Advertisment

ಅಮ್ಮನ ಕಾಣಲು ಹಂಬಲಿಸಿದ ದಾಸ -ಸಹೋದರ ದಿನಕರ ಬಳಿ ದರ್ಶನ್ ಕೇಳಿದ್ದೇನು?

author-image
Ganesh
Updated On
ಅಮ್ಮನ ಕಾಣಲು ಹಂಬಲಿಸಿದ ದಾಸ -ಸಹೋದರ ದಿನಕರ ಬಳಿ ದರ್ಶನ್ ಕೇಳಿದ್ದೇನು?
Advertisment
  • ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್ ಜೈಲು ಸೇರಿದ್ದಾರೆ
  • ದರ್ಶನ್ ಜೊತೆ ಮಾತುಕತೆ ನಡೆಸಿದ ವಿಜಯಲಕ್ಷ್ಮಿ
  • 24 ನಿಮಿಷಗಳ ಕಾಲ ಮಾತುಕತೆ ನಡೆಸಿದ ವಿಜಯಲಕ್ಷ್ಮಿ

ಬಳ್ಳಾರಿ ಜೈಲಿನಲ್ಲಿರುವ ದರ್ಶನ್​​ಗೆ ಅಮ್ಮನ ಕಾಣುವ ಹಂಬಲ ಶುರುವಾಗಿದೆಯಂತೆ! ಇಂದು ವಿಜಯಲಕ್ಷ್ಮಿ, ವಕೀಲರು ಸೇರಿದಂತೆ ಕುಟುಂಬದ ಕೆಲವು ಸದಸ್ಯರು ದರ್ಶನ್​ನನ್ನು ಭೇಟಿಯಾದರು. ಈ ವೇಳೆ ಅಮ್ಮನ ಬಗ್ಗೆ ದರ್ಶನ್ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

Advertisment

ಅಂದ್ಹಾಗೆ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿ ಇಂದಿಗೆ 15 ದಿನ. ಪೊಲೀಸರು ಪ್ರಕರಣ ಸಂಬಂಧ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದೇ ವಿಚಾರವಾಗಿ ದರ್ಶನ್ ಜೊತೆ ಮಾತುಕತೆ ನಡೆಸಲು ಅವರ ಕುಟುಂಬ ಬಳ್ಳಾರಿ ಜೈಲಿಗೆ ಆಗಮಿಸಿತ್ತು. ಈ ವೇಳೆ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಹಾಗೂ ವಕೀಲರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಬರೋಬ್ಬರಿ 24 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ:ಬಳ್ಳಾರಿ ಜೈಲಲ್ಲಿ ದರ್ಶನ್ ಭೇಟಿಯಾದ ಸುಶಾಂತ್ ನಾಯ್ಡು; ಯಾರಿವರು..?

publive-image

ಸಹೋದರನ ಬಳಿ ಅಮ್ಮನ ಬಗ್ಗೆ ದರ್ಶನ್ ಕೇಳಿದ್ದಾರೆ. ಅಮ್ಮ ಬರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ನಿನ್ನೆಯೇ ತಾಯಿ ಮೀನಾ ತೂಗುದೀಪ ಜೈಲಿಗೆ ಬಂದು ಮಾತನಾಡಿಸಿಕೊಂಡು ಹೋಗಬೇಕಿತ್ತು. ಕಾರಣಾಂತರಗಳಿಂದ ನಿನ್ನೆಯ ಜೈಲು ಭೇಟಿ ಕ್ಯಾನ್ಸಲ್ ಆಗಿದೆ. ಇವತ್ತು ಪತ್ನಿ ಜೊತೆ ತಾಯಿ ಬರುವ ನಿರೀಕ್ಷೆ ಇತ್ತು. ಆದರೆ ತಾಯಿ ಮೀನಾ ತೂಗುದೀಪ ಬಾರದೆ ಇರೋದ್ರಿಂದ ದರ್ಶನ್ ಮುಖ ಮತ್ತಷ್ಟು ಸಪ್ಪೆಯಾಗಿದೆ ಎನ್ನಲಾಗಿದೆ. ಇನ್ನು ಬಳ್ಳಾರಿಯ ಜೈಲಿನ ವಾತಾವರಣಕ್ಕೆ ದರ್ಶನ್ ಸೊರಗಿದಂತೆ ಕಾಣ್ತಿದೆ.

ಇದನ್ನೂ ಓದಿ:24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್​​ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment