗಾಡುತ್ತಿದ್ದಾರೆ. ಶ್ಯೂರಿಟಿ ವ್ಯವಸ್ಥೆ ಆಗದಿದ್ದಕ್ಕೆ ತುಮಕೂರು ಜೈಲಿನಲ್ಲೇ ಮೂವರು ಇದುವರೆಗೂ ಇದ್ದಾರೆ. ವಕೀಲರ ಮೂಲಕ ಶ್ಯೂರಿಟಿ ವ್ಯವಸ್ಥೆಯನ್ನು ಆರೋಪಿಗಳು ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ